ಹುಕ್ಕೇರಿ(ಜ.23): ತಮ್ಮ ತಮ್ಮ ಪತಿಯರು ಬೇರೆ ಅನ್ಯ ಮಹಿಳೆಯರೊಂದಿಗೆ ಅನೈತಿಕ ಸಂಬಂಧದಲ್ಲಿ ಇದ್ದಾಗಲೇ ಸ್ಥಳಕ್ಕೆ ಧಾವಿಸಿದ ಪತ್ನಿಯರು ಸ್ಥಳೀಯರ ಜತೆಗೆ ಧರ್ಮದೇಟು ನೀಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಳ್ಳದಕೇರಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಹಂಜ್ಯಾನಟ್ಟಿ ಹಾಗೂ ಮಸರಗುಪ್ಪಿ ಯುವಕರಿಬ್ಬರು ಈ ಪ್ರದೇಶದಲ್ಲಿ ವಾಸವಿದ್ದ ಮಹಿಳೆಯರ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಈ ಬಗ್ಗೆ ಅವರ ಪತ್ನಿಯರಿಗೆ ಸಂಶಯವಿತ್ತು. ಸೋಮವಾರ ರಾತ್ರಿ ಇವರಿಬ್ಬರು ಪುರುಷರೂ ಅನ್ಯ ಮಹಿಳೆಯರೊಂದಿಗೆ ಏಕಾಂತದಲ್ಲಿ ಮೈಮರೆತಿದ್ದ ವೇಳೆಯಲ್ಲೇ ಅವರ ಪತ್ನಿಯರು ದಾಳಿ ನಡೆಸಿದ್ದು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಇಬ್ಬರೂ ಪುರುಷರಿಗೆ ಅಲ್ಲಿನ ಸ್ಥಳೀಯರು ಸೇರಿದಂತೆ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಹುಕ್ಕೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದರೂ ರಾತ್ರಿಯಾದರೂ ಪ್ರಕರಣ ದಾಖಲಾಗಿರಲಿಲ್ಲ.