ನಿಡಗುಂದಿ(ಜ.18): ಶವಸಂಸ್ಕಾರಕ್ಕೆ ಹೊರಟಿದ್ದ ಟ್ರ್ಯಾಕ್ಟರ್‌ ಪಲ್ಟಿಯಾಗಿ 15 ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹೊಳೆಮಸೂತಿ ಗ್ರಾಮದ ಸಮೀಪ ಶುಕ್ರವಾರ ಸಂಭ​ವಿ​ಸಿದೆ.

ಯಲ್ಲಮ್ಮನಬೂದಿಹಾಳ ಗ್ರಾಮದಿಂದ ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಗ್ರಾಮಕ್ಕೆ ಶವಸಂಸ್ಕಾರಕ್ಕೆ ಹೊರಟಾಗ ಈ ದುರ್ಘಟನೆ ಸಂಭವಿಸಿದೆ. ಪಲ್ಟಿಯಾದಾಗ ಪಕ್ಕದಲ್ಲಿಯೇ ವಿದ್ಯುತ್‌ ಕಂಬಕ್ಕೆ ಟ್ರ್ಯಾಕ್ಟರ್‌ ತಗುಲಿದ ಪರಿಣಾಮ ಓರ್ವ ವ್ಯಕ್ತಿಗೆ ವಿದ್ಯುತ್‌ ತಗುಲಿ ತೀವ್ರಗಾಯಗಳಾಗಿವೆ. ಅಷ್ಟರಲ್ಲಿಯೇ ವಿದ್ಯುತ್‌ ಲೈನ್‌ ಕಟ್ಟಾಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗಾಯಗೊಂಡ ಐವರು ಮಹಿಳೆಯರಿಗೆ ಸೊಂಟ ಮುರಿದಿದ್ದು, ಹಲವರ ಕಾಲು ಕತ್ತರಿಸಿವೆ, ಗಾಯಾಳುಗಳನ್ನು ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮುದ್ದೇಬಿಹಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.