Tumakur: ಅರಣ್ಯ ವೃಕ್ಷೋದ್ಯಾನ ಲೋಕಾರ್ಪಣೆ

ವಾಯುವಿಹಾರಿ ಮತ್ತು ಪ್ರವಾಸಿಗರ ಹತ್ತಾರು ವರ್ಷದ ಬೇಡಿಕೆಯಾದ ಟ್ರೀ ಪಾರ್ಕ್ ನಿರ್ಮಾಣದ ಕನಸು ಗೃಹಸಚಿವ ಡಾ.ಜಿ.ಪರಮೇಶ್ವರ ಅವರ ಪರಿಶ್ರಮದಿಂದ ಇಂದು ನನಸಾಗಲಿದೆ. 10 ಎಕರೆ ಭೂ ವಿಸ್ತೀರ್ಣದಲ್ಲಿ ಅರಣ್ಯ ಇಲಾಖೆಯ 2 ಕೋಟಿ 50 ಲಕ್ಷ ಅನುದಾನದ ಬಳಕೆಯಿಂದ ನಿರ್ಮಾಣ ಆಗಿರುವ ಟ್ರೀ ಪಾರ್ಕ್ ಶುಕ್ರವಾರ ಲೋಕಾರ್ಪಣೆಗೆ ಸಜ್ಜಾಗಿದೆ.

Tumkur inauguration of Forest Orchard snr

 ಕೊರಟಗೆರೆ:  ವಾಯುವಿಹಾರಿ ಮತ್ತು ಪ್ರವಾಸಿಗರ ಹತ್ತಾರು ವರ್ಷದ ಬೇಡಿಕೆಯಾದ ಟ್ರೀ ಪಾರ್ಕ್ ನಿರ್ಮಾಣದ ಕನಸು ಗೃಹಸಚಿವ ಡಾ.ಜಿ.ಪರಮೇಶ್ವರ ಅವರ ಪರಿಶ್ರಮದಿಂದ ಇಂದು ನನಸಾಗಲಿದೆ. 10 ಎಕರೆ ಭೂ ವಿಸ್ತೀರ್ಣದಲ್ಲಿ ಅರಣ್ಯ ಇಲಾಖೆಯ 2 ಕೋಟಿ 50 ಲಕ್ಷ ಅನುದಾನದ ಬಳಕೆಯಿಂದ ನಿರ್ಮಾಣ ಆಗಿರುವ ಟ್ರೀ ಪಾರ್ಕ್ ಶುಕ್ರವಾರ ಲೋಕಾರ್ಪಣೆಗೆ ಸಜ್ಜಾಗಿದೆ.

ಕೊರಟಗೆರೆ ಪಟ್ಟಣದ ಸರ್ವೇ ನಂ.174ರಲ್ಲಿ 10 ಎಕರೆ ಜಮೀನು ವಿಸ್ತೀರ್ಣದಲ್ಲಿ ಸುಂದರವಾದ ವೃಕ್ಷೋಧ್ಯಾನ ತಲೆಎತ್ತಿ ಲೋಕಾರ್ಪಣೆಗೆ ಸಿದ್ಧವಾಗಿದೆ. ಅರಣ್ಯ ಇಲಾಖೆಯಿಂದ ವೃಕ್ಷೋಧ್ಯಾನ ಯೋಜನೆಯಡಿ ಟ್ರೀಪಾರ್ಕ್ ಅಭಿವೃದ್ಧಿಗೆ 2022-23ರಲ್ಲಿ 50 ಲಕ್ಷ ಮತ್ತು 2023-24ರಲ್ಲಿ 47 ಲಕ್ಷ ಅನುದಾನ ಬಿಡುಗಡೆಯಾಗಿ ಕಾಮಗಾರಿಯು ಬಿರುಸಿನಿಂದ ಸಾಗಿದೆ.

