ಬೀಳಗಿ ಬಳಿ ಬೈಕ್, ಟ್ರ್ಯಾಕ್ಟರ್ ಮಧ್ಯೆ ಅಪಘಾತ: ಇಬ್ಬರ ದುರ್ಮರಣ

ಬೈಕ್, ಟ್ರ್ಯಾಕ್ಟರ್ ಮಧ್ಯೆ ಅಪಘಾತ| ಇಬ್ಬರ ಸಾವು| ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿ ನಡೆದ ಘಟನೆ| ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ| 

Tractor, Bike Accident Near Bilagi in Bagalkot District

ಬಾಗಲಕೋಟೆ(ಡಿ.09): ಬೈಕ್, ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರಿಗೆ ಗಾಯವಾದ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿ ಇಂದು(ಸೋಮವಾರ) ನಡೆದಿದೆ. 

ಮೃತರನ್ನು ಬಾಗಲಕೋಟೆ ತಾಲೂಕಿನ ಹಿರೇಶೆಲ್ಲಿಕೇರಿ ಗ್ರಾಮದ ಹನಮಪ್ಪ ನಾಯ್ಕರ್(65),ರುದ್ರವ್ವ ನಾಯ್ಕರ(55) ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಯಲ್ಲಪ್ಪ ಚಿಗರಿ ಹಾಗೂ 13 ವರ್ಷದ ಬಾಲಕಿ ಚಂದ್ರವ್ವ ಅವರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿರೇಶೆಲ್ಲಿಕೇರಿಯಿಂದ ಕಾತರಕಿ ಸೇತುವೆ ಮೂಲಕ ಬೈಕ್‌ನಲ್ಲಿ ನಾಲ್ವರು ಜಾನಮಟ್ಟಿ ಗ್ರಾಮಕ್ಕೆ ಹೋಗುವ ವೇಳೆ  ದುರ್ಘಟನೆ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ನಾಲ್ಕು ಜನರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. 
 

Latest Videos
Follow Us:
Download App:
  • android
  • ios