ಮಂಡ್ಯ (ಡಿ.10):  ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿಯ ಚುನಾವಣೆಗೆ ಕೀಲಾರ ಗ್ರಾಪಂ ಒಂದನೇ ವಾರ್ಡ್‌ನಿಂದ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯೊಬ್ಬರು ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಕಳೆದೆರಡು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿರರುವ ಕೆ.ಎನ್‌.ಪ್ರಫುಲ್ಲಾದೇವಿ ಉಮೇದುವಾರಿಕೆ ಸಲ್ಲಿಸಿರುವ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ. 

ಕೈ ನಾಯಕಿ ಮರಳಿ ಜೆಡಿಎಸ್ ಸೇರ್ಪಡೆ : ಚುನಾವಣೆ ಬೆನ್ನಲ್ಲೇ ಶಾಕ್ .

ಕೀಲಾರ ಗ್ರಾಮಾಭಿವೃದ್ಧಿ ಟ್ರಸ್ಟ್‌ನಲ್ಲಿ ಕಾರ್ಯನಿರ್ವಹಸುತ್ತಿರುವ ಪ್ರಫುಲ್ಲಾದೇವಿ ಶಾಲಾ ಮಕ್ಕಳಿಗೆ ನೋಟ್‌ಬುಕ್‌, ಬ್ಯಾಗ್‌ ಸೇರಿ ಪಠ್ಯ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. 

ಸಮಾಜಕ್ಕೆ ಸೇವೆ ಸಲ್ಲಿಸುವ ಮನೋಭಾವದೊಂದಿಗೆ ರಾಜಕೀಯಕ್ಕೆ ಧುಮುಕಿದ್ದೇನೆ. ಅಧಿಕಾರ ದೊರೆತರೆ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಲು ಶಕ್ತಿ ಬರುತ್ತದೆ. ನನ್ನ ಸ್ಪರ್ಧೆಗೆ ಗ್ರಾಮಸ್ಥರ ಬೆಂಬಲವಿದೆ. ಗ್ರಾಮದ ಅಭಿವೃದ್ಧಿಯ ಜೊತೆಯಲ್ಲೇ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರನ್ನು ಮುಖ್ಯವಾಹಿನಿಗೆ ತರಬೇಕೆಂಬ ಹಂಬಲ ಹೊಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.