ಟ್ರೀಪಾರ್ಕ್ನ ವಿಶೇಷತೆ:

ಅರಣ್ಯ ಇಲಾಖೆಯ ವೃಕ್ಷೋಧ್ಯಾನದ ಪ್ರವೇಶ ದ್ವಾರ, ಕ್ಯಾಕ್ಟಸ್‌ ಗಾರ್ಡನ್‌, ಎರಡು ಪರಗೋಲ, ಮುಳ್ಳುತಂತಿ ಬೇಲಿ, ನೀರಿನ ಪೈಪ್‌ಲೈನ್‌, ನಾಮಫಲಕ, ಸುಸರ್ಜಿತ ರಸ್ತೆ, ಸಿಮೆಂಟ್‌ ಮತ್ತು ಕಲ್ಲಿನ ಬೆಂಚು, ಪೈಪ್‌ ಕಲ್ವರ್ಚ್‌, ಮಕ್ಕಳ ಆಟಿಕೆ ಸಲಕರಣೆ, ಹಾಸುಕಲ್ಲು, ತಡೆಗೋಡೆ, ಜಾಗಿಂಗ್‌ ಪಾತ್‌, ನೂರಾರು ಬಗೆಯ ಸಸಿ, ಹೂವಿನ ಗಿಡಗಳು ಪ್ರವಾಸಿಗರ ಮತ್ತು ಮಕ್ಕಳ ಕಣ್ಮನ ಸೆಳೆಯಲಿವೆ.

ವೃಕ್ಷೋಧ್ಯಾನದೊಳಗೆ 110 ಬಗೆಯ ಸಸಿ:

ಸುಂದರವಾಗಿ ನಿರ್ಮಾಣ ಆಗಿರುವ ವೃಕ್ಷೋಧ್ಯಾನದ ಒಳಗಡೆ ತಬೂಬಿಯಾ, ಆನೆಮುಂಗು, ಅಂಟವಾಳ, ಹೊಳೆದಾಸವಾಳ, ಸೀತಾ ಅಲೋಕ, ಅಂಕೋಲೆ, ಖರ್ಜೂರ, ನಂಬಿಬಟ್ಲು, ಅರಳಿ, ಅತ್ತಿ, ಮಹಾಗನಿ, ಬಾದಾಮಿ, ಸಮುದ್ರಫಲ, ಬೆಟ್ಟದನೆಲ್ಲಿ, ಬೇವು, ಮುತ್ತುಗ, ಕದಂಬ, ಮಾವು, ಹಲಸು, ಕೃಷ್ಣಆಲ, ಮಧುನಾಶಿನಿ, ಅಮೃತಬಳ್ಳಿ, ಅಶ್ವಗಂಧ, ರಾತ್ರಿ ರಾಣಿ, ಅರಳಿ ಸೇರಿದಂತೆ 110ಕ್ಕೂ ಅಧಿಕ ಬಗೆಯ ಸಸಿಗಳ ನಾಟಿ ಮಾಡಲಾಗಿದೆ.

ಡಾ.ಜಿ.ಪರಮೇಶ್ವರ್‌ ಟ್ರೀ ಪಾರ್ಕ್ ಕನಸು:

ಗೃಹಸಚಿವ ಡಾ.ಜಿ.ಪರಮೇಶ್ವರ್‌ 2018ರಲ್ಲಿ ಡಿಸಿಎಂ ಆಗಿದ್ದಾಗ ಕಂದಾಯ ಇಲಾಖೆಯಿಂದ 9 ಎಕರೆ 30 ಗುಂಟೆ ಜಮೀನು ಅರಣ್ಯ ಇಲಾಖೆಗೆ ಹಸ್ತಾಂತರಿ ಜಮೀನು ಗುರುತಿಸುವ ಕೆಲಸ ಆಗಿತ್ತು. 2022-23ರಲ್ಲಿ ವೃಕ್ಷೋಧ್ಯಾನ ಯೋಜನೆಯಡಿ ಅರಣ್ಯ ಇಲಾಖೆಯಿಂದ 2 ಕೋಟಿ 50 ಲಕ್ಷ ಅನುದಾನದ ಕ್ರಿಯಾಯೋಜನೆ ತಯಾರು ಮಾಡಿಸಿದ್ದರು. 2022-23ರಲ್ಲಿ ಟ್ರೀ ಪಾರ್ಕ್ ಕಾಮಗಾರಿ ಪ್ರಾರಂಭಿಸಲು 50 ಲಕ್ಷ ಮತ್ತು 2023-24ರಲ್ಲಿ 2ನೇ ಹಂತದ ಕಾಮಗಾರಿಗೆ 47 ಲಕ್ಷ ಅನುದಾನ ಮಂಜೂರು ಮಾಡಿಸಿ ಟ್ರೀಪಾರ್ಕ್ ಕನಸು ನನಸು ಮಾಡಿದ್ದಾರೆ.

