ಮದುವೆಗೆಂದು ಮನೆಯಲ್ಲಿ ತಂದಿಟ್ಟಿದ್ದ 6 ಲಕ್ಷ ರೂ. ನಗದು ಸುಟ್ಟು ಭಸ್ಮವಾಗಿದೆ. ಶಿವರಾಜ್ ಅಶೋಕ್ ಮೊದಗೆ ಹಾಗೂ ಶಶಿಕಾಂತ ಮೊದಗೆ ಎಂಬುವವರಿಗೆ ಸೇರಿದ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಶಿವರಾಜ್ ಮೊದಗೆ ಮದುವೆ ಕಾರ್ಯಕ್ಕೆಂದು ದುಡ್ಡು ಮನೆಯಲ್ಲಿಟ್ಟಿದ್ದರು. 

ಬೆಳಗಾವಿ(ಜೂ.15): ಶಾರ್ಟ್ ಸರ್ಕ್ಯೂಟ್‌ನಿಂದ ಎರಡು ಮನೆಗಳು ಸಂಪೂರ್ಣ ಸುಟ್ಟು ಭಸ್ಮವಾಸ ಘಟ‌ನೆ ಬೆಳಗಾವಿಯ ಹೊಸೂರ ಹರಿಜನ ಗಲ್ಲಿಯಲ್ಲಿ ಇಂದು(ಶನಿವಾರ) ನಡೆದಿದೆ. 

ಮದುವೆಗೆಂದು ಮನೆಯಲ್ಲಿ ತಂದಿಟ್ಟಿದ್ದ 6 ಲಕ್ಷ ರೂ. ನಗದು ಸುಟ್ಟು ಭಸ್ಮವಾಗಿದೆ. ಶಿವರಾಜ್ ಅಶೋಕ್ ಮೊದಗೆ ಹಾಗೂ ಶಶಿಕಾಂತ ಮೊದಗೆ ಎಂಬುವವರಿಗೆ ಸೇರಿದ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಶಿವರಾಜ್ ಮೊದಗೆ ಮದುವೆ ಕಾರ್ಯಕ್ಕೆಂದು ದುಡ್ಡು ಮನೆಯಲ್ಲಿಟ್ಟಿದ್ದರು. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಮನೆ ಸದಸ್ಯರು ಮನೆಯಿಂದ ಹೊರ ಓಡಿ ಬಂದರು. 

ಚಿಕ್ಕೋಡಿ: ಅತ್ತೆಯ ಕಾಟದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಯೋಧನ ಪತ್ನಿ..!

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮನೆಯ ಪರಿಕರ ಹಾಗೂ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ದಳದಿಂದ ಬೆಂಕಿ ನಂದಿರುವ ಕಾರ್ಯ ನಡೆದಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.