ಹಳ್ಳದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು| ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಂತುರ್ಗಾ ಗ್ರಾಮದ ಬಳಿ ನಡೆದ ಘಟನೆ| ಬಾಲಕರಿಗಾಗಿ ಹುಡುಕಾಟ ನಡೆಸಿದ್ದ ಪೋಷಕರು| ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಖಾನಾಪುರ(ನ.23): ಪಟ್ಟಣದ ಇಬ್ಬರು ಯುವಕರು ತಾಲೂಕಿನ ಮಂತುರ್ಗಾ ಗ್ರಾಮದ ಬಳಿಯ ಅಲಾತ್ರಿ ಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇತ್ತೀಚೆಗೆ ನಡೆದಿದೆ. ಪಟ್ಟಣದ ಜಳಕಾವಾಡಾ ನಿವಾಸಿ ಅರಾಫತ್ ಅರ್ಕಾಟಿ (16) ಮತ್ತು ಬಜಾರಪೇಟ ನಿವಾಸಿ ಉಮರ್ ಮುಸ್ತಾಕ್ ಖಲೀಫಾ (16) ಮೃತ ಯುವಕರು.
ಪರಸ್ಪರ ನೆಚ್ಚಿನ ಗೆಳೆಯರಾಗಿದ್ದ ಅರಾಫತ್ ಮತ್ತು ಉಮರ್ ಶನಿವಾರ ಮಧ್ಯಾಹ್ನ ಕುಟುಂಬದ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೇ ಮನೆಯಿಂದ ತೆರಳಿದ್ದರು. ಅಲಾತ್ರಿ ಹಳ್ಳದ ಬಳಿ ಈಜಲು ತೆರಳಿದ್ದ ಇವರು ನೀರಿನಲ್ಲಿ ಈಜುತ್ತಿದ್ದಾಗ ಸೆಳವಿಗೆ ಸಿಲುಕಿದ್ದರಿಂದ ಮೃತಪಟ್ಟಿದ್ದರು.
ಮದ್ಯದ ಅಮಲಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ
ಭಾನುವಾರ ಸಂಜೆಯವರೆಗೆ ಇವರಿಬ್ಬರೂ ಮನೆಗೆ ಮರಳದ ಕಾರಣ ಕುಟುಂಬದ ಸದಸ್ಯರು ಇವರಿಗಾಗಿ ಹುಡುಕಾಟ ನಡೆಸಿದ್ದರು. ಅಲಾತ್ರಿ ಹಳ್ಳದ ಬಳಿ ಬಟ್ಟೆ ಮತ್ತು ಮೊಬೈಲ್ ಇದ್ದುದ್ದನ್ನು ಗಮನಿಸಿದ ಸ್ಥಳೀಯರು ಈ ವಿಷಯವನ್ನು ಖಾನಾಪುರ ಪೊಲೀಸರಿಗೆ ತಿಳಿಸಿದ್ದರು.
ಪೊಲೀಸರು ಹುಡುಕಾಟ ನಡೆಸುತ್ತಿದ್ದವರಿಗೆ ಇವರಿಬ್ಬರ ಬಟ್ಟೆಗಳು ಮತ್ತು ಮೊಬೈಲ್ ತೋರಿಸಿದ್ದರಿಂದ ಅವುಗಳನ್ನು ಗುರುತಿಸಿದ ಕುಟುಂಬದ ಸದಸ್ಯರು ಪೊಲೀಸರು ಮತ್ತು ಅಗ್ನಿಶಾಮಕದವರ ಸಹಾಯ ಪಡೆದು ಕಾರ್ಯಾಚರಣೆ ಕೈಗೊಂಡು ಅಲಾತ್ರಿ ಹಳ್ಳದಿಂದ ಅರಾಫತ್ ಮತ್ತು ಉಮರ್ ಅವರ ಶವಗಳನ್ನು ಹೊರತೆಗೆದಿದ್ದಾರೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 23, 2020, 2:21 PM IST