ಡಿ.24ಕ್ಕೆ ಮಾದಿಗ ಸಮುದಾಯದ ತುಮಕೂರು ಜಿಲ್ಲಾ ಮಟ್ಟದ ಸಮಾವೇಶ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರದಲ್ಲಿ ಪರಿಶಿಷ್ಠ ಜಾತಿಗೆ ಮೀಸಲಾತಿಯನ್ನು ಶೇ.15%ರಿಂದ 17%ಗೆ ಏರಿಕೆ ಮಾಡಿತು, ಪರಿಶಿಷ್ಠ ಪಂಗಡದ ಮೀಸಲಾತಿ ಮೊದಲು 3% ಇತ್ತು ಈಗ 7% ಏರಿಕೆ ಮಾಡಿ ಒಳಮೀಸಲಾತಿ ಜಾರಿಗೆ ತಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಬಿಜೆಪಿ ಮುಖಂಡ ಬಿ.ಎಚ್ ಅನಿಲ್‌ಕುಮಾರ್ ತಿಳಿಸಿದರು.
ಕೊರಟಗೆರೆ : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರದಲ್ಲಿ ಪರಿಶಿಷ್ಠ ಜಾತಿಗೆ ಮೀಸಲಾತಿಯನ್ನು ಶೇ.15%ರಿಂದ 17%ಗೆ ಏರಿಕೆ ಮಾಡಿತು, ಪರಿಶಿಷ್ಠ ಪಂಗಡದ ಮೀಸಲಾತಿ ಮೊದಲು 3% ಇತ್ತು ಈಗ 7% ಏರಿಕೆ ಮಾಡಿ ಒಳಮೀಸಲಾತಿ ಜಾರಿಗೆ ತಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಬಿಜೆಪಿ ಮುಖಂಡ ಬಿ.ಎಚ್ ಅನಿಲ್‌ಕುಮಾರ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನವೀನ್ ಕಂಫರ್ಟ್‌ನ ಸಭಾಂಗಣದಲ್ಲಿ ಮಾದಿಗ ಸಮುದಾಯದಿಂದ ಏರ್ಪಡಿಸಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ, ಮಾದಿಗ ಜನಾಂಗಕ್ಕೆ ಒಳಮೀಸಲಾತಿ ಜಾರಿಗೆ ತಂದು ಅನುಕೂಲ ಮಾಡಿದೆ. ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಕಾರ್ಯರೂಪಕ್ಕೆ ತರುವಂತೆ ಒತ್ತಾಯ ಮಾಡಿದ್ದಾರೆ, ಇಂಜಿನಿಯರ್ ಮತ್ತು ಮೆಡಿಕಲ್ ಶಿಕ್ಷಣ ಪಡೆಯಲು ಹಾಗೂ ಸರ್ಕಾರದ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ, ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ನಿಗದಿಪಡಿಸಿದ ದಿನಗಳಲ್ಲಿ ಸಮುದಾಯದ ಸಮಾವೇಶ ನಡೆಯಲಿದೆ, ಸಮುದಾಯದವರು ಒಳಮಿಸಲಾತಿ ಯಾವರೀತಿ ಸದ್ಭಳಕೆ ಮಾಡಿಕೊಳ್ಳಬೇಕೆಂಬುದರ ಕುರಿತು ಪೂರ್ವಭಾವಿ ಸಭೆ ಕರೆಯಲಾಗಿತ್ತು ಎಂದು ಹೇಳಿದರು.
ಮಾದಿಗ ಸಮುದಾಯದ ದಾಡಿ ವೆಂಕಟೇಶ್ ಮಾತನಾಡಿ, ನಾಯಕರಾದ ಮಂದಕೃಷ್ಣ ಮಾದಿಗರವರು ಇತ್ತೀಚಿಗೆ ಹೈದಾರ್‌ಬಾದ್‌ನಲ್ಲಿ ಏರ್ಪಡಿಸಿದ್ದ ಸಮುದಾಯದ ಬೃಹತ್ ಸಮಾವೇಶಕ್ಕೆ ಪ್ರಧಾನಿ ಮೋದಿಯವರು ಸಹ ಆಗಮಿಸಿದ್ದರು. ಒಳ ಮೀಸಲಾತಿಗೆ ಬದ್ಧನಾಗಿ ಮಾದಿಗ ಸಮುದಾಯಕ್ಕೆ ನ್ಯಾಯ ಸಿಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು ಎಂದರು.
ಮಾತುಕೊಟ್ಟಂತೆ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ಸಮಿತಿ ರಚಿಸಿದ್ದಾರೆ, ಒಳ ಮಿಸಲಾತಿ ಹೋರಾಟದ ಪರವಾಗಿ ಸುಪ್ರಿಂಕೋರ್ಟ್‌ನಲ್ಲಿ 2024 ರ ಜ.17ರಂದು ಈ ವಿಚಾರವು ಚರ್ಚೆಗೆ ಬರುತ್ತಿದೆ, ಆದಿನ ನ್ಯಾಯಯುತ ಅಂತಿಮ ತೀರ್ಪು ಸಿಗುವ ಭರವಸೆಯಲ್ಲಿ ನಾವಿದ್ದೇವೆ. ಅದರ ಪೂರಕವಾಗಿ ರಾಜ್ಯದಲ್ಲಿ ಮಾದಿಗ ಸಮುದಾಯವು ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲೆಯ ಸಮುದಾಯದ ಪ್ರಮುಖರ ಸಮ್ಮುಖದಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದೇವೆ, ತುಮಕೂರಿನಲ್ಲೂ ಸಹ ಡಿ.24ರಂದು ಈ ಸಮಾವೇಶ ನಡೆಯಲಿದೆ ಎಂದರು.
24 ತುಮಕೂರಿನಲ್ಲಿ ಬೃಹತ್ ಸಮಾವೇಶ
ಬಿಜೆಪಿಯ ಹಿಂದಿನರಾಜ್ಯ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೆ ತಂದು ಮಾದಿಗ ಸಮುದಾಯಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ, ಅದನ್ನು ಯಾವ ರೀತಿ ಸಮುದಾಯದವರು ಸದ್ಭಳಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಡಿ. 24 ರಂದು ತುಮಕೂರಿನ ಎಂಪ್ರೆಸ್ ಬಾಲಕಿಯರ ಕಾಲೇಜಿನ ಆವರಣದಲ್ಲಿ ಮಾದಿಗ ಮುನ್ನೆಡೆ ತುಮಕೂರು ಜಿಲ್ಲಾ ಮಟ್ಟದ ಸಮಾವೇಶ ಏರ್ಪಡಿಸಲಾಗಿದೆ, ಈ ಕಾರ್ಯಕ್ರಮಕ್ಕೆ 5 ಸಾವಿರಕ್ಕೂ ಹೆಚ್ಚಿನ ಸಂಖೈಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ರಾಜ್ಯದ ಬಿಜೆಪಿ ನಾಯಕರು ಮತ್ತು ಜಿಲ್ಲೆಯ 10 ತಾಲೂಕಿನ ಮಾದಿಗ ಸಮುದಾಯದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಬಿ.ಎಚ್ ಅನಿಲ್‌ಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮುದಾಯದ ಆನಂದ, ದಾಸಲಕುಂಟೆ ರಘು, ನಟರಾಜ್, ಸೋರೆಕುಂಟೆ ಯೋಗೀಶ್ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಹಾಜರಿದ್ದರು.