Gadag: ಉತ್ತರ ಕರ್ನಾಟಕ ನೀರಾವರಿ ಯೋಜನೆ ಜಾರಿಗೆ ಸಂಕಲ್ಪ ಯಾತ್ರೆ!

ಕೃಷ್ಣಾ, ಮಹಾದಾಯಿ, ನವಲಿ ನೀರಾವರಿ ಯೋಜನೆಗಳು ಜಾರಿಯಾಗಬೇಕು ಅನ್ನೋದು ಉತ್ತರ ಕರ್ನಾಟಕ ಬಹುದಿನಗಳ ಬೇಡಿಕೆ. ನೀರಾವರಿಗಾಗಿ ನಡೀತಿರುವ ದಶಕದ ಹೋರಾಟಕ್ಕೆ ಇವತ್ತು ಸ್ವಾಭಿಮಾನ ವೇದಿಕೆ ಹೊಸ ಶಕ್ತಿ ತುಂಬಿದೆ.

Tractor Rally for Implementation of Irrigation Scheme in Gadag gvd

ವರದಿ: ಗಿರೀಶ್ ಕಮ್ಮಾರ್, ಗದಗ

ಗದಗ (ಏ.13): ಕೃಷ್ಣಾ, ಮಹಾದಾಯಿ, ನವಲಿ ನೀರಾವರಿ ಯೋಜನೆಗಳು ಜಾರಿಯಾಗಬೇಕು ಅನ್ನೋದು ಉತ್ತರ ಕರ್ನಾಟಕ (North Karnataka) ಬಹುದಿನಗಳ ಬೇಡಿಕೆ. ನೀರಾವರಿಗಾಗಿ ನಡೀತಿರುವ ದಶಕದ ಹೋರಾಟಕ್ಕೆ ಇವತ್ತು ಸ್ವಾಭಿಮಾನ ವೇದಿಕೆ ಹೊಸ ಶಕ್ತಿ ತುಂಬಿದೆ. ಪರಿಷತ್ ಮಾಜಿ ಸದಸ್ಯ ಎಸ್ ಆರ್ ಪಾಟೀಲ (SR Patil), ಜಗದ್ಗುರು ಫಕ್ಕೀರ ದಿಂಗಾಲೇಶ್ವರ ನೇತೃತ್ವದಲ್ಲಿ ಹೋರಾಟ ಆರಂಭವಾಗಿದ್ದು, ರೈತರು ಟ್ರ್ಯಾಕ್ಟರ್ ರ್ಯಾಲಿ (Tractor Rally) ಮೂಲಕ ಸರ್ಕಾರವನ್ನ ಎಚ್ಚರಿಸಲು ಮುಂದಾಗಿದ್ದಾರೆ.. 

ಉತ್ತರ ಕರ್ನಾಟಕ ಭಾಗದ ಪ್ರಮುಖ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮಾಜಿ ಪರಿಷತ್ ಸದಸ್ಯ ಎಸ್ ಆರ್ ಪಾಟೀಲ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿದೆ. ಗದಗ ಜಿಲ್ಲೆಯ ಬಂಡಾಯದ ನಾಡು ನರಗುಂದ ದಿಂದ ಆರಂಭವಾದ ಟ್ರ್ಯಾಕ್ಟರ್ ರ್ಯಾಲಿ, 17ನೇ ತಾರೀಕು ವಿಜಯಪುರ ಮಾರ್ಗವಾಗಿ ಬಾಗಲಕೋಟೆಯ ಬಾಡಗಂಡಿ ಗ್ರಾಮ ತಲುಪಲಿದೆ. 'ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತ' ತ್ವರಿತವಾಗಿ ನಡೆಯಬೇಕು. ದಶಕದ ಕನಸಾಗಿರೋ ಮಹಾದಾಯಿ ಮತ್ತು ನವಲಿ ನೀರಾವರಿ ಯೋಜನೆಗಳು ತ್ವರಿತವಾಗಿ ಅನುಷ್ಠಾನಗೊಳಿಸಲು ಒತ್ತಾಯಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆಯಿಂದ ಬೃಹತ್ ರ್ಯಾಲಿ ಕೈಗೊಳ್ಳಲಾಗಿದೆ.

Gadag: ತೋಂಟದಾರ್ಯ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಬೇಡ: ಹಿಂದೂ ಸಂಘಟನೆಗಳಿಂದ ಪ್ರತಿಭಟನೆ!

