ಸಂಚಾರ ದಟ್ಟಣೆಯಿಂದ ಹೈರಾಣಾದ ಹೊನ್ನಾಳಿ ಜನತೆ ; ಕಣ್ಣುಮುಚ್ಚಿ ಕುಳಿತ ಪೊಲೀಸ್‌ ಇಲಾಖೆ

ಇತ್ತೀಚಿನ ದಿನಗಳಲ್ಲಿ ಹೊನ್ನಾಳಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ದೇವನಾಯ್ಕನ ಹಳ್ಳಿಯವರೆಗೆ, ಇತ್ತ ತುಮ್ಮಿನಕಟ್ಟೆರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ದೊಡ್ಡ ದೊಡ್ಡ ನಗರಗಳನ್ನೂ ನಾಚಿಸುವಂತೆ ಒಂದು ಸಣ್ಣ ತಾಲೂಕು ಕೇಂದ್ರದಲ್ಲಿ ಗಂಟೆಗಟ್ಟಲೇ ಸಂಚಾರ ಸ್ಥಗಿತವಾಗಿವ ಪರಿಸ್ಥಿತಿ ಎದುರಾಗಿದೆ.

traffic congestion issue worried peoples in honnali at davanagere rav

ಹೊನ್ನಾಳಿ (ಡಿ.30) : ಇತ್ತೀಚಿನ ದಿನಗಳಲ್ಲಿ ಹೊನ್ನಾಳಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ದೇವನಾಯ್ಕನ ಹಳ್ಳಿಯವರೆಗೆ, ಇತ್ತ ತುಮ್ಮಿನಕಟ್ಟೆರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ದೊಡ್ಡ ದೊಡ್ಡ ನಗರಗಳನ್ನೂ ನಾಚಿಸುವಂತೆ ಒಂದು ಸಣ್ಣ ತಾಲೂಕು ಕೇಂದ್ರದಲ್ಲಿ ಗಂಟೆಗಟ್ಟಲೇ ಸಂಚಾರ ಸ್ಥಗಿತವಾಗಿವ ಪರಿಸ್ಥಿತಿ ಎದುರಾಗಿದೆ. ಇದರಿಮದ ವಾಹನ ಸವಾರರು ಪರಿತಪಿಸುವಂತಾಗಿದ್ದು, ಸ್ಥಳೀಯ ಪೊಲೀಸ್‌ ಇಲಾಖೆ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬತೆ ವರ್ತಿಸುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಹೊನ್ನಾಳಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿಗೆ, ಪುರಸಭೆ ಕಡೆಗೆ ಹೋಗುವ ತುಮ್ಮಿನಕಟ್ಟೆರಸ್ತೆಯಲ್ಲಿ ಹೇಳ ತೀರದಷ್ಟುಸಂಚಾರ ದಟ್ಟಣೆಯಾಗಿ ವಾಹನ ಸವಾರರರು ಪರದಾಡುವಂತಾಗಿದೆ. ಬಸ್‌ ನಿಲ್ದಾಣದಿಂದ ದೇವನಾಯ್ಕನಹಳ್ಳಿ ಸರ್ಕಲ್‌ವರೆಗೆ ಕೂಡ ಸಂಚಾರ ದಟ್ಟಣೆ ಕಾಟ ಹೆಚ್ಚಾಗಿದೆ. ಜೊತೆಗೆ ಯಾರ ಅಂಜಿಕೆಯೂ ಇಲ್ಲದಂತೆ ದ್ವಿಚಕ್ರ ವಾಹನಗಳನ್ನು ಬೇಕಾಬಿಟ್ಟಿಯಾಗಿ ಚಲಾಯಿಸುವ ಕೆಲ ಸವಾರರಿಂದ ಅಪಾಯ ಸದಾ ಕಟ್ಟಿಟ್ಟಬುತ್ತಿ ಎನ್ನುವಂತಾಗಿದ್ದು, ಈಗಾಗಲೇ ಹಲವಾರು ಅಘಘಾತಗಳೂ ಕೂಡ ಜರುಗಿವೆ.

ಧರ್ಮವನ್ನು ನಾವು ರಕ್ಷಿಸದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ: ಶಾಸಕ ರೇಣುಕಾಚಾರ್ಯ

ಪ್ರಸ್ತುತ ಪೊಲೀಸ್‌ ಠಾಣೆ ಪಟ್ಟಣದ ಹೊರವಲಯ ಎನ್ನಬಹುದಾದ ದೇವನಾಯ್ಕಹಳ್ಳಿ, ಹರಿಹರ ರಸ್ತೆಯಲ್ಲಿದೆ. ಪಟ್ಟಣದ ಹೃದಯ ಭಾಗವಾದ ಖಾಸಗಿ ಬಸ್‌ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ ಮುಂತಾದ ವಾಹನ ದಟ್ಟಣೆ ಇರುವ ಜಾಗಗಳಲ್ಲಿ ಪೊಲೀಸ್‌ ಇಲಾಖೆ ಸಿಬ್ಬಂದಿಯನ್ನು ಸರಿಯಾಗಿ ನಿಯೋಜಿಸದೆ ಇರುವುದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದು, ಸಂಚಾರ ದಟ್ಟಣೆ, ಅಪಘಾತಗಳು ಸಾಮಾನ್ಯವಾಗಿವೆ. ಇದರ ಜೊತೆಗೆ ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿ ಕೂಡ ಹೆಚ್ಚಾಗಿದೆ.

ಈ ಭಾಗಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ, ಅಘಾತಗಳನ್ನು ನಿಯಂತ್ರಿಸಲು ಇಲ್ಲಿನ ಪೊಲೀಸ್‌ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಾದ ತುರ್ತು ಅವಶ್ಯಕತೆ ಇದೆ ಎಂಬುದು ಪಟ್ಟಣದ ಸಾರ್ವಜನಿಕರ ಅಭಿಮತವಾಗಿದೆ. 

ಗ್ರಾಮ ವಾಸ್ತವ್ಯ ಮೋಜು ಮಸ್ತಿಗಾಗಿ ಮಾಡುತ್ತಿಲ್ಲ: ಶಾಸಕ ರೇಣುಕಾಚಾರ್ಯ

Latest Videos
Follow Us:
Download App:
  • android
  • ios