ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ತುಂಗಭದ್ರಾ ನದಿಯ ಗಂಗೆ: ಶಾಸಕ ಜನಾರ್ದನ ರೆಡ್ಡಿ
ಜ. 22 ರಂದು ನಡೆಯುವ ಅಯೋಧ್ಯೆ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಶ್ರೀರಾಮಚಂದ್ರ ದೇವರ ಶಿಷ್ಯನಾಗಿರುವ ಅಂಜನಾದ್ರಿ ಹನುಮಂತ ದೇವರ ಸನ್ನಿದಾನದಲ್ಲಿ ತುಂಗಭದ್ರ ಹರಿಯುತ್ತಿದೆ. ಇಲ್ಲಿಯ ಜಲವನ್ನು ಲೋಹದ 108 ಕುಂಭದೊಂದಿಗೆ ತೆರೆಳಿ ಅಭಿಷೇಕ ಮಾಡಲಾಗುತ್ತದೆ. ಸ್ವತಃ ತಾವೇ ಭಾಗಿಯಾಗವುದಾಗಿ ತಿಳಿಸಿದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ
ರಾಮಮೂರ್ತಿ ನವಲಿ
ಗಂಗಾವತಿ(ಡಿ.22): ಅಯೋದ್ಯೆಯ ಶ್ರೀರಾಮಮಂದಿರ ಉದ್ಘಾಟನೆಗೆ ಅಂಜನಾದ್ರಿ ಬಳಿ ಹರಿಯುತ್ತಿರುವ ತುಂಗಭದ್ರಾ ನದಿಯ ನೀರನ್ನು 108 ಲೋಹದ ಕುಂಭದೊಂದಿಗೆ ತೆರಳಿ ಶ್ರೀರಾಮಚಂದ್ರ ದೇವರಿಗೆ ಅಭಿಷೇಕ ಮಾಡಲಾಗುತ್ತದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಇಂದು(ಶುಕ್ರವಾರ) ನಗರದಲ್ಲಿ ಹನುಮದ್ ವೃತ ಅಂಗವಾಗಿ ಏರ್ಪಡಿಸಿದ್ದ ಹನಮಮಾಲಾಧಾರಿಗಳ ಸಂಕೀರ್ತನೆ ಯಾತ್ರೆಯಲ್ಲಿ ಪಾಲ್ಗೊಂಡು ಪತ್ರಕರ್ತರೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಜ. 22 ರಂದು ನಡೆಯುವ ಅಯೋಧ್ಯೆ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಶ್ರೀರಾಮಚಂದ್ರ ದೇವರ ಶಿಷ್ಯನಾಗಿರುವ ಅಂಜನಾದ್ರಿ ಹನುಮಂತ ದೇವರ ಸನ್ನಿದಾನದಲ್ಲಿ ತುಂಗಭದ್ರ ಹರಿಯುತ್ತಿದೆ. ಇಲ್ಲಿಯ ಜಲವನ್ನು ಲೋಹದ 108 ಕುಂಭದೊಂದಿಗೆ ತೆರೆಳಿ ಅಭಿಷೇಕ ಮಾಡಲಾಗುತ್ತದೆ. ಸ್ವತಃ ತಾವೇ ಭಾಗಿಯಾಗವುದಾಗಿ ತಿಳಿಸಿದರು.
ಮೈಸೂರು ಸಿಂಹ ಕಾಣೆಯಾಗಿದೆ, ಯಾವುದೋ ಗುಹೆಯೊಳಗೆ ಅಡಗಿ ಕುಳಿತಿದೆ: ಸಚಿವ ತಂಗಡಗಿ ವಾಗ್ದಾಳಿ
ಅಯೋಧ್ಯೆಯ ಪ್ರದೇಶದ ಭಕ್ತರು ಅಂಜನಾದ್ರಿ ಬರುತ್ತಿದ್ದಾರೆ. ಅದರಂತೆ ಈ ಭಾಗದ ಭಕ್ತರು ಅಯೋದ್ಯೆಗೆ ತೆರಳಲು ಕೇಂದ್ರ ಮತ್ತು ರಾಜ್ಯ ಸರಕಾರ ರೈಲ್ವೆ ಸಂಚಾರಕ್ಕೆ ಅನುಕೂಲ ಮಾಡಿಕೊಡ ಬೇಕೆಂದರು.
ಅಂಜನಾದ್ರಿ ದಿನದಿಂದ ದಿನಕ್ಕೆ ಅಭಿವೃದ್ಧಿ ಸಾಧಿಸುತ್ತದೆ. ಇದಕ್ಕೆ ಕೇಂದ್ರ ಸರಕಾರ ಹೆಚ್ಚಿನ ಅನುದಾನ ನೀಡಬೇಕು ಮತ್ತು ರಾಜ್ಯ ಸರಕಾರ ಕೈಜೋಡಿಸಬೇಕೆಂದರು. ಈಗಾಗಲೇ ಅಂಜನಾದ್ರಿ ಅಭಿವೃದ್ಧಿಗೆ ತಾವು ಹೆಚ್ಚು ಒತ್ತು ನೀಡಿದ್ದು ಬರುವ ದಿನಗಳಲ್ಲಿ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಮತ್ತು ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ, ಬಿಜೆಪಿ ಜಿಲ್ಲಾ ಮಾಜಿ ಅದ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಇದ್ದರು.
