ಧಾರವಾಡ(ಜ.25): ಲಾರಿ ಹಾಗೂ ಟಿಪ್ಪರ್‌ ನಡುವೆ ಸಂಭವಿಸಿದ ಭೀಕರ ಅಪಘಾತದಿಂದ ಎರಡು ವಾಹನಗಳು ಹೊತ್ತಿ ಉರಿದು, ಚಾಲಕ ಸಜೀವವಾಗಿ ದಹನವಾದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಇಂದು(ಶನಿವಾರ) ನಡದಿದೆ.

ಮೃತ ಚಾಲಕನ ಹೆಸರು ತಿಳಿದು ಬಂದಿಲ್ಲ. ಘಟನೆಯಿಂದ ಹುಬ್ಬಳ್ಳಿ ಕಾರವಾರ ರಾಷ್ಟ್ರೀಯ ಹೆದ್ದಾರಿ ಸಂಚಾರ ಎರಡು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತು. ಲಾರಿ ಮತ್ತು ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಡೀಸೆಲ್ ಟ್ಯಾಂಕ್‌ ಸ್ಫೋಟಗೊಂಡ ಬೆಂಕಿಹೊತ್ತಿಕೊಂಡಿದ್ದು, ಟಿಪ್ಪರ್‌ನಲ್ಲಿದ್ದ ಚಾಲಕ ವಾಹನದಲ್ಲೇ ಸಜೀವ ದಹನವಾಗಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಲಾರಿ ಚಾಲಕ ಮತ್ತು‌ ಕ್ಲೀನರ್ ಅಪಘಾತ ಸಂಭವಿಸುತ್ತಿದ್ದಂತೆ ಇಳಿದು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದಾರೆ. ಕಲಘಟಗಿ ಠಾಣೆಯ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. 

ಲಾರಿ ಹಾಗೂ‌ ಟಿಪ್ಪರ್‌ನಲ್ಲಿ ಸರಕು ಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಆದರೆ ಎಲ್ಲಿಯ ವಾಹನಗಳಿವು? ಯಾವ ಕಡೆ ಹೊರಟಿದ್ದವು ಎಂಬ ಮಾಹಿತಿ ಬಯಲಾಗಬೇಕಿದೆ. ಈ ಸಂಬಂಧ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.