ಕೋಟ್‌ -1

ಪ್ರಕೃತಿಯ ಸುಂದರ ತಪ್ಪಲಿನ 10 ಎಕರೆ ವಿಸ್ತೀರ್ಣದಲ್ಲಿ ಟ್ರೀ ಪಾರ್ಕ್ ನಿರ್ಮಾಣ ಆಗಿದೆ. ಟ್ರೀಪಾರ್ಕ್ನ ಒಳಗಡೆ 100ಕ್ಕೂ ಅಧಿಕ ವಿವಿಧ ಬಗೆಯ ಸಸಿಗಳನ್ನು ನೆಡಲಾಗಿದೆ. ವಾಯುವಿಹಾರಿ, ಪ್ರವಾಸಿಗರು, ವಿದ್ಯಾರ್ಥಿ ಮತ್ತು ಮಕ್ಕಳ ಅನುಕೂಲಕ್ಕೆ ತಕ್ಕಂತೆ ವೃಕ್ಷೋಧ್ಯಾನ ಕಾಣ ಸಿಗಲಿದೆ. ಗೃಹಸಚಿವ ಡಾ.ಜಿ.ಪರಮೇಶ್ವರ ಅವರಿಂದ ಶುಕ್ರವಾರ ಟ್ರೀಪಾರ್ಕ್ ಲೋಕಾರ್ಪಣೆ ಆಗಲಿದೆ.

ಎಚ್‌.ಎಂ.ಸುರೇಶ್‌ ಅರಣ್ಯಾಧಿಕಾರಿ, ಕೊರಟಗೆರೆ

ಪ್ರವಾಸಿ ಕ್ಷೇತ್ರದ ಬಹುವರ್ಷದ ಬೇಡಿಕೆಯಾದ 2 ಕೋಟಿ 50 ಲಕ್ಷದ 10 ಎಕರೆ ವಿಸ್ತೀರ್ಣದ ಟ್ರೀ ಪಾರ್ಕ್ ಲೋಕಾರ್ಪಣೆ ಮತ್ತು ಮತ್ತು ಪ್ರವಾಸೋದ್ಯಮ ಇಲಾಖೆಯ 9 ಕೋಟಿ ವೆಚ್ಚದ ಗೋಕುಲಕೆರೆ ಉದ್ಯಾನವನ ನಿರ್ಮಾಣಕ್ಕೆ ಚಾಲನೆ ನೀಡಲಿದ್ದೇನೆ. ತುಮಕೂರು ಅಮಾನಿಕೆರೆ ಪಾರ್ಕ್ ಮಾದರಿಯಲ್ಲೇ ಗೋಕುಲಕೆರೆಯ ಉದ್ಯಾನವನ ಮತ್ತು ಟ್ರೀಪಾರ್ಕ್ ಅಭಿವೃದ್ಧಿ ಆಗಲಿವೆ.

ಡಾ.ಜಿ.ಪರಮೇಶ್ವರ ಗೃಹ ಸಚಿವ, ಕರ್ನಾಟಕ

Latest Videos
Follow Us:
Download App:
  • android
  • ios