ತುಮಕೂರು : ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯಿಂದ ಆಚರಣೆ
ನಗರದ ಟೌನ್‌ಹಾಲ್ ಮುಂಭಾಗ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಭೀಮ ಕೋರೆಗಾಂವ್ 206 ನೇ ವಿಜಯೋತ್ಸವ ದಿನವನ್ನು ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ತುಮಕೂರು : ನಗರದ ಟೌನ್‌ಹಾಲ್ ಮುಂಭಾಗ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಭೀಮ ಕೋರೆಗಾಂವ್ 206 ನೇ ವಿಜಯೋತ್ಸವ ದಿನವನ್ನು ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಭೀಮ ಕೋರೆಗಾಂವ್ 206ನೇ ವಿಜಯೋತ್ಸವಕ್ಕೆ ನಗರಪಾಲಿಕೆಯ ಮೇಯರ್ ಪ್ರಭಾವತಿ ಸುಧೀಶ್ವರ್, ಡಾ.ಅಂಬೇಡ್ಕರ್ ಮತ್ತು ಕೋರೆಗಾಂವ್ ಸ್ಥಬ್ದ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿ, ಭೀಮ ಕೋರೆಗಾಂವ್ ವಿಜಯೋತ್ಸವ ಇಡೀ ನಾಡಿನ ಶೋಷಿತ ಸಮುದಾಯಗಳ ವಿಜಯೋತ್ಸವವಾಗಿದೆ. ಐದುನೂರು ಜನ ಮಹರ್ ಸೈನಿಕರು, 28 ಸಾವಿರ ಶಸ್ತ್ರ ಸಜ್ಜಿತ ಮರಾಠ ಪೇಶ್ವೆ ಸೈನಿಕರನ್ನು ಸದೆಬಡಿದ ದಿನವನ್ನು ಭೀಮ ಕೋರೆಗಾಂವ್ ವಿಜಯೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇತಿಹಾಸದಲ್ಲಿ ಹುದುಗಿ ಹೋಗಿದ್ದ ಸತ್ಯವನ್ನು ನಮ್ಮ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಹೆಕ್ಕಿ ತೆಗೆದು,ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.ಇದು ನಮ್ಮೆಲ್ಲರ ಸ್ವಾಭಿಮಾನವನ್ನು ಎತ್ತಿ ಹಿಡಿದ ದಿನವಾಗಿದೆ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, 206 ವರ್ಷಗಳ ಹಿಂದೆ ಮರಾಠರ ಪೇಶ್ವೆ ಸೈನಿಕರು, ಆಚರಿಸುತಿದ್ದ ಅಸ್ಪೃಶೃತೆಯ ವಿರುದ್ದ ಸಿಡಿದ್ದೆದ್ದು, ಶೋಷಿತ ವಲಯದ ಸೈನಿಕರ ವಿರುದ್ದ ದಂಡೆತ್ತಿ ಬಂದಿದ್ದ 28 ಸಾವಿರ ಶಸ್ತ್ರ ಸಜ್ಜಿತ ಮರಾಠ ಸೈನ್ಯವನ್ನು ಐದುನೂರು ಮಹರ್ ಸೈನಿಕರು ಬಗ್ಗು ಬಡಿದ ದಿನ. ನಮ್ಮ ಸೈನಿಕರು ಸ್ವಾಭಿಮಾನಕ್ಕಾಗಿ ತಮ್ಮ ಶೌರ್ಯ ಮೆರೆದ ದಿನವನ್ನು ಭೀಮ ಕೋರೆಗಾಂವ್ ಹೋರಾಟದ ವಿಜಯೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇತಿಹಾಸದಲ್ಲಿ ಮುಚ್ಚಿ ಹೋಗಿದ್ದ ಘಟನೆಯನ್ನು ಬೆಳಕಿಗೆ ತಂದವರು ಆಂಬೇಡ್ಕರ್, ಅಂಬೇಡ್ಕರ್ ಬದುಕಿದ್ದಷ್ಟು ದಿನವೂ ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿ ಕೋರೆಗಾಂವ್ ಸ್ಮಾರಕಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಅದೇ ಪದ್ದತಿಯನ್ನು ನಾಡಿನ ಎಲ್ಲಾ ದಲಿತ,ಸ್ವಾಭಿಮಾನಿ ಶೋಷಿತರು ಮುಂದುವರೆಸಿಕೊಂಡು ಬರುತ್ತಿದ್ದೇವೆ. ಈ ಯುದ್ದದಲ್ಲಿ ಸಾವನ್ನಪ್ಪಿದ ನೂರಾರು ಮಹರ್ ಸೈನಿಕರ ಸ್ಪೂರ್ತಿ ನಮ್ಮದಾಗಲಿ ಎಂದರು.
ಕಾರ್ಯಕ್ರಮದಲ್ಲಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ,ಪಾಲಿಕೆ ಸದಸ್ಯರಾದ ನಯಾಜ್‌ಅಹಮದ್,ಹೆಚ್.ಡಿ.ಕೆ.ಮಂಜು ನಾಥ್,ವಕೀಲ ಟಿ.ಆರ್.ನಾಗೇಶ್,ಮುಖಂಡರಾದ ಸುರೇಶಕುಮಾರ್,ಗುರುಪ್ರಸಾದ್ ಟಿ.ಆರ್.ನಾಗರಾಜು, ದರ್ಶನ್,ಮಾರುತಿ.ಸಿ, ನಾರಾಯಣ.ಎಸ್,ಶಬ್ಬೀರ ಅಹಮದ್,ರಾಮಚಂದ್ರರಾವ್ .ಎಸ್,ಆಟೋ ಶಿವರಾಜು,ಶ್ರೀನಿವಾಸ್.ಎನ್.,ಗಂಗಾಧರ್ ಜಿ.ಆರ್., ಮನು.ಟಿ., ನೀತಿನ್,ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು.