ಮಂಡ್ಯ(ಮಾ.19): ಮಂಡ್ಯದಲ್ಲಿ ಕೆಇಬಿ ನೌಕರರಿಬ್ಬರಿಗೆ ಕೊರೊನಾ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಜೆಇ ಮೇಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಕೃಷ್ಣೇಗೌಡರಿಂದ ಮೇಲಾಧಿಕಾರಿಗೆ ಪತ್ರ ಬರೆದು ಮಾಹಿತಿ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಘಟನೆ ನಡೆದಿದ್ದು, ಕಿಕ್ಕೇರಿ ಶಾಖೆಯ ಜೆಇ ಕೃಷ್ಣೇಗೌಡ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕಿಕ್ಕೇರಿ ಹೋಬಳಿಯಲ್ಲಿ  ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯಗಳಲ್ಲಿ ನೆಲೆಸಿದ್ದು ಕೊರೊನಾ ಭೀತಿ ಉಂಟಾಗಿದೆ.

ಮಡಿಕೇರಿಯಲ್ಲಿ ಮೊತ್ತೊಬ್ಬ ವ್ಯಕ್ತಿಗೆ ಕೊರೋನಾ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆ

ಕಿಕ್ಕೇರಿ ಹೋಬಳಿಗಳ ಜನತೆ ಮುಂಬೈನಲ್ಲಿ ನೆಲೆಸಿದ್ದು, ಕೇರಳದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಿಕ್ಕೇರಿಗೆ ಜನರು ಆಗಮಿಸುತ್ತಾರೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಕೆಲಸ ಮಾಡಲು ನೌಕರರು ಭಯ ಪಡುತ್ತಿದ್ದಾರೆ.

ಶಾಖೆಯ ಇಬ್ಬರು ನೌಕರರಲ್ಲಿ ಕೊರೊನಾ ಸೋಂಕು ಶಂಕೆ ವ್ಯಕ್ತವಾಗಿದ್ದು, ನೌಕರರು ಕೆಲಸ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಇಬ್ಬರಿಗೂ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಮನೆಯಲ್ಲೇ ಇಬ್ಬರ ಮೇಲೆ ನಿಗಾ ವಹಿಸಿದ್ದಾರೆ.