ಹುಬ್ಬಳ್ಳಿ[ಸೆ.2]  ಹುಬ್ಬಳ್ಳಿಯ ಕರ್ಕಿ ಬಸವೇಶ್ವರ ನಗರದಲ್ಲಿ  ನಿಧಿಗಾಗಿ ಮನೆ ಅಗೆಯುತ್ತಿದ್ದವರನ್ನು ಬಂಧಿಸಲಾಗಿದೆ. ಮನೆ ಮಾಲೀಕರಾದ ತುಳಸವ್ವ ನಾಗಸಮುದ್ರ ಹಾಗೂ ಮಾರುತಿ ನಾಗಸಮುದ್ರ ಅವರನ್ನು ಬಂಧಿಸಲಾಗಿದೆ.

ಮನೆಯಲ್ಲಿ ನಿಧಿ ಇದೆ ಎಂದು ಯಾರೋ ಹೇಳಿದ್ದನ್ನೇ ನಂಬಿದ್ದ ಆರೋಪಿಗಳು. ಕೃತ್ಯಕ್ಕೆ ತಮ್ಮ ದೂರದ ಸಂಬಂಧಿಗಳನ್ನೂ ಕರೆಸಿದ್ದರು. ಆಂಧ್ರ ಮೂಲದ ಸಂಬಂಧಿಕರು ಬಂಧಿದ್ದರು.

ನಿಧಿಯ ಆಸೆಗೆ ದೇವರ ಜಗಲಿಯನ್ನ ಅಗೆಯುತ್ತಿದ್ದರು. ಮನೆಯಿಂದ ಬರುತ್ತಿದ್ದ ಶಬ್ದ ಕೇಳಿ ಅನುಮಾನಗೊಂಡ ಸ್ಥಳೀಯರಿಂದ ಪೊಲೀಸರಿಗೆ ದೂರು. ಸ್ಥಳಕ್ಕೆ ಬಂದು ನೋಡಿ ಅವಕ್ಕಾದ ಪೊಲೀಸರು. ಮನೆ ಮಾಲೀಕರಾದ ತುಳಸವ್ವ, ಮಾರುತಿ ನೇರಿ ನಾಲ್ವರ ಬಂಧನ.

ಪೊಲೀಸರು ಬಂದ ಸುದ್ದಿ ಕೇಳಿ ಪರಾರಿಯಾದ ಇನ್ನಿಬ್ಬರು ಆರೋಪಿಗಳು. ಪರಾರಿಯಾದವರ ಬಂಧನಕ್ಕೆ ಬೆಂಡೀಗೇರಿ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.  ಕೃತ್ಯಕ್ಕೆ ಬಳಸುತ್ತಿದ್ದ ಗುದ್ದಲಿ, ಪಿಕಾಸಿ ಹಾಗೂ ಲೋಹ ಶೋಧಕ ಯಂತ್ರ ಪೊಲೀಸರ ವಶಕ್ಕೆ ಪಡೆಯಲಾಗಿದೆ.