ತುಮಕೂರು : ಗ್ರಾಮ ಪಂ ಭ್ರಷ್ಟಾಚಾರ ಪ್ರಶ್ನಿಸಿದ್ದಕ್ಕೆ ಅಧ್ಯಕ್ಷರ ಮೇಲೆ ಸದಸ್ಯರ ಆರೋಪ
ಬಿಳಿ ದೇವಾಲಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿಲೀಪ್ ಒಂದು ತಿಂಗಳು ಗೈರಾಗಿದ್ದರೂ ಕೂಡ ಅವರಿಗೆ ನಮ್ಮ ಗ್ರಾಪಂ ಅಧಿಕಾರಿಗಳು ಹಾಜರಾತಿ ನೀಡಿದ್ದಾರೆ. ಕಾರ್ಯದರ್ಶಿ ಸೇರಿದಂತೆ ಸದಸ್ಯರು ಹಲವಾರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಅಧ್ಯಕ್ಷ ನಾಗರಾಜ್ ಆರೋಪಿಸಿದ್ದಾರೆ.
ಕುಣಿಗಲ್ : ಬಿಳಿ ದೇವಾಲಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿಲೀಪ್ ಒಂದು ತಿಂಗಳು ಗೈರಾಗಿದ್ದರೂ ಕೂಡ ಅವರಿಗೆ ನಮ್ಮ ಗ್ರಾಪಂ ಅಧಿಕಾರಿಗಳು ಹಾಜರಾತಿ ನೀಡಿದ್ದಾರೆ. ಕಾರ್ಯದರ್ಶಿ ಸೇರಿದಂತೆ ಸದಸ್ಯರು ಹಲವಾರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಅಧ್ಯಕ್ಷ ನಾಗರಾಜ್ ಆರೋಪಿಸಿದ್ದಾರೆ.
ಬಿಳಿದೇವಾಲಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯ ಆನಂದ ಸ್ವಾಮಿ ಅಧಿಕಾರಿಗಳ ಮೇಲೆ ಏರು ಧ್ವನಿಯಲ್ಲಿ ಅಧ್ಯಕ್ಷ ಮಾತನಾಡುತ್ತಾರೆ ಎಂದು ಆರೋಪಿಸಿದ್ದು, ಇಂತಹ ಭ್ರಷ್ಟಾಚಾರ ಮಾಡುವಾಗ ಕೇಳುವುದು ತಪ್ಪ ಎಂದು ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕಳೆದ ಹಲವಾರು ವರ್ಷಗಳಿಂದ ಕಸ ವಿಲೇವಾರಿ ಘಟಕವನ್ನು ಪೂರ್ಣಾ ಕಾಮಗಾರಿ ಗೊಳಿಸದೆ ಇರುವ ಕಾರಣ ಹಾಗೂ ಕಳಪೆ ಕಾಮಗಾರಿಯಿಂದ ಕೂಡಿದೆ. ಗ್ರಾಮ ಪಂಚಾಯಿತಿ ಸದಸ್ಯ ಬೋರೇಗೌಡ ಅಲಿಯಾಸ್ ಸ್ವಾಮಿ ಈ ಕಾಮಗಾರಿಯನ್ನು ಮಾಡಿದ್ದು ಅದು ಅಪೂರ್ಣವಾಗಿದೆ. ಆದ್ದರಿಂದ ಪ್ರಾರಂಭಿಸಲು ಆಗುತ್ತಿಲ್ಲ. ಅರಣ್ಯ ಪ್ರದೇಶದಲ್ಲಿರುವ ಘಟಕಕ್ಕೆ ಹೆಣ್ಣು ಮಕ್ಕಳಿಗೆ ಯಾವ ರೀತಿ ಸುರಕ್ಷತೆಗಳಿಲ್ಲ ಇಲ್ಲಿರುವ ಮೂರು ಮಂದಿಯನ್ನು ಸುಮ್ಮನೆ ಕೂರಿಸಿಕೊಂಡು ಸಂಬಳ ಕೊಡಬೇಕಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅನುದಾನ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಲ್ಯಾಣಿ ಅಭಿವೃದ್ಧಿ ಎಂಬ ಹೆಸರಿನಲ್ಲಿ ಕಾಮಗಾರಿ ಮಾಡದೆ 1. 98 ಲಕ್ಷ ರು. ಹಣ ಬಿಲ್ ಮಾಡಿದ್ದು ಸರ್ಕಾರಕ್ಕೆ ವಾಪಸ್ ಕಟ್ಟಬೇಕಿದೆ ಅದನ್ನು ಕೇಳಿದ್ದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಹಲವು ದಾಖಲಾತಿಗಳನ್ನು ತಿದ್ದಿ ತಮಗೆ ಇಷ್ಟ ಬಂದವರಿಗೆ ಖಾತೆ ಮಾಡಿ ಕೊಡುವ ದಂಧೆಯನ್ನು ಬಿಳಿ ದೇವಾಲಯದಲ್ಲಿ ನಡೆಸುತ್ತಿದ್ದಾರೆ,
ಈ ಭ್ರಷ್ಟಾಚಾರದಲ್ಲಿ ಕೆಲವು ಗ್ರಾಮ ಪಂಚಾಯಿತಿ ಸದಸ್ಯರ ಕುಮ್ಮಕ್ಕು ಇದೆ. ಆದ್ದರಿಂದ ಅವರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಡಿಮ್ಯಾಂಡ್ ಪುಸ್ತಕದಲ್ಲಿ ತಿದ್ದಿ ನಕಲಿ ಖಾತೆ ಸೃಷ್ಟಿಸುತ್ತಿದ್ದಾರೆ. ಹೀಗೆ ಹಲವಾರು ಭ್ರಷ್ಟಾಚಾರಗಳನ್ನು ಮಾಡಿದ್ದು ಈ ಬಗ್ಗೆ ನಾನು ಪ್ರಯತ್ನಿಸಿದ್ದಕ್ಕೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ನಾಗರಾಜು ಸದಸ್ಯರ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.