ಮಡಿಕೇರಿ(ಜ.11): ಬಸ್‌ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಶನಿವಾರ ಮುಂಜಾನೆ ಘಟನೆ ನಡೆದಿದೆ.

ಮಡಿಕೇರಿ ಮಂಗಳೂರು ಹೆದ್ದಾರಿಯ ಕೊಯನಾಡು ದೇವರಕೊಲ್ಲಿ ನಡುವೆ ಘಟನೆ ಸಂಭವಿಸಿದೆ. ಪ್ರವಾಸಿಗರ ಬೈಕ್ ಸರ್ಕಾರಿ ಬಸ್ಸಿನ ಮುಂಭಾಗಕ್ಕೆ ಡಿಕ್ಕಿಯಾಗಿದೆ. ಬೈಕ್‌ನಲ್ಲಿದ್ದ ಇಬ್ಬರು ಪ್ರವಾಸಿಗರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಡಿಕೇರಿಯಲ್ಲಿ ಮಗುಚಿ ಬಿದ್ದ ಬೆಂಗಳೂರು-ಎರ್ನಾಕುಲಂ ಐರಾವತ ಬಸ್..!

ಸ್ಥಳಕ್ಕೆ ಕೊಡಗು ಎಸ್ಪಿ, ಮಡಿಕೇರಿ‌ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಕ್ ಪಶ್ಚಿಮ‌ ಬಂಗಾಳ‌ ನೋಂದಣಿಯನ್ನು ಹೊಂದಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಸ್ ಅಪಘಾತ: ಕಾಸರಗೋಡಿನ ಚೆಂಡೆ ಕಲಾವಿದರಿಗೆ ಗಾಯ