Asianet Suvarna News Asianet Suvarna News

Tumakur : ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ಖಾಸಗೀಕರಣ ಬೇಡ

ಸ್ಮಾರ್ಚ್‌ ಸಿಟಿ ವತಿಯಿಂದ ನಿರ್ಮಿಸಿರುವ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಎಲ್ಲಾ ಕ್ರೀಡೆಗಳ ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕು. ಸ್ಪೋರ್ಚ್‌ ಕಾಂಪ್ಲೆಕ್ಸ್‌ ಎಂದಿಗೂ ಖಾಸಗೀಕರಣ ಮಾಡಬಾರದು ಹಾಗೂ ಎಲ್ಲಾ ಕ್ರೀಡೆಗಳಿಗೂ ತರಬೇತುದಾರರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ ಇಂದು ಜಿಲ್ಲೆಯ ಎಲ್ಲಾ ಕ್ರೀಡಾಸಂಸ್ಥೆಗಳು ಹಾಗೂ ಕ್ರೀಡಾಪುಟಗಳಿಂದ ಸ್ಟೇಡಿಯಂ ಮುಂಭಾಗದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Tumakur  Sports complex should not be privatized snr
Author
First Published Feb 20, 2023, 5:15 AM IST

 ತುಮಕೂರು :  ಸ್ಮಾರ್ಚ್‌ ಸಿಟಿ ವತಿಯಿಂದ ನಿರ್ಮಿಸಿರುವ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಎಲ್ಲಾ ಕ್ರೀಡೆಗಳ ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕು. ಸ್ಪೋರ್ಚ್‌ ಕಾಂಪ್ಲೆಕ್ಸ್‌ ಎಂದಿಗೂ ಖಾಸಗೀಕರಣ ಮಾಡಬಾರದು ಹಾಗೂ ಎಲ್ಲಾ ಕ್ರೀಡೆಗಳಿಗೂ ತರಬೇತುದಾರರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ ಇಂದು ಜಿಲ್ಲೆಯ ಎಲ್ಲಾ ಕ್ರೀಡಾಸಂಸ್ಥೆಗಳು ಹಾಗೂ ಕ್ರೀಡಾಪುಟಗಳಿಂದ ಸ್ಟೇಡಿಯಂ ಮುಂಭಾಗದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಅಧೀನದಲ್ಲಿದ್ದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಸ್ಮಾರ್ಚ್‌ಸಿಟಿ ಅನುದಾನದಲ್ಲಿ ಹೊಸದಾಗಿ 68 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ್ದು, ಕಾಮಗಾರಿ ಪೂರ್ಣಗೊಂಡು 8 ತಿಂಗಳು ಕಳೆದರೂ ಕ್ರೀಡಾಪಟುಗಳ ಅಭ್ಯಾಸಕ್ಕೆ ತೆರವು ಮಾಡಿಲ್ಲ. ಜೊತೆಗೆ, ಕ್ರೀಡಾಂಗಣದ ಪಕ್ಕದಲ್ಲಿಯೇ ನಿರ್ಮಿಸಿರುವ 4 ಅಂತಸ್ಥಿನ ಸ್ಪೋಟ್ರ್ಸ ಕಾಂಪ್ಲೆಕ್ಸ್‌ನ್ನು ಕ್ರೀಡಾಂಗಣದ ನಿರ್ವಹಣೆಗೆ ಸಂಪನ್ಮೂಲ ಕ್ರೂಢೀಕರಣದ ಹೆಸರಿನಲ್ಲಿ ಖಾಸಗೀಕರಣ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ನೂರಾರು ಕ್ರೀಡಾಪಟುಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ನಿರತ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸೊಗಡು ಶಿವಣ್ಣ, ಸ್ವತಃ ಕ್ರೀಡಾಪಟುವಾಗಿ,ಭವಿಷ್ಯದ ಕನಸು ಕಾಣುತ್ತಿರುವ ಸಣ್ಣ ಸಣ್ಣ ಮಕ್ಕಳು ಕ್ರೀಡಾಂಗಣದ ಹೊರಗೆ, ಉರಿಬಿಸಿಲಿನಲ್ಲಿಯೂ ಪ್ರತಿಭಟನೆ ನಡೆಸುತ್ತಿರುವುದನ್ನು ನೋಡಿದರೆ ನಾಚಿಕೆ ಎನಿಸುತ್ತದೆ. ಭವಿಷ್ಯದಲ್ಲಿ ಒಳ್ಳೆಯ ಕ್ರೀಡಾಪಟುವಾಗಿ, ಒಲಂಪಿಕ್‌ನಲ್ಲಿ ದೇಶಕ್ಕೆ ಪದಕ ತರಬೇಕು ಎಂಬ ಕನಸು ಹೊತ್ತಿರುವ ಮಕ್ಕಳಿಗೆ ಕಳೆದ ನಾಲ್ಕು ವರ್ಷಗಳಿಂದ ಅಭ್ಯಾಸಕ್ಕೆ ಜಾಗವಿಲ್ಲ ಎಂದರೆ, ಇನ್ನೂ ಪದಕದ ಮಾತೆಲ್ಲಿ ?. ಜಿಲ್ಲಾಡಳಿತ, ಕ್ರೀಡಾ ಇಲಾಖೆ ಹಾಗೂ ಸರಕಾರ ಇದನ್ನು ಅರ್ಥ ಮಾಡಿಕೊಡು ಕೂಡಲೇ ಕ್ರೀಡಾಂಗಣ ಉದ್ಘಾಟನೆ ಮುಂದಾಗಬೇಕು. ಈ ವಿಚಾರವಾಗಿ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಹಾಗೂ ಕ್ರೀಡಾಸಚಿವರನ್ನು ಕಂಡು ಮಾತುಕತೆ ನಡೆಸಲಿದ್ದೇನೆ ಎಂದರು.

