ಬೆಳಗಾವಿ, (ಸೆ.14): ಗಣೇಶ ಮೂರ್ತಿ ವಿಸರ್ಜನೆ ಬಂದೋಬಸ್ತ್‌ ಕರ್ತವ್ಯ ನಿಮಿತ್ತ ಬೆಳಗಾವಿಗೆ ಬಂದಿದ್ದ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ.

ಮೈಸೂರು ಸಿಸಿಬಿ ಘಟಕದಲ್ಲಿ ಪೇದೆಯಾಗಿದ್ದ ಪ್ರಮೋದ್ (28) ನೇಣಿಗೆ ಶರಣಾಗಿದ್ದರೆ, ತುಮಕೂರು ಮಹಿಳಾ ಠಾಣೆಯ ಹವಾಲ್ದಾರ ಮಹೇಶ್ ಸಿಂಗ್ ಗೋಪಾಲಸಿಂಗ್ (44) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

ಬೆಳಗಾವಿಯ ಆಟೋನಗರದಲ್ಲಿರುವ ಕೆಐಡಿಬಿ ಭವನದಲ್ಲಿ ತಂಗಿದ್ದ ಪ್ರಮೋದ್, ಶೌಚಾಲಯದಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮತ್ತೊಂದೆಡೆ ಗುರುವಾರ ಮಧ್ಯಾಹ್ನ ಅನ್ಯಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹೇಶ್ ಸಿಂಗ್ ಚಿಕಿತ್ಸೆ ಫಲಿಸದೇ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.