ಮುಸ್ಲಿಂ ಬಾಂಧವರು ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಹಿನ್ನಲೆಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ಹಾಗೂ ವಾಹನಗಳ ಸುಗಮ‌ ಸಂಚಾರಕ್ಕಾಗಿ ಪೊಲೀಸರು ಸಂಚಾರ ಮಾರ್ಪಾಡು ಮಾಡಿದ್ದಾರೆ. ಬೆಳಗ್ಗೆ 8 ರಿಂದ 11:30 ರ ವರೆಗೆ ಸಂಚಾರ ಮಾರ್ಪಾಡು ಮಾಡಲಾಗಿದೆ. 

ಬೆಂಗಳೂರು(ಜೂ.29): ಬಕ್ರೀದ್ ಹಬ್ಬದ ಪ್ರಯುಕ್ತ ಇಂದು(ಗುರುವಾರ) ಬೆಂಗಳೂರು ನಗರದಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ ಎಂದು ಟ್ರಾಫಿಕ್‌ ಪೊಲೀಸರು ಮಾಹಿತಿ ನೀಡಿದ್ದಾರೆ. 

ಮುಸ್ಲಿಂ ಬಾಂಧವರು ನಗರದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಹಿನ್ನಲೆಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ಹಾಗೂ ವಾಹನಗಳ ಸುಗಮ‌ ಸಂಚಾರಕ್ಕಾಗಿ ಪೊಲೀಸರು ಸಂಚಾರ ಮಾರ್ಪಾಡು ಮಾಡಿದ್ದಾರೆ. ಬೆಳಗ್ಗೆ 8 ರಿಂದ 11:30 ರ ವರೆಗೆ ಸಂಚಾರ ಮಾರ್ಪಾಡು ಮಾಡಲಾಗಿದೆ. 

Bengaluru: ಜಾಲಹಳ್ಳಿ ಜಂಕ್ಷನ್‌ನಲ್ಲಿ ಇನ್ನೆರಡು ವರ್ಷ ಟ್ರಾಫಿಕ್‌: ಶೀಘ್ರದಲ್ಲಿ ಸಂಚಾರ ಬದಲಾವಣೆ

ಎಲ್ಲೆಲ್ಲಿ ರಸ್ತೆ ಸಂಚಾರ ನಿರ್ಬಂಧ?

ಬಸವೇಶ್ವರ ಸರ್ಕಲ್‌ನಿಂದ ಸಿಐಡಿ ಜಂಕ್ಷನ್‌ವರೆಗೆ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ. ಈ ರಸ್ತೆ ಬದಲಾಗಿ ದೇವರಾಜ ಅರಸ್ ರಸ್ತೆ ಬಳಕೆಗೆ ಸೂಚನೆ ನೀಡಲಾಗಿದೆ. ಲಾಲ್ ಭಾಗ್ ಮೇನ್ ಗೇಟ್‌ನಿಂದ ಕಣ್ಣಪ್ಪ ಪೆಟ್ರೋಲ್ ಬಂಕ್‌ವರೆಗೆ ರಸ್ತೆ ನಿರ್ಬಂಧಿಸಿದ್ದು ಪರ್ಯಾಯವಾಗಿ ಸಿದ್ದಯ್ಯ ರಸ್ತೆ, 34 ನೇ ಜಂಕ್ಷನ್, ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆ ಹೊಸೂರು ರಸ್ತೆಯನ್ನ ಬಳಕೆಗೆ ಸೂಚನೆ ನೀಡಲಾಗಿದೆ. 

ಟೋಲ್ ಗೇಟ್ ಜಂಕ್ಷನ್‌ನಿಂದ ಸಿರ್ಸಿ ಸರ್ಕಲ್ ವರೆಗೆ ರಸ್ತೆ ನಿರ್ಬಂಧಿಸಿದ್ದು ಪರ್ಯಾಯವಾಗಿ ಸಿರ್ಸಿ ಸರ್ಕಲ್ ನಿಂದ ಬಲ ತಿರುವು ಪಡೆದು ಬಿನ್ನಿಮಿಲ್ ಟ್ಯಾಂಕ್ ಬಂಡ್ ರಸ್ತೆ ಮಾರ್ಗವಾಗಿ ಮಾಗಡಿ ರಸ್ತೆ ವಿಜಯನಗರ ಮೂಲಕ ಮೈಸೂರು ರಸ್ತೆ ಸಂಪರ್ಕಿಸಬಹುದು. ಮೈಸೂರು ರಸ್ತೆ ಕಡೆಯಿಂದ ಸಿಟಿ ಮಾರ್ಕೆಟ್ ಕಡೆ ಸಂಚರಿಸುವವರು ಕಿಂಕೋ ಜಂಕ್ಷನ್ ಬಳಿ ಎಡ ತಿರುವು ಪಡೆದು ವಿಜಯನಗರ ಮಾಗಡಿ ಮುಖ್ಯ ರಸ್ತೆ ಮಾರ್ಗವಾಗಿ ಸಿರ್ಸಿ ವೃತ್ತದ ಮೂಲಕ ಸಿಟಿ ಮಾರ್ಕೇಟ್ ಕಡೆಗೆ ಸಂಚರಿಸಬಹುದು. ಮೇಲ್ಕಂಡ ರಸ್ತೆ ಮಾರ್ಪಾಡಿಗೆ ಸಾರ್ವಜನಿಕರು ಸಹಕರಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.