Tumakuru : ಲಂಚ ಕೊಡದ ರೈತರಿಂದ ಕೊಬ್ಬರಿ ಖರೀದಿ ತಿರಸ್ಕರಿಸಿದ ಎಂಎಸ್‌ಪಿ ಅಧಿಕಾರಿ
ತಿಪಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಎಂಎಸ್‌ಪಿ ಖರೀದಿ ಕೇಂದ್ರದಲ್ಲಿ ಲಂಚ ಕೊಡದ ರೈತರಿಂದ ಅಧಿಕಾರಿಗಳು ಕೊಬ್ಬರಿ ಖರೀದಿ ತಿರಸ್ಕರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ತುಮಕೂರು (ಜೂ.12): ರಾಜ್ಯದಲ್ಲಿ ಅತಿದೊಡ್ಡ ಕೊಬ್ಬರಿ ಮಾರುಕಟ್ಟೆಯನ್ನು ಹೊಂದಿರುವ ತಿಪಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಎಂಎಸ್‌ಪಿ ಖರೀದಿ ಕೇಂದ್ರದಲ್ಲಿ ಲಂಚ ಕೊಡದ ರೈತರಿಂದ ಅಧಿಕಾರಿಗಳು ಕೊಬ್ಬರಿ ಖರೀದಿ ತಿರಸ್ಕರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ತುಮಕೂರು ಜಿಲ್ಲೆ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಎಂ ಎಸ್ ಪಿ ಖರೀದಿ ಕೇಂದ್ರದಲ್ಲಿ ಘಟನೆ ನಡೆದಿದೆ. ತಿಪಟೂರಿನಲ್ಲಿ ಎಂಎಸ್‌ಪಿ ಕೊಬ್ಬರಿ ಖರೀದಿ ಕೇಂದ್ರದಲ್ಲಿ ರೈತರಿಂದ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ಲಂಚ ಕೊಡದಿದ್ದಕ್ಕೆ ಎಫ್ ಎ ಕ್ಯೂ ಗುಣಮಟ್ಟದ ಕೊಬ್ಬರಿ ಖರೀದಿ ಮಾಡದೇ ತಿರಸ್ಕಾರ ಮಾಡಲಾಗುತ್ತಿದೆ. ಈ ಮೂಲಕ ಎಂಎಸ್‌ಪಿ ಕೊಬ್ಬರಿ ಖರೀದಿ ಕೇಂದ್ರದ ಅಧಿಕಾರಿಯಿಂದ ರೈತರ ಆತ್ಮಹತ್ಯೆಗೆ ಪ್ರಚೋದನೆ ಮಾಡಲಾಗುತ್ತಿದೆ ಎಂಬ ಆರೋಪ ರೈತರಿಂದ ವ್ಯಕ್ತವಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಭರ್ಜರಿ ಟ್ವಿಸ್ಟ್; ನಟ ದರ್ಶನ್ ಬಚಾವಾಗಲು 30 ಲಕ್ಷ ರೂ. ಡೀಲ್
ಜೊತೆಗೆ, ಸರ್ಕಾರದ ನಿಯಮಾವಳಿ ಪ್ರಕಾರ ಪ್ರತಿ ಕೊಬ್ಬರಿ ಚೀಲಕ್ಕೆ 20 ರೂ. ಹಮಾಲಿ ದರವನ್ನು ನಿಗದಿ ಮಾಡಲಾಗಿದೆ. ಹಮಾಲಿಗಳು ರೈತರಿಂದ ಪ್ರತಿ ಚೀಲಕ್ಕೆ 100 ರೂ. ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಮಾಲಿಗಳ ನಡೆಯನ್ನು ಪ್ರಶ್ನೆ ಮಾಡಿದ ರೈತರ ಮೇಲೆ ಹಮಾಲರು ಮತ್ತು ಅಧಿಕಾರಿಗಳಿಂದ ದೌರ್ಜನ್ಯ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಂಎಸ್‌ಪಿ ಅಧಿಕಾರಿ ಗಣೇಶ್ ಹಾಗೂ ರೈತರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಈ ಬಗ್ಗೆ ಮಾಧ್ಯಮಗಳನ್ನು ಕರೆಸಿ ಪ್ರಶ್ನೆ ಮಾಡಿಸಿದರೆ, ದೇವರ ಪ್ರಮಾಣವಾಗಿಯೂ ನಾನು ಲಂಚ ಪಡೆದಿಲ್ಲ ಎಂದು ಅಧಿಕಾರಿ ಹೇಳುತ್ತಾರೆ.
ನಾನಂತೂ ಯಾರಿಂದಲೂ ಲಂಚವನ್ನು ಸ್ವೀಕಾರ ಮಾಡಿಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡ್ತೀನಿ. ರೈತರು ನನ್ನ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಳ್ತೀರಾ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಎಂಎಸ್‌ಪಿ ಕೇಂದ್ರದಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ, ಎಂಎಸ್‌ಪಿ ಕೇಂದ್ರದ ಅಧಿಕಾರಿ ಗಣೇಶ್ ಹಾಗೂ ಹಮಾಲರ ಮೇಲೆ ಸರ್ಕಾರದ ಹಿರಿಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.