Asianet Suvarna News Asianet Suvarna News

ಬೆಂಗಳೂರಿನಲ್ಲಿ ಶೀಘ್ರವೇ ಮತ್ತೆ ಟೋಯಿಂಗ್ ನೀತಿ ಜಾರಿಯಾಗೋ ಲಕ್ಷಣ!

ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ನೀತಿ ಜಾರಿಯಾಗೋ ಲಕ್ಷಣ ಕಂಡು ಬರುತ್ತಿದೆ. ಇದಕ್ಕೆ ಪೂರಕವೆಂಬಂತೆ  ನಗರ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಬೆಂಗಳೂರು ನಗರದಲ್ಲಿ ಟೋಯಿಂಗ್ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ಪಟ್ಟಿದ್ದಾರೆ.

Towing  re-introduced soon in bengaluru gow
Author
First Published Sep 16, 2022, 4:03 PM IST

ಬೆಂಗಳೂರು (ಸೆ.16):  ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ನೀತಿ ಜಾರಿಯಾಗೋ ಲಕ್ಷಣ ಕಂಡು ಬರುತ್ತಿದೆ. ಇಷ್ಟು ದಿನ ನಿಂತಿದ್ದ ಬೈಕ್ ಟೋಯಿಂಗ್ ಮತ್ತೆ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ.  ನಗರ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಬೆಂಗಳೂರು ನಗರದಲ್ಲಿ ಟೋಯಿಂಗ್ ಅವಶ್ಯಕತೆ ಇದೆ.  ರಸ್ತೆ ಸಂಚಾರಕ್ಕೆ ಅಡ್ಡಲಾಗಿ ನಿಲ್ಲಿಸುವ ವಾಹನಗಳನ್ನ ಟೋ ಮಾಡುವ ಅವಶ್ಯಕತೆ ಇದೆ. ಆದರೆ ಈ ನಿಯಮದಲ್ಲಿ ಕೆಲವು ಲೋಪದೋಷಗಳು ಹಾಗೂ ದೂರುಗಳು  ಕೂಡ ಕೇಳಿ ಬಂದಿವೆ. ಸದ್ಯ ಬೈಕ್ ಟೋಯಿಂಗ್ ನ ಯಾವ ರೀತಿಯಲ್ಲಿ ಯಾವ ನಿಯಮಗಳ ಅಡಿಯಲ್ಲಿ ಮಾಡಬೇಕು ಎಂಬುದನ್ನು ಇಲಾಖೆ ನಿರ್ಧಾರ ಮಾಡುತ್ತೆ.  ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯಾಗಿ ದೂರು ಬರದ ರೀತಿಯಲ್ಲಿ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದರು. ಬೈಕ್ ಟೋಯಿಂಗ್ ಮಾ ಫಿಯಾ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಬಳಿಕ ಪೊಲೀಸ್ ಇಲಾಖೆ ಟೋಯಿಂಗ್ ಅನ್ನ ಸ್ಥಗಿತಗೊಳಿಸಲಾಗಿತ್ತು. ಅದ್ರಲ್ಲೂ ಜೀವನ ಭೀಮಾನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಡಿಲ್ವರಿ ಬಾಯ್ ಬೈಕ್ ಟೋಯಿಂಗ್ ಮಾಡುವಾಗ ಆತ ಒಂದು ಕೈಯಲ್ಲಿ ಊಟದ ಬ್ಯಾಗ್ ಒಂದು ಕೈಯಲ್ಲಿ ಬೈಕ್ ಹಿಡಿದುಕೊಳ್ಳಲು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಾದ ನಂತ್ರ ಸಂಪೂರ್ಣವಾಗಿ ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ಬೈಕ್ ಟೋಯಿಂಗ್ ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿತ್ತು. ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಟೋಯಿಂಗ್ ಕಂಪನಿ ಮಾಲೀಕರು ಹೈಕೋರ್ಟ್ ಮೇಟ್ಟಿಲೇರಿದ್ದರು.  

ಟೋಯಿಂಗ್‌ ಆರಂಭಕ್ಕೆ ಮನವಿ ಪತ್ರ: ನಗರದಲ್ಲಿ ವಾಹನಗಳ ಟೋಯಿಂಗ್‌ ಕಾರ್ಯಾಚರಣೆ ಮುಂದುವರಿಸಲು ಅನುಮತಿ ಕೋರಿ ಕರ್ನಾಟಕ ಟೋಯಿಂಗ್‌ ವಾಹನ ಮಾಲಿಕರು ಮತ್ತು ಕಾರ್ಮಿಕರ ಕ್ಷೇಮಾಭಿವದ್ಧಿ ಸಂಘ ಸಲ್ಲಿಸಿರುವ ಮನವಿ ಪತ್ರವನ್ನು ಆರು ವಾರಗಳಲ್ಲಿ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಚ್‌ ನಿರ್ದೇಶಿಸಿದೆ.