ಕ್ರೀಡಾಪಟುಗಳ ಅನುಕೂಲಕ್ಕೆಂದು ನಿರ್ಮಿಸಿರುವ ಸ್ಪೋಟ್ಸ್‌ರ್‍ ಕಾಂಪ್ಲೆಕ್ಸ್‌ನ್ನು ಖಾಸಗೀಕರಣ ಮಾಡಲು ಎಂದಿಗೂ ಬಿಡುವುದಿಲ್ಲ. ಕ್ರೀಡಾಂಗಣದ ನಿರ್ವಹಣೆಗೆ ಸರಕಾರದಿಂದ ಅನುದಾನ ನೀಡಲಿ, ಇಲ್ಲವೇ ಕ್ರೀಡಾ ಸಂಸ್ಥೆಗಳಿಗೆ ಮಳಿಗೆ ಹಂಚುವ ಮೂಲಕ ಅವರಿಂದ ಬಾಡಿಗೆ ವಸೂಲಿ ಮಾಡಲಿ, ಬದಲಾಗಿ ಒಂದೇ ಸಂಸ್ಥೆಗೆ ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿದ ಕಾಂಪ್ಲೆಕ್ಸ್‌ ನೀಡುವುದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು.

ಕ್ರೀಡಾಪಟು ಹಾಗೂ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಅನಿಲ್‌ ಮಾತನಾಡಿ, ಕ್ರೀಡಾಂಗಣದಲ್ಲಿ ನಮಗೆ ಅಭ್ಯಾಸಕ್ಕೆ ಅವಕಾಶ ಮಾಡಿಕೊಡಿ ಎಂದು ಹಲವಾರು ಬಾರಿ ನಾನು ಸೇರಿದಂತೆ ಕ್ರೀಡಾಪಟುಗಳು ಶಾಸಕರ ಕಾಲಿಗೆ ಬಿದ್ದು ಕೇಳಿಕೊಂಡಿದ್ದೇವೆ. ಆದರೆ ಇದುವರೆಗೂ ನಮ್ಮ ಮನವಿಗೆ ಸ್ಪಂದಿಸಿಲ್ಲ. ಬದಲಾಗಿ ಸ್ಪೋರ್ಚ್‌ ಕಾಂಪ್ಲೆಕ್ಸ್‌ನ್ನು ಖಾಸಗೀಕರಣ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.

ಇದರ ಹಿಂದೆ ಯಾವ ಉದ್ದೇಶವಿದೆಯೋ ಗೊತ್ತಿಲ್ಲ.ಕಬ್ಬಡಿ,ವಾಲಿಬಾಲ್‌, ಪುಟ್‌ಬಾಲ್‌, ಬ್ಯಾಸ್ಕಟ್‌ಬಾಲ್‌,ಟೆಕಾಂಡೋ,ಕರಾಟೆ,ಶೂಟಿಂಗ್‌,ಟೆನ್ನಿಸ್‌, ಟೇಬಲ್‌ ಟೆನ್ನಿಸ್‌ ಸೇರಿದಂತೆ ಎಲ್ಲಾ ಕ್ರೀಡೆಗಳಿಗೂ ಅಭ್ಯಾಸಕ್ಕೆ ಕ್ರೀಡಾಂಗಣದ ಅವಶ್ಯಕತೆ ಇದೆ.ಹಾಗಾಗಿ ಕೂಡಲೇ ಸ್ಟೇಡಿಯಂ ಉದ್ಘಾಟಿಸಿ,ಅಭ್ಯಾಸಕ್ಕೆ ಅವಕಾಶ ನೀಡಬೇಕು. ಕ್ರೀಡಾಸಮುಚ್ಚ ಯದಲ್ಲಿ ಎಲ್ಲಾ ಕ್ರೀಡಾ ಸಂಸ್ಥೆಗಳಿಗೂ ಮಳಿಗೆ ನೀಡಿ,ಕ್ರೀಡೆಗಳು ಬೆಳೆಯಲು ಸಹಕರಿಸುವಂತೆ ಒತ್ತಾಯಿಸಿದರು.

ಶೂಟಿಂಗ್‌ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು, ಒಲಂಪಿಕ್‌ಗೆ ಅಭ್ಯಾಸದಲ್ಲಿ ತೊಡಗಿರುವ ಕಿರಣ್‌ ನಂದನ್‌ ಮಾತನಾಡಿ, ಶೂಟಿಂಗ್‌ನಲ್ಲಿ ಚಿನ್ನದ ಪದಕ ಪಡೆದ ನನಗೆ ಸರಕಾರವೇ 10 ಲಕ್ಷ ರು. ಗಳನ್ನು ನೀಡಿ, ಒಲಂಪಿಕ್‌ಗೆ ತಯಾರಿ ನಡೆಸುವಂತೆ ಸೂಚನೆ ನೀಡಿದೆ. ಆದರೆ ತುಮಕೂರು ನಗರದಲ್ಲಿ ಅಭ್ಯಾಸಕ್ಕೆ ಅಂಕಣವೇ ಇಲ್ಲ. ಅಭ್ಯಾಸಕ್ಕೆ ಒಂದು ಕಡೆ, ಪಿಟ್ನೇಸ್‌ಗೆ ಒಂದು ಕಡೆ ಎಂದು ಹೋಗಲು ಆಗುವುದಿಲ್ಲ. ಕ್ರೀಡಾಂಗಣ ಒಪನ್‌ ಆದರೆ ಎರಡು ಒಂದೇ ಕಡೆ ಇರುವುದರಿಂದ ಹೆಚ್ಚಿನ ಒತ್ತು ನೀಡಬಹುದು. ಆದ್ದರಿಂದ ಜಿಲ್ಲಾಡಳಿತ, ಶಾಸಕರು ಇತ್ತ ಗಮನ ಹರಿಸಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆಯ ಧನಿಯಕುಮಾರ್‌, ನಗರಸಭೆ ಮಾಜಿ ಸದಸ್ಯ ಕೆ.ಪಿ.ಮಹೇಶ್‌, ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್‌, ಮಂಜನಾಥ್‌, ಕೃಷಿಕ್‌ ಮಂಜುನಾಥ್‌, ನವೀನ್‌, ಟಿ.ಆರ್‌.ದಯಾನಂದ್‌, ಬಿ.ಎಸ್‌.ಪರಮೇಶ್‌, ಸಂಗಮೇಶ್‌, ಜಯಪ್ರಕಾಶ್‌, ಧನುಷ್‌, ತೇಜಸ್‌, ಹರ್ಷ, ಚೇತನ, ಪಂಕಜ್‌ ಸೇರಿದಂತೆ ನೂರಾರು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

Follow Us:
Download App:
  • android
  • ios