ಹನುಮಮಾಲಾಧಾರಿಗಳಿಂದ ಸಂಕೀರ್ತನ ಯಾತ್ರೆಗೆ ರೆಡ್ಡಿ, ಮುನವಳ್ಳಿ ಚಾಲನೆ
ಅಂಜನಾದ್ರಿ ಬಟ್ಟದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ 23 ಮತ್ತು 24 ರಂದು ನಡೆಯುವ ಹನುಮಮಾಲೆ ವಿಸರ್ಜನೆಯ ಪೂರ್ವದಿನವಾಗಿರುವ ಶುಕ್ರವಾರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ನೇತ್ರತ್ವದಲ್ಲಿ ನಗರದಲ್ಲಿ ಸಂಕೀರ್ತನ ಯಾತ್ರೆ ಜರುಗಿತು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಶ್ರೀಚೆನ್ನಬಸವಸ್ವಾಮಿ ಮಂದಿರದಿಂದ ಪ್ರಾರಂಭಗೊಂಡ ಯಾತ್ರೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಭಗಧ್ವಜ ಹಿಡಿಯುವದರ ಮೂಲಕ ಚಾಲನೆ ನೀಡಿದರು.
ಆಂಜನೇಯಸ್ವಾಮಿಯ ಮೂರ್ತಿಯನ್ನು ತೆರೆದ ವಾಹನದಲ್ಲಿರಿಸಿ ಪ್ರಾರಂಭಗೊಂಡ ಮೆರವಣಿಗೆ ಚೆನ್ನಬಸವಸ್ವಾಮಿ ವೃತ್ತ, ಮಹಾವೀರ ವೃತ್ತ, ಮಹಾತ್ಮಗಾಂಧಿ ವೃತ್ತ, ಬಸವಣ್ಣ ಸರ್ಕಲ್, ಅಂಬೇಡ್ಕರ ವೃತ್ತದ ಮೂಲಕ ಕೊಟ್ಟೂರು ಬಸವೇಸ್ವರ ದೇವಸ್ಥಾನಕ್ಕೆ ತಲುಪಿತು.
ಸದನದಿಂದ ಸಂಸದರು ಹೊರಕ್ಕೆ, ಪ್ರಜಾಪ್ರಭುತ್ವದ ಕಗ್ಗೊಲೆ: ಸಚಿವ ಎಂ.ಬಿ.ಪಾಟೀಲ್
ಮೆರವಣಿಗೆಯಲ್ಲಿ ಜೈ ಭಜರಂಗಬಲಿ, ಜೈ ಆಂಜನೇಯಸ್ವಾಮಿ, ಜೈ ಶ್ರೀರಾಮ್ ನ್ನುವ ಘೋಷಣೆ ಮಾಲಾಧಿಕಾರಿಗಳು ಹಾಕಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅದ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ನಗರಸಭಾ ಸದಸ್ಯ ರಮೇಶ ಚೌಡ್ಕಿ, ವಾಸುದೇವ ನವಲಿ, ಬಜರಂಗ ದಳದ ತ್ತರ ಪ್ರಾಂತದ ಪುಂಡಲೀಕ ದಳವಾಯಿ, ವಿನಯ್ ಪಾಟೀಲ್, ದೊಡ್ಡಬಸಯ್ಯ, ರಾಮಂಜನೇಯ, ಯಮನೂರು ಚೌಡ್ಕಿ, ಯಂಕರೆಡ್ಡಿ ಕೇಸರಹಟ್ಟಿ( ಮೋದಿ)ಮನೋಹರಗೌಡ ಹೇರೂರು, ವಿರೇಶ ಬಲಕುಂದಿ,ಪಂಪಣ್ಣನಾಯಕ, ಸೇರಿದಂತೆ 200 ಕ್ಕು ಹೆಚ್ಚು ಮಾಲಾಧಾರಿಗಳು ಭಾಗವಹಿಸಿದ್ದರು.
ಬಿಗಿ ಭದ್ರೆತೆ
ಸಂಕೀರ್ತನ ಯಾತ್ರೆಯ ಸಂದರ್ಬದಲ್ಲಿ ಯಾವುದೇ ರೀತಿಯ. ಅಹಿತಕರ ಗಟನೆ ನಡೆಯ ಬಾರದೆಂಬ ಕಾರಣಕ್ಕೆ ಪೊಲೀಸ್ ಬಿಗಿ ಬದ್ರತೆ ವಹಿಸಲಾಗಿತ್ತು, ಕೊಪ್ಪಳ ಮತ್ತು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಟಾಧಿದಾರಿಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ನಿಗಾವಹಿಸಿದ್ದರು.