ಕಾರ್ಯಕ್ರಮಕ್ಕೂ ಮುನ್ನ ನರಗುಂದ ಪಟ್ಟಣದ ರೈತ ವೀರುಗಲ್ಲಿಗೆ ಪೂಜೆ ಸಲ್ಲಿಸಿದ ಎಸ್ ಆರ್ ಪಾಟೀಲ ಉತ್ತರ ಕರ್ನಾಟಕದ ಕನಸಿನ ನೀರಾವರಿ ಯೋಜನೆಗಳ ಹೋರಾಟಕ್ಕೆ ಮುನ್ನುಡಿ ಬರೆದರು. ನಂತರ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ನಿರ್ಮಾಣವಾಗಿದ್ದ ಶ್ರೀ ಬಿಎಮ್ ಹೊರಕೇರಿ ವೇದಿಕೆಯಲ್ಲಿ ಬೃಹತ್ ಸಮಾವೇಶ ನಡೆಸಲಾಯ್ತು. ವೇದಿಕೆ ಮೂಲಕವೇ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮಿಗಳು ಯಾತ್ರೆಗೆ ಚಾಲನೆ ನೀಡಿದರು. ನಂತ್ರ ಮಾತಾಡಿ, ಉತ್ತರ ಕರ್ನಾಟಕಕ್ಕೆ ಅನ್ಯಾವಾಗಿದ್ದು ಸರ್ಕಾರ ಸರಿ ಪಡೆಸಲು ಪಯತ್ನ ಮಾಡ್ಬೇಕು ಅಂತಾ ಆಗ್ರಹಿಸಿದರು.

ನಾಲ್ಕು ದಿನಗಳ ಕಾಲ ನಡೆಯುವ ಬೃಹತ್ ರ್ಯಾಲಿಯಲ್ಲಿ ರೈತರು ನೂರಾರು ಟ್ರ್ಯಾಕ್ಟರ್‌ನೊಂದಿಗೆ ಭಾಗಿಯಾಗಿದರು. ಗದಗ, ಬಾಗಲಕೋಟೆ, ವಿಜಯಪುರ ಜಿಲ್ಲೆಯ 108 ಗ್ರಾಮಗಳಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸಲು ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಮುಂದಾಗಿದೆ. ಈ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ತ್ವರಿತ ಜಾರಿ, ಮಹದಾಯಿ, ನವಲಿ ಯೋಜನೆಗಳ ಜಾರಿಗೆ ಬಜೆಟ್ ನಲ್ಲಿ 15 ಪ್ರತಿಶತ ನಿಗದಿಯಾಗ್ಬೇಕೆಂದು ಆಗ್ರಹಿಸಲಾಗಿದೆ. ಕೃಷ್ಣಾ ನ್ಯಾಯಾಧೀಕರಣ 2ರ ತೀರ್ಪನ್ನ ಗೆಜೆಟ್‌ನಲ್ಲಿ ಪ್ರಕಟಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಲಾಗಿದೆ. ವಿವಿಧ ಬೇಡಿಕೆಯನ್ನ ಶೀಘ್ರದಲ್ಲೇ ಈಡೇರದಿದ್ದರೆ ಹಂತಹಂತವಾಗಿ ಹೋರಾಟ ಮಾಡೋದಾಗಿ ಸರ್ಕಾರಕ್ಕೆ ಸಂದೇಶ ರವಾನಿಸಿದರು.

Gadag: ಚಲಿಸುತ್ತಿದ್ದ ಬೈಕ್‌ನ ಸೈಡ್ ಪ್ಯಾಕೆಟ್‌ನಿಂದ 10 ಲಕ್ಷ ರೂ. ಹಣ ಎಗರಿಸಿದ ಕಳ್ಳರು

ಬಂಡಾಯದ ಭೂಮಿಯಿಂದ ಜಲ ಜಾಗೃತಿ ಅಭಿಯಾನ ಆರಂಭವಾಗಿದೆ. ಉತ್ತರ ಕರ್ನಾಟಕದ ಬಹುದಿನದ ಕನಸಾಗಿದ್ದ ಮೂರು ನೀರಾವರಿ ಯೋಜನೆ ಜಾರಿಯಾಗಬೇಕು, ಈ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಅನ್ನೋ ಸಂದೇಶವನ್ನು ರ್ಯಾಲಿ ಮೂಲಕ ನೀಡಲಾಗಿದೆ.

Latest Videos
Follow Us:
Download App:
  • android
  • ios