Kolar : 24 ತಿಂಗಳಲ್ಲಿ 7 ಪೌರಾಯುಕ್ತರ ವರ್ಗಾವಣೆ!
ಕೆಜಿಎಫ್‌ನ ನಗರಸಭೆಗೆ 24 ತಿಂಗಳಲ್ಲಿ 7 ಪೌರಾಯುಕ್ತರ ವರ್ಗಾವಣೆಯಿಂದ ನಗರದ 35 ವಾರ್ಡ್‌ಗಳು ಅಭಿವೃದ್ಧಿ ಕುಂಠಿತಗೊಂಡಿದ್ದು, ಸರ್ಕಾರ ಮನಸ್ಸಿಗೆ ಬಂದಂತೆ ಆಯುಕ್ತರ ವರ್ಗಾವಣೆ ಮಾಡುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಬಾಲವೆಂಕಟೇಶ್ ಕೆ.ಎಂ.
ಕೆಜಿಎಫ್ (ಡಿ.01): ಕೆಜಿಎಫ್‌ನ ನಗರಸಭೆಗೆ 24 ತಿಂಗಳಲ್ಲಿ 7 ಪೌರಾಯುಕ್ತರ ವರ್ಗಾವಣೆಯಿಂದ ನಗರದ 35 ವಾರ್ಡ್‌ಗಳು ಅಭಿವೃದ್ಧಿ ಕುಂಠಿತಗೊಂಡಿದ್ದು, ಸರ್ಕಾರ ಮನಸ್ಸಿಗೆ ಬಂದಂತೆ ಆಯುಕ್ತರ ವರ್ಗಾವಣೆ ಮಾಡುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ವರ್ಗಾವಣೆಯ ಸರಮಾಲೆ
ನ. 22ರಂದು ನಗರಸಭೆ ಅಧ್ಯಕ್ಷರಾಗಿ ವಳ್ಳಲ್‌ಮುನಿಸ್ವಾಮಿ ಅಯ್ಕೆಯಾದ ಸಂದರ್ಭದಲ್ಲಿ ಸರ್ವರ್ ಮರ್ಚೆಂಟ್ ಎಂಬುವರು ಪೌರಾಯುಕ್ತರಾಗಿ 4 ತಿಂಗಳ ಕಾಲ ಕಾರ‍್ಯನಿರ್ವಹಿಸಿದ್ದರು. ಬಳಿಕ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಮೋಹನ್ ಕುಮಾರ್ ಅವರನ್ನು ಪ್ರಭಾರಿ ಪೌರಾಯುಕ್ತರನ್ನಾಗಿ ಮೂರು ತಿಂಗಳ ಕಾಲ ನೇಮಿಸಿತ್ತು. ನಂತರ ನೇಮಕಗೊಂಡ ನವೀನ್‌ಚಂದ್ರ 8 ತಿಂಗಳ ಕಾಲ ಸೇವೆಸಲ್ಲಿಸಿ ವರ್ಗಾವಣೆಗೊಂಡರು. ಬಳಿಕ ವಿದ್ಯಾಕಾಳೆ ಕೆಜಿಎಫ್ ನಗರಸಭೆ ಪೌರಾಯುಕ್ತರಾಗಿ ನೇಮಿಸಲಾಯಿತು.
ಆದರೆ ವಿದ್ಯಾಕಾಳೆ ನೇಮಕ ಅದೇಶಕ್ಕೆ ಹಿಂದಿನ ಪೌರಾಯುಕ್ತ ನವೀನ್ ಚಂದ್ರ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಹಿನ್ನೆಲೆಯಲ್ಲಿ ಕೇವಲ ಒಂದು ವಾರದ ಕಾಲ ಮಾತ್ರ ವಿದ್ಯಾಕಾಳೆÜ ಪೌರಾಯುಕ್ತರಾಗಿ ಕಾರ‍್ಯನಿರ್ವಹಿಸಿದ್ದರು. ಇದಾದಬಳಿಕ ನವೀನ್ ಚಂದ್ರ ಮತ್ತೆ ಮೂರು ತಿಂಗಳ ಕಾಲ ಸೇವೆ ಸಲ್ಲಿದ್ದರು. ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಡಾ.ಮಾಧವಿ ಅವರನ್ನು ನೇಮಿಸಲಾಯಿತು. ಕಳೆದ 4 ತಿಂಗಳಿನಿಂದ ಕಾರ‍್ಯನಿರ್ವಹಿಸಿದ್ದ ಡಾ.ಮಾಧವಿ ಅವರ ಜಾಗಕ್ಕೆ ಈಗ ಅಂಬಿಕಾ.ಎಸ್Ü ಎಂಬುವರನ್ನು ನಿಯೋಜಿಸಿದೆ.
ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ
ಸರ್ಕಾರ ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಜಿಎಫ್‌ನ 35 ವಾರ್ಡ್‌ಗಳಲ್ಲಿ ಅಕ್ಷರ ಸಹ ಅಭಿವೃದ್ಧಿ ಕುಂಠಿತಗೊಂಡಿವೆ. ನಗರದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಗಳು, ಚರಂಡಿಗಳು ತುಂಬಿತುಳುಕುತ್ತಿವೆ. ನಿಷೇಧಿ ಪ್ಲಾಸ್ಟಿಕ್ ಬಹಿರಂಗವಾಗಿಯೇ ಮಾರಟ ಮಾಡಲಾಗುತ್ತಿದೆ. ಮನೆಕಟ್ಟಲು ಪರವಾನಿಗೆ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ, ಇನ್ನೂ ಜನನ ಮರಣ ಪತ್ರಗಳಂತೂ ಕೇಳುವುದೇ ಬೇಡ, ಸಮಾಜಿಕ ಭದ್ರತೆಯಡಿ ಎಲ್ಲ ಯೋಜನೆಗಳು ಕುಂಠಿತಗೊಂಡಿವೆ.
ಇನ್ನೂ ಪ್ರತಿ ವಾರ್ಡ್‌ಗಳಲ್ಲಿ ರಸ್ತೆಗಳ ಅಭಿವೃದ್ದಿಯಾಗಿಲ್ಲ, 2 ಲಕ್ಷ ಟನ್‌ನಷ್ಟು35 ವಾರ್ಡ್‌ಗಳ ಕಸ ಡೆಂಪಿಂಗ್ ಯಾರ್ಡ್‌ನಲ್ಲಿ ಕೊಳೆಯುತ್ತಿದೆ, ಕಸ ವಿಂಗಡಣೆ ಕೆಲಸ ನನೆಗುದಿಗೆ ಬಿದಿದ್ದೆ. ಇದಕ್ಕೆಲ್ಲಾ ಪೌರಾಯುಕ್ತರ ಪದೇಪದೆ ವರ್ಗಾವಣೆಯೇ ಕಾರಣವೆಂದು ಹೆಸರು ಹೇಳಲು ಇಚ್ಛಿಸದ ಪುರಸಭೆಯ ಅಧಿಕಾರಿಗಳೇ ಆರೋಪಿಸುತ್ತಿದ್ದಾರೆ.
ಹೊಸ ಪೌರಾಯುಕ್ತರಿಗೆ ಊರಿನ ಅಳ ಆಗಲ ತಿಳಿಯಬೇಕೆದಾರೆ ಕನಿಷ್ಟಆರು ತಿಂಗಳು ಬೇಕಾಗುತ್ತದೆ, ಆರು ತಿಂಗಳಲ್ಲಿ ಅಧಿಕಾರಿಯನ್ನು ಸರಕಾರ ವರ್ಗಾವಣೆಗೊಳಿಸಿದೆರೆ ನಗರದ ಅಭಿವೃದ್ದಿ ಸಾಧ್ಯವೆ, ಮತ್ತೆ ಹೊಸ ಪೌರಾಯುಕ್ತರು ಬಂದರೆ ಮತ್ತೇ ಆರು ತಿಂಗಳು ಬೇಕಾಗುತ್ತದೆ ಸರಕಾರ ಒಬ್ಬ ಆಧಿಕಾರಿಯನ್ನು ವರ್ಗಾವಣೆಗೊಳಿಸಿದೆ ಕನಿಷ್ಟ2 ವರ್ಷವಾದರೂ ಒಂದು ಜಾಗದಲ್ಲಿ ಕಾರ‍್ಯನಿರ್ವಹಿಸಿದರೆ ನಗರದ ಅಭಿವೃದ್ದಿಯಾಗಲಿದೆ.
- ಪಿ.ದಯಾನಂದ್ ಮಾಜಿ ನಗರಸಭೆ ಅಧ್ಯಕ್ಷರು
ಡಾ.ಮಾಧವಿ ವರ್ಗಾವಣೆ
ಕೆಜಿಎಫ್ ನಗರಸಭೆಗೆ ನೂತನ ಪೌರಾಯುಕ್ತೆಯಾಗಿ ಅಂಬಿಕಾ.ಎಸ್. ಅಧಿಕಾರಿ ವಹಿಸಿಕೊಂಡಿದ್ದಾರೆ. ಈ ಹಿಂದೆ ಪೌರಾಯುಕ್ತೆಯಾಗಿ ಕಾರ‍್ಯನಿರ್ವಹಿಸುತ್ತಿದ್ದ ಪೌರಾಯುಕ್ತೆ ಡಾ.ಮಾಧವಿ ಅರವನ್ನು ಬೆಂಗಳೂರಿನ ಮೆಟ್ರೋಪಾಲಿಟನ್ ಆಯುಕ್ತರಾಗಿ ಸರ್ಕಾರ ವರ್ಗಾವಣೆಗೊಳಿಸಿದೆ.