ತುಮಕೂರು : ವಿವಿಧ ಹಳ್ಳಿಯಲ್ಲಿ ಜಲಜೀವನ್ ಯೋಜನೆಗೆ ಶಾಸಕರ ಚಾಲನೆ

ತಾಲೂಕಿನ ಸಾದರಹಳ್ಳಿ ಮತ್ತು ಕೆರೆವರಗೇನಹಳ್ಳಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಯೋಜನೆಗೆ ಶಾಸಕ ಎಂ.ಟಿ. ಕೃಷ್ಣಪ್ಪ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

Tumkur MLAs drive for Jaljeevan Yojana in various villages snr

ತುರುವೇಕೆರೆ: ತಾಲೂಕಿನ ಸಾದರಹಳ್ಳಿ ಮತ್ತು ಕೆರೆವರಗೇನಹಳ್ಳಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಯೋಜನೆಗೆ ಶಾಸಕ ಎಂ.ಟಿ. ಕೃಷ್ಣಪ್ಪ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಸಾದರಹಳ್ಳಿಯಲ್ಲಿ ಸುಮಾರು 40 ಲಕ್ಷ ರು. ವೆಚ್ಚದಲ್ಲಿ 167 ಮನೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಕೆರೆವರಗೇನಹಳ್ಳಿಯಲ್ಲಿ ಸುಮಾರು ೩೦ ಲಕ್ಷ ರು. ವೆಚ್ಚದಲ್ಲಿ ೮೫ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಕಾರ್ಯಕ್ಕೆ ಶಾಸಕ ಎಂ.ಟಿ. ಕೃಷ್ಣಪ್ಪಚಾಲನೆ ನೀಡಿದರು.

ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರನ್ನು ಮನೆ ಬಳಿಯೇ ಒದಗಿಸುವ ವಿಶೇಷವಾದ ಯೋಜನೆಯಾಗಿದೆ. ಜನರಿಗೆ ನೀರಿನ ಬರವನ್ನು ತಪ್ಪಿಸುವ ಮತ್ತು ಮನೆ ಬಳಿಯೇ ನೀರು ದೊರೆಯುವಂತೆ ಮಾಡುವ ಯೋಜನೆಯಾಗಿದೆ. ಸಾರ್ವಜನಿಕರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿಕೊಂಡರು.

ಗ್ರಾಮಾಂತರ ಪ್ರದೇಶದಲ್ಲಿ ಮನೆಮನೆಗೆ ನೀರು ಕೊಡುವ ಜಲಜೀವನ್ ಯೋಜನೆಯು ಬಹುವರ್ಷಗಳ ಕಾಲ ಇರುವ ಯೋಜನೆಯಾಗಿರುವುದರಿಂದ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಶಾಸಕ ಎಂ.ಟಿ. ಕೃಷ್ಣಪ್ಪ ಸೂಚಿಸಿದರು.

ಈ ಸಂಧರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಸಾದರಹಳ್ಳಿ ದೊಡ್ಢೇಗೌಡರು, ಮುಖಂಡರಾದ ಕಣತೂರು ತಿಮ್ಮೇಗೌಡ, ಮುದ್ದನಹಳ್ಳಿ ಲಕ್ಷಣ್ ಗೌಡ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆ ನಾಗಮಣಿ, ಅರುಣ್, ಪ್ರಭು, ಕೆರೆವರಗೇನಹಳ್ಳಿಯ ಪಟೇಲ್ ರಾಜು, ಗ್ರಾಮ ಪಂಚಾಯ್ತಿ ಸದಸ್ಯ ಹನುಮೇಗೌಡ ಸೇರಿದಂತೆ ಹಲವಾರು ಮಂದಿ ಇದ್ದರು.

Latest Videos
Follow Us:
Download App:
  • android
  • ios