Asianet Suvarna News Asianet Suvarna News

Tumakur : 160 Rs ಗೆ ವೀಳ್ಯದೆಲೆ ಮಾರಾಟ

ತಾಲೂಕಿನ ತೋವಿನಕೆರೆಯ ಸಂತೆಯಲ್ಲಿ ವೀಳ್ಯದೆಲೆ ಒಂದು ಕಟ್ಟಿಗೆ ರು.160 ದಾಖಲೆ ಬೆಲೆಗೆ ಮಾರಾಟವಾಗಿದ್ದು, ಇದುವರೆಗೂ ಈ ಬೆಲೆ ತಲುಪಿರಲಿಲ್ಲ. ಮಧುಗಿರಿ ತಾಲೂಕು ಲಿಂಗಸಂದ್ರದ ಬೆಳೆಗಾರ ನಾಗರಾಜು ಸಂತೆಗೆ ತಂದಿದ್ದ ವೀಳ್ಯೆದೆಲೆ ಇದುವರೆಗೂ ಮಾರಾಟವಾಗದ ಬೆಲೆಗೆ ಮಾರಾಟವಾಯಿತು.

Tumakur  Selling betel leaf for Rs 160 snr
Author
First Published Feb 9, 2023, 5:50 AM IST

 ಜಿ.ಎಲ್‌.ಸುರೇಶ್‌

 ಕೊರಟಗೆರೆ :  ತಾಲೂಕಿನ ತೋವಿನಕೆರೆಯ ಸಂತೆಯಲ್ಲಿ ವೀಳ್ಯದೆಲೆ ಒಂದು ಕಟ್ಟಿಗೆ ರು.160 ದಾಖಲೆ ಬೆಲೆಗೆ ಮಾರಾಟವಾಗಿದ್ದು, ಇದುವರೆಗೂ ಈ ಬೆಲೆ ತಲುಪಿರಲಿಲ್ಲ. ಮಧುಗಿರಿ ತಾಲೂಕು ಲಿಂಗಸಂದ್ರದ ಬೆಳೆಗಾರ ನಾಗರಾಜು ಸಂತೆಗೆ ತಂದಿದ್ದ ವೀಳ್ಯೆದೆಲೆ ಇದುವರೆಗೂ ಮಾರಾಟವಾಗದ ಬೆಲೆಗೆ ಮಾರಾಟವಾಯಿತು.

ತೋವಿನಕೆರೆ ಸಂತೆಯಲ್ಲಿ ವೀಳ್ಯದೆಲೆ ಮಾರಾಟ ಹಲವು ದಶಕಗಳಿಂದ ನಡೆಯುತ್ತಿದ್ದು, ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿ ತೋವಿನಕೆರೆ ಸುತ್ತಮುತ್ತಲಿನ ಪ್ರದೇಶಗಳ ವೀಳ್ಯದೆಲೆ ಬೆಳೆಯುವ ರೈತರು ಇಲ್ಲಿನ ಸಂತೆಗೆ ತಂದು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಾರೆ. ಶಿರಾ, ಮಧುಗಿರಿ, ಕೊಡಗೇನಹಳ್ಳಿ, ಗುಬ್ಬಿ, ಹಿಂದೂಪುರ, ತುಮಕೂರು ಮತ್ತು ಚೋಳೂರಿನಿಂದ ಖರೀದಿದಾರರು ಬರುತ್ತಾರೆ.

Chikkaballapur: ಮಾರುಕಟ್ಟೆ ಇತಿಹಾಸದಲ್ಲೇ ಇದೇ ಮೊದಲು: ವೀಳ್ಯದೆಲೆಗೆ ಚಿನ್ನದ ದರ..!

ವೀಳ್ಯೆದೆಲೆ ಬಳ್ಳಿಯನ್ನು ಮರದಿಂದ ಬಿಡಿಸಿ ನೆಲಕ್ಕೆ ಹದಿಯುತ್ತಿದ್ದಾರೆ. ಚಿಗುರು ಬರುವುದು ತಡವಾಗುತ್ತದೆ, ಇದೇ ವಾತಾವರಣ ಮುಂದುವರೆದರೆ ಎಲೆಗಳು ತಡವಾಗಿ, ಬೆಲೆ ಮತ್ತಷ್ಟುಹೆಚ್ಚಾಗಬಹುದು ಎನ್ನುತ್ತಾರೆ ಖರೀದಿದಾರ ಹರೀಶ್‌.

ಹಬ್ಬಗಳು, ಮದುವೆ, ಜಾತ್ರೆಗಳು ನಡೆಯುತ್ತಿದ್ದು, ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷ ಬಿದ್ದ ನಾರೀ ಮಳೆಯಿಂದ ವೀಳ್ಯೆದೆಲೆ ಇಳುವರಿ ಕಡಿಮೆಯಾಗಿದ್ದು, ಬೆಲೆ ಹೆಚ್ಚಾಗಿದೆ. 100 ಮಂಡಿ ಬರುವ ಜಾಗದಲ್ಲಿ ಕೇವಲ 30 ಮಂಡಿಗಳು ಕೂಡ ಸಿಗುತ್ತಿಲ್ಲ ಎನ್ನುತ್ತಾರೆ ಲಿಂಗಸಂದ್ರ ವೀಳ್ಯೆದೆಲೆ ಬೆಳೆಗಾರ ನಟರಾಜು.

ಪಾನ್ ಒಂದಕ್ಕೆ 11 ಸಾವಿರ ರೂಪಾಯಿ ದರ ನಿಗದಿ

ಊಟವಾದ ಮೇಲೆ ಪಾನ್‌ (ಎಲೆ ಅಡಿಕೆ) ತಿನ್ನುವುದು ನಮ್ಮ ಭಾರತೀಯ ಆಹಾರ ಸಂಸ್ಕೃತಿಯ ಒಂದು ಭಾಗ. ಊಟವಾದ ಮೇಲೆ ಒಂದು ಎಲೆ ಅಡಿಕೆ ಹಾಕಿದರೆ ಬಹುತೇಕರಿಗೆ ಅದೇನೋ ಸಮಾಧಾನ. ಅಲ್ಲದೇ ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇವತ್ತು ಎಲೆ ಅಡಿಕೆ ಕಾಲಕ್ಕೆ ತಕ್ಕಂತೆ ವಿವಿಧ ಆಯಾಮಗಳನ್ನು ಪಡೆದಿದೆ. ಉತ್ತರ ಭಾರತದ ಕಡೆಗೆ ಇದನ್ನು ಪಾನ್‌ ಎಂದರೆ ನಮ್ಮ ರಾಜ್ಯದಲ್ಲಿ ಬೀಡಾ ಎಂದು ಕರೆಯುತ್ತಾರೆ. ಅಲ್ಲದೇ ವಿವಿಧ ವೆರೈಟಿ ರೂಪದಲ್ಲಿ ಪಾನ್‌ ಮಸಾಲಾ ಲಭ್ಯವಿದೆ. ಗ್ರಾಹಕರ ಆಸೆ, ಅಭಿರುಚಿಗೆ ತಕ್ಕಂತೆ ಪಾನ್‌ಗಳನ್ನು ವೈವಿಧ್ಯಮಯವಾಗಿ ಮಾಡಲಾಗುತ್ತಿದ್ದು, ಇದಕ್ಕೆ ತಕ್ಕಂತೆ ಬೆಲೆಯೂ ಇರುತ್ತದೆ. ಇಷ್ಟೆಲ್ಲಾ ಪುರಾಣ ಏಕೆ ಅಂತ ಕೇಳ್ತಿದ್ದೀರಾ ಮುಂದೆ ಓದಿ.

ರೆಡ್ಡಿ ಮಗಳ ಮದುವೆಗೆ ಪಾನ್ ಬೀಡಾ ನೀಡಲು ಬಂದಿದ್ದ ಚಲುವೆಯವರು ಯಾರು,ಎಲ್ಲಿಯವರು ಗೊತ್ತೆ ?

ಇಲ್ಲೊಂದು ಕಡೆ ಪಾನ್‌ಗೆ ನಿಗದಿಪಡಿಸಿದ ಬೆಲೆ ನೋಡಿದರೆ ಪಾನ್‌ ಬದಲು ಇದೇ ಬೆಲೆಯ ಒಂದು ಸ್ಮಾರ್ಟ್‌ಫೋನ್ (smartphone) ಕೊಳ್ಳೋಣ. ಕನಿಷ್ಟ ಒಂದು ವರ್ಷ ಆದ್ರೂ ಉಜ್ಜಿ ಬಿಸಾಕ್ಬಹುದು ಅಂತ ನೀವು ಅನ್ಕೊಳೋದಂತು ಗ್ಯಾರಂಟಿ. ಹೌದು ಉತ್ತರಪ್ರದೇಶದ(Uttar Pradesh) ಮೀರತ್‌ನ ಬೇಗಂ ಬ್ರಿಡ್ಜ್ ರಸ್ತೆಯಲ್ಲಿರುವ (Begum Bridge Road) ಅಂಗಡಿಯೊಂದು ಪಾನ್ ಒಂದಕ್ಕೆ 11 ಸಾವಿರ ರೂಪಾಯಿ ದರ ನಿಗದಿಪಡಿಸಿದೆ. ಮೀರತ್‌ನ ನವಾಬ್-ಎ-ಪಾನ್ ಭಂಡಾರ್ ಎಂಬ ಪಾನ್ ಅಂಗಡಿಯಲ್ಲಿ ಒಂದು ವಿಶೇಷ ಪಾನ್‌ ದರ ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಮೀರುತ್ತಿದೆ. ಇಲ್ಲಿ ಸುಮಾರು 200 ಬಗೆ ಬಗೆಯ ಪಾನ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಪ್ರತಿಯೊಂದು ಪಾನ್‌ ಅನ್ನು ವಿಶೇಷವಾಗಿ ತಯಾರಿಸಲಾಗುತ್ತಿದೆ. ಇಲ್ಲೀಗ ನಿರ್ದಿಷ್ಟವಾದ ಹಬ್ಬಕೆಂದು ತಯಾರಿಸಿದ ಪಾನ್‌ ದರ ಮಾತ್ರ ಪಾನ್ ಪ್ರಿಯರನ್ನು ಬೆಚ್ಚಿ ಬೀಳಿಸುತ್ತಿದೆ

Follow Us:
Download App:
  • android
  • ios