ಜಮೀನು ವಿವಾದ ವಿಚಾರ ವೈಷಮ್ಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಿ ಟಾರ್ಚರ್ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಡಣಾಯಕನಪುರ ಗ್ರಾಮದಲ್ಲಿ ನಡೆದಿದೆ. 

ಮಂಡ್ಯ (ಜ. 1): ಜಮೀನು ವಿವಾದ (Land Dispute) ವಿಚಾರ ವೈಷಮ್ಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕಿಡ್ನಾಪ್ (Kidnap) ಮಾಡಿ ಟಾರ್ಚರ್ (Torture) ಮಾಡಿರುವ ಘಟನೆ ತಾಲೂಕಿನ ಡಣಾಯಕನಪುರ ಗ್ರಾಮದಲ್ಲಿ ನಡೆದಿದೆ. ರವಿಕುಮಾರ್ ಎಂಬುವರಿಗೆ ಅರೆಬೆತ್ತಲೆಗೊಳಿಸಿ ಕೈಕಾಲು ಕಟ್ಟಿ ಹಾಕಿ ಟಾರ್ಚರ್ ನೀಡಲಾಗಿದ್ದು, ಪೊಲೀಸರನ್ನು (Police) ಕರೆಸಿ ಬಂಧನದಿಂದ ಗ್ರಾಮಸ್ಥರು ಮುಕ್ತಿಗೊಳಿಸಿದ್ದಾರೆ.

ನಾರಾಯಣಿ, ಕಾಂತರಾಜ್, ಶಿವಲಿಂಗ, ಶಿವಕುಮಾರ್ ಹಾಗೂ ಪಂಚಲಿಂಗಯ್ಯ ವಿರುದ್ಧ ಕಿಡ್ನಾಪ್ ಆರೋಪ ಮಾಡಲಾಗಿದ್ದು, ಜಮೀನು ವಿವಾದದ ವೈಷಮ್ಯದಿಂದ ಕಿಡ್ನಾಪ್ ಮಾಡಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಜೊತೆಗೆ ಹಿಂಸೆ ನೀಡಿ ಖಾಲಿ ಪತ್ರಕ್ಕೆ ಹೆಬ್ಬೆಟ್ಟು ಹೊತ್ತಿಸಿಕೊಂಡಿದ್ದಾರೆಂದು ಆರೋಪ ಇದೆ. ರವಿಕುಮಾರ್ ನರಳುತ್ತಿರುವ ಶಬ್ಧ ಕೇಳಿ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. 

ಈ ವೇಳೆ ಸ್ಥಳಕ್ಕಾಗಮಿಸಿದ ಕೆರೆಗೋಡು ಪೊಲೀಸರಿಂದ ವ್ಯಕ್ತಿಯನ್ನ ರಕ್ಷಣೆ ಮಾಡಿರುವ ಘಟನೆ ಕಳೆದ ಮಂಗಳವಾರ ತಡವಾಗಿ ಬೆಳಕಿಗೆ ಬಂದಿದೆ. ಅರಬೆತ್ತಲಾಗಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಿಡ್ನಾಪ್ ಮಾಡಿ ಟಾರ್ಚರ್ ನೀಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಠಾಣೆಗೆ ರವಿಕುಮಾರ್ ದೂರು ನೀಡಿದ್ದಾರೆ.

