ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿ : ರೈತರಲ್ಲಿ ಹರ್ಷ
- ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯ ಆ.14ರಂದು ಸಂಪೂರ್ಣ ಭರ್ತಿಯಾಗಿದೆ.
- ಜಲಾಶಯ ನೆಚ್ಚಿರುವ ರೈತರಲ್ಲಿ ಹರ್ಷವನ್ನುಂಟು ಮಾಡಿದೆ.
ಹೊಸಪೇಟೆ (ಆ.15): ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯ ಆ.14ರಂದು ಸಂಪೂರ್ಣ ಭರ್ತಿಯಾಗಿದೆ. ಜಲಾಶಯ ನೆಚ್ಚಿರುವ ರೈತರಲ್ಲಿ ಹರ್ಷವನ್ನುಂಟು ಮಾಡಿದೆ.
ತುಂಗಭದ್ರಾ ಜಲಾಶಯ 1633.00 ಅಡಿ ಗರಿಷ್ಠ ಮಟ್ಟಹೊಂದಿದೆ. 100.855 ಟಿಎಂಸಿಯಷ್ಟುನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಕಳೆದ ವರ್ಷ ಆ.14ರಂದು 91.984 ಟಿಎಂಸಿಯಷ್ಟುನೀರು ಸಂಗ್ರಹವಾಗಿತ್ತು.
ತುಂಗಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ
ಜಲಾಶಯದ ಒಳ ಹರಿವು 29174 ಕ್ಯುಸೆಕ್‌ನಷ್ಟಿದೆ. ಜಲಾಶಯದಿಂದ 18070 ಕ್ಯುಸೆಕ್ ನೀರು ಕಾಲುವೆಗಳಿಗೆ ಹಾಗೂ ವಿದ್ಯುತ್ ಉತ್ಪಾದನಾ ಕಾಲುವೆಗೆ ಹರಿಸಲಾಗಿದೆ. ವಿದ್ಯುತ್ ಉತ್ಪಾದನಾ ಕಾಲುವೆಯಿಂದ 4 ಸಾವಿರ ಕ್ಯುಸೆಕ್ ನೀರು ನದಿಗೆ ಸೇರುತ್ತಿದೆ.
ಕಳೆದ ವರ್ಷ ಆ.24ರಂದು ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಈ ವರ್ಷ ಹತ್ತು ದಿನಗಳ ಮೊದಲೇ ಜಲಾಶಯ ಭರ್ತಿಯಾಗಿದೆ.