Asianet Suvarna News Asianet Suvarna News

Tumakur : ಬೆಸ್ಕಾಂ ನಿರ್ಲಕ್ಷ್ಯ. ಹತ್ತಾರು ಮನೆಗಳ ಎಲೆಕ್ಟ್ರಾನಿಕ್ಸ್ ವಸ್ತುಗಳು ಭಸ್ಮ

ಪಟ್ಟಣದ ಎಪಿಎಂಸಿ ಹಿಂಭಾಗದಲ್ಲಿರುವ ಮುತ್ತುರಾಯನಗರದ ವಿದ್ಯುತ್ ಪರಿವರ್ತಕದಲ್ಲಿ ಆಗುತ್ತಿರುವ ವ್ಯತ್ಯಯದಿಂದಾಗಿ ಬಡಾವಣೆಯ ಹತ್ತಾರು ಮನೆಗಳ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ವಸ್ತುಗಳು ಭಸ್ಮವಾಗಿದೆ ಎಂದು ನಾಗರೀಕರು ದೂರಿದ್ದಾರೆ.

Tumkur : BESCOM negligence Electronic items of tens of houses were burnt snr
Author
First Published Oct 11, 2023, 8:17 AM IST

ತುರುವೇಕೆರೆ: ಪಟ್ಟಣದ ಎಪಿಎಂಸಿ ಹಿಂಭಾಗದಲ್ಲಿರುವ ಮುತ್ತುರಾಯನಗರದ ವಿದ್ಯುತ್ ಪರಿವರ್ತಕದಲ್ಲಿ ಆಗುತ್ತಿರುವ ವ್ಯತ್ಯಯದಿಂದಾಗಿ ಬಡಾವಣೆಯ ಹತ್ತಾರು ಮನೆಗಳ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ವಸ್ತುಗಳು ಭಸ್ಮವಾಗಿದೆ ಎಂದು ನಾಗರೀಕರು ದೂರಿದ್ದಾರೆ. ಈ ಕುರಿತು ಬೇಸರ ವ್ಯಕ್ತಪಡಿಸಿರುವ ಬಡಾವಣೆಯ ಜಯಂತ್, ಕೃಷ್ಣಮೂರ್ತಿ ಮತ್ತು ಸುಕನ್ಯ ರವರು ಕಳೆದ ಹತ್ತಿಪ್ಪತ್ತು ದಿನಗಳಿಂದ ನಮ್ಮ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ಪದೇ ಪದೇ ವ್ಯತ್ಯಯವಾಗುತ್ತಿದೆ. ಈ ಕುರಿತು ಸಾಕಷ್ಟು ಬಾರಿ ಬೆಸ್ಕಾಂಗೆ ದೂರು ಸಲ್ಲಿಸಿದರೂ ಸಹ ಪ್ರಯೋಜನವಾಗಿಲ್ಲ.

ಮೂರು ಬಾರಿಗೂ ಹೆಚ್ಚು ವಿದ್ಯುತ್ ಪ್ರವಹಿಸಿ ಸಾಕಷ್ಟು ಮನೆಗಳ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಟಿವಿ, ಫ್ರಿಡ್ಜ್, ಬಲ್ಪ್, ವಾಟರ್ ಪಂಪ್ ಗಳು ಸೇರಿದಂತೆ ಹಲವಾರು ವಸ್ತುಗಳು ಹಾಳಾಗಿವೆ. ವಿನಾಕಾರಣ ಗ್ರಾಹಕರಿಗೆ ನಷ್ಟ ಉಂಟಾಗುತ್ತಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಬೆಸ್ಕಾಂ ಕಚೇರಿಯ ಮುಂದೆ ಮುತ್ತುರಾಯಸ್ವಾಮಿ ಬಡಾವಣೆಯ ನಾಗರಿಕರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಜಯಂತ್, ಕೃಷ್ಣಮೂರ್ತಿ ಮತ್ತು ಸುಕನ್ಯ ಎಚ್ಚರಿಸಿದರು.