ಮದುವೆ ಮನೆಯಲ್ಲಿ ಪೊಲೀಸ್ ದೌರ್ಜನ್ಯ ಪ್ರಕರಣ: ಸಚಿವ ಆರಗ ಜ್ಞಾನೇಂದ್ರ ಭೇಟಿ

ಶ್ರೀಮಂತನೆಂದು ಭಾವಿಸಿ ಆಟೊ ಚಾಲಕನ ಪುತ್ರ ಕಿಡ್ನಾಪ್‌: ಕಾಲೇಜಿಗೆ ಕಾರಿನಲ್ಲಿ ಬರುತ್ತಿದ್ದ ಸಹಪಾಠಿ ಶ್ರೀಮಂತನೆಂದು ಭಾವಿಸಿ ಆತನನ್ನು ಅಪಹರಿಸಿ 1.20 ಲಕ್ಷ ರು ಸುಲಿಗೆ ಮಾಡಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿಯನ್ನು ಅನ್ನ ಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಖಾಸಗಿ ಕಾಲೇಜಿನ ಬಿಸಿಎ ಪದವಿ ವಿದ್ಯಾರ್ಥಿಗಳಾದ ಭುವನ್‌, ಪ್ರಜ್ವಲ್‌, ಅನಿಲ್‌ ಮತ್ತು ಬಿಪಿಒ ಉದ್ಯೋಗಿಗಳಾದ ದೀಪು, ನಿಶ್ಚಯ್‌, ಕ್ಯಾಬ್‌ ಚಾಲಕ ಪ್ರಜ್ವಲ್‌ ಬಂಧಿತರು. 

ಈ ಆರು ಮಂದಿ ಪಾಪ ರೆಡ್ಡಿ ಪಾಳ್ಯದ ಬಿಸಿಎ ಪದವಿ ವಿದ್ಯಾರ್ಥಿ ಅಭಿಷೇಕ್‌ (20) ಎಂಬುವವನ್ನು ಅಪಹರಿಸಿ, ಚಿನ್ನದ ಸರ ಹಾಗೂ ನಗದು ಸುಲಿಗೆ ಮಾಡಿದ್ದರು. ಬಳಿಕ ಯಾರಿಗೂ ಈ ಕೃತ್ಯದ ಬಗ್ಗೆ ಮಾಹಿತಿ ನೀಡದಂತೆ ಎಚ್ಚರಿಕೆ ನೀಡಿ ಅಭಿಷೇಕನನ್ನು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಆಟೋ ಚಾಲಕನ ಪುತ್ರನಾದ ಅಭಿಷೇಕ್‌, ವ್ಯಾಸಂಗ ಜತೆಗೆ ರಿಯಲ್‌ ಎಸ್ಟೇಟ್‌ ಕಂಪನಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ. 

ಹೊಸ ವರ್ಷ ಆಚರಣೆ ಹಿನ್ನೆಲೆ: ಸರ್ಕಾರಿ ಶಾಲೆಗೆ ನುಗ್ಗಿ ರಂಪಾಟ ಮಾಡಿದ ಕಿಡಿಗೇಡಿಗಳು

ಕಾಲೇಜಿಗೆ ಆಗಾಗ್ಗೆ ಸಹೋದರನ ಕಾರು ತೆಗೆದುಕೊಂಡು ಬರುತ್ತಿದ್ದ. ಇದನ್ನು ಕೆಲ ದಿನಗಳಿಂದ ಗಮನಿಸಿದ್ದ ಆರೋಪಿಗಳಾದ ಭುವನ್‌ ಮತ್ತು ಪ್ರಜ್ವಲ್‌, ಅಭಿಷೇಕ್‌ನನ್ನು ಅಪಹರಿಸಿ ಹಣ ಸುಲಿಗೆ ಮಾಡಲು ಸಹಚರರೊಂದಿಗೆ ಸೇರಿಕೊಂಡು ಸಂಚು ರೂಪಿಸಿದ್ದರು. ಅದರಂತೆ ಬೆಳಗ್ಗೆ ಕಾರಿನಲ್ಲಿ ಕಾಲೇಜಿಗೆ ಬಂದಿದ್ದ ಅಭಿಷೇಕ್‌, ಇಬ್ಬರು ಸ್ನೇಹಿತರ ಜತೆ ಮಾತನಾಡಿಕೊಂಡು ನಿಂತಿದ್ದ. ಈ ವೇಳೆ ಅಭಿಷೇಕ್‌ ಚಲನವಲನದ ಮೇಲೆ ನಿಗಾವಹಿಸಿದ್ದ ಆರೋಪಿಗಳು, ಅಭಿಷೇಕ್‌ ಜತೆಯಲ್ಲಿದ್ದ ಸ್ನೇಹಿತರು ಹೋಗುತ್ತಿದಂತೆ ಇಬ್ಬರು ಮಂಕಿ ಕ್ಯಾಪ್‌ ಧರಿಸಿಕೊಂಡು ಬಂದು ತಲೆಗೆ ಹಲ್ಲೆ ಮಾಡಿ ಅಭಿಷೇಕ್‌ನ ಕಾರಿನಲ್ಲೇ ಅಪಹರಿಸಿದ್ದರು.