ಇಳಕಲ್ಲ: ಬೈಕ್‌ಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಇಬ್ಬರು ಸಾವು, ಮೂವರಿಗೆ ಗಾಯ
ಬೈಕ್‌ಗೆ ಲಾರಿ ಹಾಯ್ದು ಇಬ್ಬರ ದುರ್ಮರಣ| ಮೂವರು ಬೈಕ್ ಸವಾರರು ಸ್ವಗ್ರಾಮವಾದ ಅಂಕನಾಳದಿಂದ ಇಳಕಲ್ಲ ನಗರಕ್ಕೆ ಬರುವಾಗ ನಡೆದ ದುರ್ಘಟನೆ| ಈ ಸಂಬಂಧ ಇಳಕಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಇಳಕಲ್ಲ(ನ.11): ರಸ್ತೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ನಗರದ ಹೊರವಲಯದಲ್ಲಿ ಸಂಭವಿಸಿದೆ. ಗೊರಬಾಳ ಕ್ರಾಸ್ ಹತ್ತಿರ ಮಂಗಳವಾರ ಬೈಕ್‌ಗೆ ಲಾರಿ ಹಾಯ್ದು ಲಿಂಗಸೂರ ತಾಲೂಕಿನ ಅಂಕನಾಳ ಗ್ರಾಮದ ಭುವನೇಶ್ವರಿ (ದ್ಯಾಮವ್ವ) ಗಂಡ ಸಂತೋಷ ಗೌಡರ (22) ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಬೀರಪ್ಪ ಕುರಿ, ರತ್ನವ್ವ ಕುರಿ ಗಾಯಗೊಂಡಿದ್ದು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂವರು ಬೈಕ್ ಮೇಲೆ ಸ್ವಗ್ರಾಮವಾದ ಅಂಕನಾಳದಿಂದ ಇಳಕಲ್ಲ ನಗರಕ್ಕೆ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಇಳಕಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಜೊತೆ ಬಿಜೆಪಿ ಶಾಸಕನ ಅನುಚಿತ ವರ್ತನೆ; ವಿಡಿಯೋ ವೈರಲ್
ಗುಗಲಮರಿ ಕ್ರಾಸ್ ಹತ್ತಿರ ಸೋಮವಾರ ಸಂಜೆ 7ಕ್ಕೆ ಬೈಕ್ ಸವಾರ ಡಿಕ್ಕಿ ಹೊಡಿಸಿದ್ದರಿಂದ ಬಹಿರ್ದೆಸೆಗೆ ಹೊರಟಿದ್ದ ಇಳಕಲ್ಲ ತಾಲೂಕಿನ ಗುಗಲಮರಿ ಗ್ರಾಮದ ಮಹಾಂತೇಶ ತಂದಿ ದುರಗಪ್ಪ ನಿರಡ್ಡಿ (58) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರನಿಗೂ ತೀವ್ರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.