ನವಲಗುಂದ(ಜೂ. 27): ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ-ನವಲಗುಂದ ಮಧ್ಯದ ಕಾಲವಾಡ ಕ್ರಾಸ್‌ ಬಳಿ ಲಾರಿ ಮತ್ತು ಟಾಟಾ ಏಸ್‌ ನಡುವೆ ಮುಖಾಮುಖಿ ಡಿಕ್ಕಿ ಆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ಹುಬ್ಬಳ್ಳಿ ಮೂಲದ ಚಾಲಕ ಮಹಾದೇವ ಚಂದ್ರಕಾಂತ ಅಮಾಸಿ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಿಮ್ಸ್‌ನಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನರಗುಂದ ಮೂಲದ ಗಣಪತಿ ಫಕ್ಕೀರಪ್ಪ ಕದಂ (26) ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಮೂಲದ ಸಂಜೀವ ಚಂದ್ರಕಾಂತ ಕೊರವರ (26) ಗಂಭೀರ ಸ್ಥಿತಿಯಲ್ಲಿದ್ದಾರೆ.

ಧಾರವಾಡ: ಮೊರಬ ಕೊರೋನಾ ಹಾಟ್‌ಸ್ಪಾಟ್‌, 41 ಪ್ರಕರಣ ದೃಢ

ತಾಲೂಕಿನ ಕಾಲವಾಡ ಕ್ರಾಸ್‌ ಬಳಿ ನರಗುಂದದಿಂದ ಟಾಟಾ ಏಸ್‌ ವಾಹನವು ಹುಬ್ಬಳ್ಳಿಯತ್ತ ಹೊರಟಿತ್ತು ಹಾಗೂ ಹುಬ್ಬಳ್ಳಿಯಿಂದ ನವಲಗುಂದ ಕಡೆಗೆ ಲಾರಿ ಆಗಮಿಸುತ್ತಿತ್ತು. ಇವೆರಡರ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹುಬ್ಬಳ್ಳಿ ಮೂಲದ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟರೆ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ತನಿಖೆ ಮುಂದುವರೆದಿದೆ.