ಹಾವೇರಿ, [ಜೂ.22]: ಮದುವೆ ಮಾಡಿಕೊಂಡು ಸುಂದರ ಸಂಸಾರ ನಡೆಸುವ ಕನಸು ಹೊತ್ತು ಹುಡಗಿಯನ್ನು ನೋಡೋಕೆ ಹೋಗುತ್ತಿದ್ದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಅಷ್ಟೇ ಅಲ್ಲದೇ ಮಗನಿಗೆ ಮದ್ವೆ ಮಾಡಲು ಸೊಸೆ ನೋಡಲು ಹೋಗುತ್ತಿದ್ದ ಯುವಕನ ತಂದೆಯೂ ಸಹ ಮೃತಪಟ್ಟಿದ್ದಾರೆ.

ಈ ದಾರುಣ ಘಟನೆ ಇಂದು [ಶನಿವಾರ] ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಕ್ರಾಸ್ ಬಳಿ ನಡೆದಿದೆ. ಜಗದೀಶ್‌ಗೆ ಹುಡುಗಿ ನೋಡಲು ತೆರಳುತ್ತಿದ್ದಾಗ ಸಾರಿಗೆ ಬಸ್ಸೊಂದು ಡಿಕ್ಕಿ ಹೊಡೆದೆ. ಪರಿಣಾಮ ಬೈಕ್‌ನಲ್ಲಿದ್ದ ಜಗದೀಶ್ ದೀಪಾಲಿ‌(28) ಮತ್ತು ತಂದೆ ಹನುಮಂತಪ್ಪ ದೀಪಾಲಿ (60) ಮೃತಟ್ಟಿದ್ದಾರೆ. 

ಮೃತರು ಮೂಲತಃ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದವರು. ಅಪಘಾತದ ನಂತರ ಚಾಲಕ, ಬಸ್ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.