ಈಗ ಕೋಡಿಹಳ್ಳಿ ವಿರುದ್ಧವೇ ತಿರುಗಿ ಬಿದ್ದ ಸಾರಿಗೆ ನೌಕರರು

ಸದ್ಯ ಸಾರಿಗೆ ಮುಷ್ಕರವನ್ನು ಕೈ ಬಿಟ್ಟು ಮತ್ತೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಆದರೆ ಕೋವಿಡ್ ಹಿನ್ನೆಲೆ ಸಂಚಾರ ವಿರಳವಾಗಿದೆ. ಆದರೆ ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ವಿರುದ್ಧವೇ ಇದೀಗ ಅಸಮಾಧಾನ ವ್ಯಕ್ತವಾಗಿದೆ. 

Transport  Department  employees unhappy over Kodihalli chandrashekar  snr

ಚಿಕ್ಕಬಳ್ಳಾಪುರ (ಏ.24):  ಸತತ 15 ದಿನ ಸಾರಿಗೆ ಮುಷ್ಕರ ನಡೆಸಿ ಕೊನೆಗೂ ಮುಷ್ಕರ ಅಂತ್ಯಗೊಳಿಸಿ ರಸ್ತೆಗೆ ಇಳಿದಿರುವ ಬಸ್‌ಗಳಲ್ಲಿ ಸಂಚರಿಸಲು ಜನರೇ ಇಲ್ಲವಾಗಿದೆ.

ಹೌದು, ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ವೇತನ ತಾರತಮ್ಯ ಹೋಗಲಾಡಿಸಲು 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಕಳೆದ ಏ.7 ರಿಂದ ಸತತ 15 ದಿನಗಳ ಕಾಲ ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ ಪರಿಣಾಮ ಜಿಲ್ಲೆಯಲ್ಲೂ ಸಹ ಸರ್ಕಾರಿ ಸಾರಿಗೆ ಸಂಚಾರ ಬಂದ್‌ ಆಗಿ ಪ್ರಯಾಣಿಕರು ಪರದಾಡಬೇಕಾಯಿತು.

ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಎಫ್‌ಐಆರ್‌ ದಾಖಲು

ಕೊನೆಗೂ ಮುಷ್ಕರ ಕೈ ಬಿಟ್ಟಿರುವ ಸಾರಿಗೆ ನೌಕರರು 15 ದಿನಗಳ ಬಳಿಕ ರಸ್ತೆಗೆ ಬಸ್‌ಗಳನ್ನು ಇಳಿಸಿದರೂ ಸದ್ಯ ಪ್ರಯಾಣಿಕರಿಗೆ ಬರ ಎದುರಾಗಿದೆ. ಮತ್ತೆ ಕೆಎಸ್‌ಆರ್‌ಟಿಸಿ ನಷ್ಟದ ಕಡೆ ವಾಲುತ್ತಿದೆ. ಸತತ 15 ದಿನಗಳ ಸಾರಿಗೆ ಮುಷ್ಕರದ ಪರಿಣಾಮ ಚಿಕ್ಕಬಳ್ಳಾಪುರ ಘಟಕಕ್ಕೆ ಸುಮಾರು 9 ಕೋಟಿಯಷ್ಟುನಷ್ಟಉಂಟಾಗಿದೆ. ಸುಮಾರು 18 ಮಂದಿ ನೌಕರರ ಮೇಲೆ ಎಫ್‌ಐಆರ್‌ ದಾಖಲಾದರೆ ಇಬ್ಬರು ನೌಕರರು ಕೆಲಸದಿಂದ ವಜಾಗೊಂಡಿದ್ದಾರೆ. 

 'ಕೋಡಿಹಳ್ಳಿ ಹಸಿರು ಟವೆಲ್‌ ಹಾಕಿಕೊಂಡು ದಂಧೆ: ಹೇಗಿದೆ ಅವರ ಬಂಗಲೆ, ಕಾರು '

ಸುಮಾರು 30 ಕ್ಕೂ ಹೆಚ್ಚು ನೌಕರರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಇಷ್ಟಾದರೂ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗದೇ ಕೈ ಸುಟ್ಟುಕೊಂಡಿರುವ ಸಾರಿಗೆ ನೌಕರರು ಮುಷ್ಕರ ಕೈ ಬಿಟ್ಟಿದ್ದಾರೆ. ಆದರೆ ಎಂದಿನಂತೆ ಜಿಲ್ಲಾದ್ಯಂತ ಸಾರಿಗೆ ಸಂಚಾರ ಆರಂಭಗೊಂಡರೂ ಕೊರೋನಾ ಪರಿಣಾಮ ಪ್ರಯಾಣಿಕರಿಗೆ ಬರ ಎದುರಾಗಿದ್ದು ಬಸ್‌ಗಳು ಈಗ ಬೆರಳೆಣಿಕೆಯಷ್ಟುಮಂದಿ ಪ್ರಯಾಣಿಕರನ್ನು ಹತ್ತಿಸಿಕೊಂಡು ನಷ್ಟದಲ್ಲಿ ಸಾರಿಗೆ ಸಂಚಾರ ಮಾಡಬೇಕಿದೆ.

ಕೋಡಿಹಳ್ಳಿ ವಿರುದ್ಧವೇ ನೌಕರರು ಕಿಡಿ:

ಜಿಲ್ಲೆಯ ಸಾರಿಗೆ ನೌಕರರ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಕೆಎಸ್‌ಆರ್‌ಟಿಸಿ ನೌಕರರು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ತಮ್ಮ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬರುತ್ತಿದೆ. ಅವರನ್ನು ನಂಬಿ ನಾವು ಮುಷ್ಕರಕ್ಕೆ ಹೋದೆವು. ಆದರೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲಿಲ್ಲ. ನಾವು ಮುಷ್ಕರ ನಡೆಸಿ ಏನು ಪ್ರಯೋಜನ, ಸುಮ್ಮನೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು ಎಂದು ಕೆಎಸ್‌ಆರ್‌ಟಿಸಿ ಚಾಲಕ, ನಿರ್ವಾಹಕರು ತಮ್ಮ ಬೇಡಿಕೆಗಳು ಈಡೇರದಿದ್ದಕ್ಕೆ ಕೋಡಿಹಳ್ಳಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

Latest Videos
Follow Us:
Download App:
  • android
  • ios