ಕೊಪ್ಪಳ: ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

Koppala News: ಕೊಪ್ಪಳದ ಬಸವೇಶ್ವರ ವೃತ್ತದ ಪ್ರಮುಖ ರಸ್ತೆ ವಾಹನಗಳಿಂದ ತುಂಬಿ ತುಳುಕಿ ಟ್ರಾಫಿಕ್ ಜಾಮ್ ಉಂಟಾಗಿತ್ತು

Traffic Jam at Basaveshwara Circle in Koppal mnj


ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್‌ ಸುವರ್ಣ ನ್ಯೂಸ್

ಕೊಪ್ಪಳ (ನ. 07): ಕೊಪ್ಪಳ‌ ನಗರ ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿರುವ ನಗರವಾಗಿದೆ. ಆದರೆ ಬೇರೆ ನಗರಗಳಿಗೆ ಹೋಲಿಕೆ ಮಾಡಿದರೆ ಈ ನಗರದಲ್ಲಿ ವಾಹನಗಳ ದಟ್ಟಣೆ ಕಡಿಮೆ ಎಂದು ಹೇಳಬಹುದು. ಜೊತೆಗೆ ಟ್ರಾಫಿಕ್ ಕಿರಿಕಿರಿಯೂ ಸಹ ಕಡಿಮೆ ಇದೆ.‌ ಆದರೆ ಇಂದು ಮಾತ್ರ ಕೊಪ್ಪಳ‌ ನಗರದ ಮಧ್ಯೆ ಇರುವ ರಸ್ತೆಯ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೊಪ್ಪಳದ ಬಸವೇಶ್ವರ ವೃತ್ತದ ರಸ್ತೆಯಲ್ಲಿ ಪ್ರತಿನಿತ್ಯ ಯಾವುದೇ ಅಡೆತಡೆ ಇಲ್ಲದಂತೆ ಸರಾಗವಾಗಿ ಸಂಚರಿಸಬಹುದಿತ್ತು. ಆದರೆ ಇಂದು ಮಾತ್ರ ಪ್ರಮುಖ ರಸ್ತೆ ವಾಹನಗಳಿಂದ ತುಂಬಿ ತುಳುಕಿ ಟ್ರಾಫಿಕ್ ಜಾಮ್ ಉಂಟಾಗಿತ್ತು. 

ಕೊಪ್ಪಳದ ಬಸವೇಶ್ವರ ವೃತ್ತದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಲು ಪ್ರಮುಖವಾದ ಕಾರಣ ಮೆಕ್ಕೆಜೋಳ ತುಂಬಿದ ವಾಹನಗಳು.‌ ಹೌದು ಬಸವೇಶ್ವರ ವೃತ್ತದ ಸಮೀಪದಲ್ಲಿಯೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಇದೆ.‌ ಈ ಹಿನ್ನಲೆಯಲ್ಲಿ ಈಗ ಮೆಕ್ಕೆಜೋಳ ಸಿಜನ್ ಆಗಿರುವುದರಿಂದ ರೈಲ್ವೇ ವ್ಯಾಗಿನ್ ಮೂಲಕ ಮೆಕ್ಕೆಜೋಳವನ್ನು ರಫ್ತು ಮಾಡಲಾಗುತ್ತದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದ ಮೆಕ್ಕೆಜೋಳ ತುಂಬಿದ ಲಾರಿ, ಟ್ರ್ಯಾಕ್ಟರ್, ಟಾಟಾ ಏಸ್ ವಾಹನಗಳು ಇಂದು ರಸ್ತೆಗೆ ಇಳಿದಿವೆ. ಇದರಿಂದಾಗಿ ಬಸವೇಶ್ವರ ವೃತ್ತದಲ್ಲಿ ಮೂರ್ನಾಲ್ಕು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಟ್ರಾಫಿಕ್ ಜಾಮ್‌ನಿಂದ ಸಂಕಷ್ಟಕ್ಕೆ ಸಿಲುಕಿದ ವಾಹನ ಸವಾರರು: ಇನ್ನು ಇಂದು ಸೋಮವಾರ ಆಗಿರುವುದರಿಂದ ಸಹಜವಾಗಿಯೇ ಕೊಪ್ಪಳದಲ್ಲಿ ವಾಹನ ಸಂಚಾರ ಸ್ವಲ್ಪ ಹೇಚ್ಚಾಗಿಯೇ ಇರುತ್ತದೆ. ಇಂತದ್ದರಲ್ಲಿ ವ್ಯಾಗಿನ್ ಬೇರೆ ಬಂದಿರುವುದಿಂದ‌ ಮೆಕ್ಕೆಜೋಳ ತುಂಬಲು ಹೆಚ್ಚಿನ ವಾಹನಗಳು ರಸ್ತೆಗೆ ಇಳಿದಿದ್ದರ ಪರಿಣಾಮವಾಗಿ ಬಸವೇಶ್ವರ ವೃತ್ತದಲ್ಲಿ  ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡಬೇಕಾಯಿತು.

ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹೈರಾಣು:  ಇನ್ನು ನಾಮರ್ಲ್ ಟ್ರಾಫಿಕ್  ಕ್ಲಿಯರ್ ಮಾಡಲು ಟ್ರಾಫಿಕ್ ಪೊಲೀಸರು ಕಷ್ಟಪಡುತ್ತಾರೆ. ಇಂತಹದ್ದರಲ್ಲಿ ಇಡೀ ರಸ್ತೆಯೇ ಬಂದ್ ಆದರೆ ಟ್ರಾಫಿಕ್ ಪೊಲೀಸರ ಪಾಡು ಹೇಳಬೇಕೆ. ಬಸವೇಶ್ವರ ವೃತ್ತದಲ್ಲಿನ ಟ್ರಾಫಿಕ್ ಕ್ಲಿಯರ್ ಮಾಡುತ್ತಲೇ ಟ್ರಾಫಿಕ್ ಪೊಲೀಸರಿಗೆ ಸಾಕು ಸಾಕಾಗಿ ಹೋಯಿತು. 

ಒಟ್ಟಿನಲ್ಲಿ 5 ರಿಂದ 10 ನಿಮಿಷ  ಟ್ರಾಫಿಕ್‌ಗೆ ಕೊಪ್ಪಳದ ಜನರು ಚಡಪಡಿಸುತ್ತಾರೆ.‌ ಅಂತದ್ದರಲ್ಲಿ ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಮೂರ್ನಾಲ್ಕು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿದ್ದು ಮಾತ್ರ ವಿಶೇಷವೇ ಸರಿ.‌ಆದರೆ ಇದರಲ್ಲಿ ತೊಂದರೆ ಅನುಭವಿಸಿದ್ದಯ ಮಾತ್ರ ಹೆಚ್ಚು ವಾಹನ ಸವಾರರು.

Latest Videos
Follow Us:
Download App:
  • android
  • ios