ಗ್ರಾಹಕರ ವೇದಿಕೆಗೆ - ವಿದ್ಯುತ್ ವ್ಯತ್ಯಯದಿಂದಾಗಿ ಗ್ರಾಹಕರಿಗೆ ನಷ್ಟವಾಗಿರುವ ಹಿನ್ನೆಲೆಯಲ್ಲಿ ತೊಂದರೆಗೀಡಾಗಿರುವ ಮನೆಯವರೆಲ್ಲರೂ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ನ್ಯಾಯಪಡೆಯುವುದಾಗಿ ತಿಳಿಸಿದರು.

ವಿದ್ಯುತ್ ಸಮಸ್ಯೆ 

ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್  ಸುವರ್ಣ  ನ್ಯೂಸ್,  ಚಾಮರಾಜನಗರ.

ಚಾಮರಾಜನಗರ (ಅ.9): ಚಾಮರಾಜನಗರ ಜಿಲ್ಲೆಯ ಅನ್ನದಾತರಿಗೆ ಲೋಡ್ ಶೆಡ್ಡಿಂಗ್ ಶಾಕ್ ಎದುರಾಗಿದೆ. ಕಳೆದೊಂದು  ವಾರದಿಂದ  ರೈತರ  ಪಂಪ್  ಸೆಟ್ ಗಳಿಗೆ  ವಿದ್ಯುತ್  ಪೂರೈಕೆಯಲ್ಲಿ  ಭಾರೀ ವ್ಯತ್ಯಯವುಂಟಾಗಿದೆ. ಸರ್ಕಾರಕ್ಕೆ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ.ಮೊದ್ಲೇ ವರುಣನ ಕೃಪೆಯಿಲ್ಲದೆ ಕಂಗೆಟ್ಟ ಅನ್ನದಾತನಿಗೆ ವಿದ್ಯುತ್ ಶಾಕ್ ನಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲ ಅನ್ನೋವಂತಾಗ್ತಿದೆ. 

ಅತ್ತ ಮಳೆ ಇಲ್ಲ, ಇತ್ತ ಕರೆಂಟೂ ಇಲ್ಲ.ಬೆಳೆಗೆ ನೀರುಣಿಸಲು ಅನ್ನದಾತನ ಪರದಾಟ ನಡೆಸುವಂತಾಗಿದೆ. ಪಂಪ್ ಸೆಟ್ಗಳಿಗೆ 7 ಗಂಟೆ ತ್ರೀ ಫೇಸ್ ವಿದ್ಯುತ್ ಕೊಡುವುದಾಗಿ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಅದರೆ ಚಾಮರಾಜನಗರ ಜಿಲ್ಲೆಯಲ್ಲಿ 7 ಗಂಟೆ ಇರಲಿ, 2 ಗಂಟೆಯು ತ್ರೀಫೇಸ್  ಕರೆಂಟ್ ನೀಡದ ಚೆಸ್ಕಾಂ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಯಾವುದೇ ಮುನ್ಸೂಚನೆ ನೀಡದೆ ಕಳೆದೊಂದು ವಾರದಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ. ಈಗಾಗ್ಲೇ ಜಿಲ್ಲೆಯಲ್ಲಿರುವ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದ ವೇಳೆಯೂ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮಾಡುವಂತೆ ಸೂಚನೆ ಕೊಟ್ಟಿದ್ದರು. ಆದ್ರೆ ವಿದ್ಯುತ್ ಅಭಾವದಿಂದಾಗಿ ಚೆಸ್ಕಾಂ ವಿದ್ಯುತ್ ಪೂರೈಕೆ ಮಾಡಲಾಗ್ತಿಲ್ಲ.ಇದರಿಂದ ಬೆಳೆಗಳು ಒಣಗುವ ಪರಿಸ್ಥಿತಿ ಬಂದಿದೆ ಅಂತಾ ರೈತರು ಆಕ್ರೋಶ ಹೊರಹಾಕುತ್ತಾರೆ.