ಟೋಯಿಂಗ್‌ ಕಾರ್ಯಚರಣೆ ಮುಂದುವರಿಸಲು ಅನುಮತಿ ಕೋರಿ ಸಲ್ಲಿಸಿರುವ ಮನವಿ ಪತ್ರವನ್ನು ಸರ್ಕಾರ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ಸಂಘ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನ್ಯಾಯಪೀಠ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.

ಸಂವಿಧಾನದ 350ನೇ ಪರಿಚ್ಛೇದದ ಪ್ರಕಾರ, ಪ್ರತಿ ಭಾರತೀಯ ಪ್ರಜೆ ಸಹ ತನ್ನ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಪ್ರಾಧಿಕಾರಗಳಿಗೆ ತನ್ನದೇ ಭಾಷೆಯಲ್ಲಿ ಮನವಿ ಪತ್ರ ಸಲ್ಲಿಸುವ ಹಕ್ಕು ಹೊಂದಿದ್ದಾನೆ. ಅದರಂತೆ ಸರ್ಕಾರಿ ಅಧಿಕಾರಿ ಹಾಗೂ ಪ್ರಾಧಿಕಾರಗಳ ಪ್ರಜೆಗಳ ಮನವಿ ಪತ್ರವನ್ನು ತ್ವರಿತವಾಗಿ ಪರಿಗಣಿಸಿ ಉತ್ತರ ನೀಡಬೇಕಿದೆ. ಆದರೆ, 2022ರ ಮೇ 21 ಮತ್ತು 26ರಂದು ಸಂಘ ಸಲ್ಲಿಸಿದ ಮನವಿ ಶೈತ್ಯಾಗಾರದಲ್ಲಿದೆ. ಅದನ್ನು ಅನಿರ್ದಿಷ್ಟಅವಧಿಗೆ ಶೈತ್ಯಾಗಾರದಲ್ಲಿಯೇ ಮುಂದುವರಿಸಿಕೊಂಡು ಹೋಗಬಾರದು. ಆದ್ದರಿಂದ ಸಂಘದ ಮನವಿಯನ್ನು ಆರು ವಾರದಲ್ಲಿ ಮನವಿ ಪತ್ರ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.

ಆದೇಶದಲ್ಲಿ ಮಂಕುತಿಮ್ಮನ ಕಗ್ಗ!
ಸರ್ಕಾರದ ನಿರ್ಲಕ್ಷ್ಯ ಧೋರಣೆ ಕುರಿತು 1943ರಲ್ಲಿ ಸಾಹಿತಿ ಡಿ.ಜಿ.ಗುಂಡಪ್ಪ ತಮ್ಮ ಜನಪ್ರಿಯ ‘ಮಂಕುತಿಮ್ಮನ ಕಗ್ಗ’ ಪುಸ್ತಕದಲ್ಲಿ ಬರೆದಿರುವ ಸಾಲನ್ನು ನ್ಯಾಯಮೂರ್ತಿಗಳು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ‘ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ! ಸುರೆ ಕುಡಿದವರು ಕೆಲವರು ಹುಟ್ಟು ಹಾಕುವರು!! ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು! ಉರುಳದಿಹುದಚ್ಚರಿಯೋ!- ಮಂಕುತಿಮ್ಮ!!’ ಎಂದು ಸ್ವಾತಂತ್ರ್ಯ ಪೂರ್ವದಲ್ಲಿ ಡಿಜಿವಿ ಬರೆದಿರುವ ಕಗ್ಗದ ಸಾಲು ಹಿಂದಿಗಿಂತಲೂ ಇಂದು ಪ್ರಸ್ತುತವಾಗಿದೆ. ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಇದಕ್ಕಿಂತ ಇನ್ನೂ ಹೆಚ್ಚು ನಿರ್ದಿಷ್ಟವಾಗಿ ಹೇಳುವ ಅಗತ್ಯ ಇಲ್ಲ. ಕಲ್ಯಾಣ ರಾಜ್ಯವು ಸಂವಿಧಾನದ ಆಶಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಆದೇಶದಲ್ಲಿ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios