ತುಮಕೂರು, (ಮೇ.23): ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ರಕ್ತದಾನ ಮಾಡಿದರು.

ರಾಜ್ಯದಲ್ಲಿ ಕೊರೋನಾ ವೈರಸ್ ಕೇಕೆ, ಟಿ20 ವಿಶ್ವಕಪ್ ಮುಂದೂಡಿಕೆ; ಮೇ.23ರ ಟಾಪ್ 10 ಸುದ್ದಿ!

ಇಂದು (ಶನಿವಾರ) ಸಿದ್ದಗಂಗಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಶ್ರೀ ಸಿದ್ದಲಿಂಗ ಶ್ರೀಗಳು ರಕ್ತದಾನ ಮಾಡಿ ಮಾದರಿಯಾದರು.

ಈ ವೇಳೆ ಪ್ರತಿಕ್ರಿಯಿಸಿದ ಶ್ರೀಗಳು, ರಕ್ತದಾನ ಮಹಾದಾನ, ಆರೋಗ್ಯಯತ ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರೆ, ಇನ್ನೊಂದು ‌ಜೀವಕ್ಕೆ ವರದಾನವಾಗುತ್ತದೆ. ಪ್ರಪಂಚದಲ್ಲಿ ರಕ್ತ ಉತ್ಪಾದನೆ ಮಾಡುವ ಯಾವುದೇ ಕಾರ್ಖಾನೆ ಇಲ್ಲ ಎಂದರು.

ರಕ್ತದಾನ ಮಾಡುವಾಗ ಮಾಸ್ಕ್ ಧರಿಸಿ ಎಲ್ಲರೂ ಕೊರೋನಾ ಮಹಾಮಾರಿ ನಿರ್ನಾಮ ಮಾಡಲು ಮುಂದಾಗಬೇಕೆಂದು ಎಂದು ಸಲಹೆ ನೀಡಿದರು.