ಕರ್ನಾಟಕದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್, ಸಚಿವ ದರ್ಶನಾಪುರ ಹೇಳಿದ್ದಿಷ್ಟು

ಇನ್ನೂ ಜಿಲ್ಲೆಯಲ್ಲಿ ರೈತರ 74 ಸಾವಿರಕ್ಕೂ ಹೆಚ್ಚು ಪಂಪ್ ಸೆಟ್ಗಳಿದೆ. ಪಂಪ್ಸೆಟ್ ಅವಂಬಿಸಿ  ಬಾಳೆ, ಕಬ್ಬು, ಅರಿಶಿನ, ತರಕಾರಿ ಮೊದಲಾದ ಬೆಳೆಗಳನ್ನು ಅನ್ನದಾತರು ಬೆಳೆದಿದ್ದಾರೆ. ಈಗ ಬೆಳೆದು ನಿಂತ ಬೆಳೆಗೆ ಮಳೆಯು ಇಲ್ಲ, ಅತ್ತ ಪಂಪ್ಸೆಟ್ ಮೂಲಕ ನೀರುಣಿಸಲು ಕರೆಂಟು ಇಲ್ಲ ಅಂತಿದ್ದಾರೆ. ಇನ್ನೂ ಅಧಿಕಾರಿಗಳ ಬಗ್ಗೆ ಲೋಡ್ ಶೆಡ್ಡಿಂಗ್ ಬಗ್ಗೆ ಕೇಳಿದ್ರೆ ಎರಡು ದಿನಗಳಿಂದಷ್ಟೇ ಸಮಸ್ಯೆಯಾಗಿದೆ. ಮಳೆ ಕಡಿಮೆ ಹಾಗೂ ವಿದ್ಯುತ್ ಕೊರತೆ ಹಿನ್ನಲೆಯಲ್ಲಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕೊಡಲಾಗ್ತಿಲ್ಲ ಅಂತಾ ಮಾಹಿತಿ ಕೊಡ್ತಿದ್ದಾರೆ. ಆದ್ರೆ ರೈತರು ಮಾತ್ರ ಕರೆಂಟ್ ಕೊಡದೆ ಕೈ ಕೊಟ್ಟ ಸರ್ಕಾರಕ್ಕೆ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ವಿಷ ಕುಡಿಯುವ ಪರಿಸ್ಥಿತಿ ಉದ್ಬವಾಗುತ್ತೆ ಅಂತಾರೆ ಅನ್ನದಾತರು.

ಒಟ್ನಲ್ಲಿ  ಜಿಲ್ಲೆಯ  ಅನ್ನದಾತರು  ಮಳೆ ಇಲ್ಲದೇ ಮೊದ್ಲೇ ಕಂಗೆಟ್ಟಿದ್ದಾರೆ. ಇದೀಗಾ ಗಾಯದ ಮೇಲೆ ಬರೆ ಅನ್ನುವಂತೆ ಪಂಪ್ ಸೆಟ್ ಗಳಿಗೆ 7 ಗಂಟೆ ಬದಲು 2 ಗಂಟೆಯಷ್ಟೇ ವಿದ್ಯುತ್ ಪೂರೈಕೆಯಾಗ್ತಿದೆ.ಇನ್ನೂ ಮುಂದಿನ ದಿನಗಳಲ್ಲೂ ವಿದ್ಯುತ್ ಪೂರೈಕೆ ಇಲ್ಲದಿದ್ರೆ ಅನ್ನದಾತನಿಗೆ ಸಂಕಷ್ಟ ಎದುರಾಗಲಿದೆ.. 

ಮಳೆ ಬಾರದಿದ್ರೂ ಲೋಡ್‌ ಶೆಡ್ಡಿಂಗ್‌ ಮಾಡೊಲ್ಲ: ಪ್ರತಿನಿತ್ಯ 40 ಕೋಟಿ ರೂ. ವಿದ್ಯುತ್‌ ಖರೀದಿ ಮಾಡಲಾಗ್ತಿದೆ

Follow Us:
Download App:
  • android
  • ios