ಬೀದರ್[ಜ.22]: ಲಾರಿಯೊಂದು ಹರಿದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ಬೀದರ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9 ರ ಮಿನಕೇರಾ ಕ್ರಾಸ್ ಬಳಿ ಇಂದು[ಬುಧವಾರ] ಬೆಳಗ್ಗೆ ನಡೆದಿದೆ. ಮೃತರನ್ನು ಅನ್ಸರ್ ಬಸಂತಪೂರ್, ವಿಜಯ ಕುಮಾರ್ ಬಸಂತಪೂರ್, ಇಸ್ಮೈಲ್ ಎಂದು ಗುರುತಿಸಲಾಗಿದೆ. 

ಮೃತರು ಗೂಡ್ಸ್ ವಾಹನದಲ್ಲಿ ಈರುಳ್ಳಿ ತುಂಬಿಕೊಂಡು ಮನ್ನಾ ಖೇಳಿ ಕಡೆಗೆ ಹೊರಟ್ಟಿದ್ದರು. ಮಿನಕೇರಾ ಕ್ರಾಸ್ ಬಳಿ ಗೂಡ್ಸ್  ವಾಹನ ಪಂಕ್ಚರ್ ಆಗಿತ್ತು. ಹೀಗಾಗಿ ಪ್ಲೈಓವರ್ ಮೇಲೆ ಗೂಡ್ಸ್ ವಾಹನಕ್ಕೆ ಪಂಕ್ಚರ್ ಜೋಡನೆ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಘಟನಾ ಸ್ಥಳಕ್ಕೆ ಬಗದಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.