ಸಿಇಸಿ ಮೀಟಿಂಗ್‌ ನಂತರ ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ತುಮಕೂರು : ಸಿಇಸಿ ಮೀಟಿಂಗ್‌ ನಂತರ ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಎರಡನೇ ಪಟ್ಟಿಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಇಸಿ ಮೀಟಿಂಗ್‌ ನಂತರ ಮಂಗಳವಾರ ಸಂಜೆ ಅಥವಾ ಬುಧವಾರ ಬೆಳಗ್ಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.

ಕಾಂಗ್ರೆಸ್‌ ಪಕ್ಷದ ಮೇಲೆ ವಿಶ್ವಾಸವಿರುವುದರಿಂದಲೇ ಬಿಜೆಪಿ, ಜೆಡಿಎಸ್‌ ತೊರೆದು ಹಲವು ಮುಖಂಡರು, ಅಭ್ಯರ್ಥಿಗಳು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್‌ ಪಕ್ಷದ ಬಗ್ಗೆ ನಂಬಿಕೆ, ವಿಶ್ವಾಸ ಉಂಟಾಗಿದೆ ಎಂದರ್ಥ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಕೆಲಸ ಮಾಡುತ್ತೇವೆ ಎಂದರೆ, ಬನ್ನಿ ಅಂತ ನಾವು ಸ್ವಾಗತ ಮಾಡುತ್ತೇವೆ. ಚುನಾವಣಾ ಸಂದರ್ಭದಲ್ಲಿ ಇದೆಲ್ಲಾ ಸಹಜ. ಹೆಚ್ಚಿನ ಜನರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ ಎಂದರೆ ಈ ಸಲ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಅನ್ನೋ ಸೂಚನೆ ಕಾಣುತ್ತಿದೆ ಎಂದರ್ಥ ಎಂದರು.

ಹೊಸಬರು, ಹಳಬರು ಎಂಬ ಬಂಡಾಯ ಏನು ಕಾಣಲ್ಲ. ಸ್ಪಲ್ಪ ದಿನ ಅಸಮಾಧಾನ ಇರುತ್ತದೆ. ಆಮೇಲೆ ಎಲ್ಲವೂ ಸರಿಹೋಗುತ್ತದೆ. ಸಿದ್ದರಾಮಯ್ಯ ಆದಿಯಾಗಿ ಬಹಳಷ್ಟುಜನರು ಜೆಡಿಎಸ್‌ ನಿಂದ ಕಾಂಗ್ರೆಸ್‌ಗೆ ಬಂದರು. ಅವರೆಲ್ಲಾ ಸೆಟಲ… ಆಗಿಬಿಟ್ಟರು. ಬಹಳ ಚೆನ್ನಾಗಿ ಅವರೆಲ್ಲಾ ಈಗ ಮುಖಂಡರಾಗಿದ್ದಾರೆ. ಅವರನ್ನ ಈಗ ಒರಿಜಿನಲ… ಕಾಂಗ್ರೆಸ್‌, ವಲಸೆ ಕಾಂಗ್ರೆಸ್‌ ಅಂತ ಏನು ಪರಿಗಣಿಸುತ್ತಿಲ್ಲ. ಅವರಿಗೆ ಎಲ್ಲಾ ಸ್ಥಾನಮಾನ ಕೊಡ್ತಿವಿ. ಜೊತೆಯಲ್ಲಿ ಇಟ್ಟುಕೊಳ್ಳುತ್ತೇವೆ. ಅವರು ಕಾಂಗ್ರೆಸ್‌ನವರೇ ಆಗಿಬಿಡುತ್ತಾರೆ. ಕಾಂಗ್ರೆಸ್‌ ಆದರ್ಶಗಳಿಗೆ ಅವರೆಲ್ಲಾ ಒಗ್ಗಿ ಹೋಗುತ್ತಾರೆ ಎಂದರು.

ಟಿಕೆಟ್‌ಗಾಗಿ ಸಹಜವಾಗಿ ಒತ್ತಾಯ ಮಾಡುತ್ತಾರೆ. ಟಿಕೆಚ್‌ ಕೇಳುತ್ತಾರೆ. ಗೆಲುವಿನ ಮಾನದಂಡಗಳ ಆಧಾರದ ಮೇಲೆ ಟಿಕೆಚ್‌ ಕೊಡಲಾಗುತ್ತದೆ. ಯಾರೋ ವಿಷದ ಬಾಟಲ… ಹಿಡಿದುಕೊಂಡು ಗಲಾಟೆ ಮಾಡಿದರೆ, ಅಷ್ಟನ್ನೇ ನೋಡಿಕೊಂಡು ಟಿಕೆಟ್‌ ಕೊಡೋಕೆ ಆಗಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮತಯಂತ್ರದ ವಿರುದ್ದ ದೂರು ಇದೆ:

ಮತಯಂತ್ರ (ಇವಿಎಂ)ದ ಮೇಲೆ ಮೊದಲಿನಿಂದಲೂ ಅನುಮಾನ ಇದೆ. ಹೆಚ್ಚು ಕಡಿಮೆ ಎಲ್ಲಾ ಪಕ್ಷಗಳಿಗೂ ಈ ಬಗ್ಗೆ ಅನುಮಾನ ಇದೆ. ಎಲೆಕ್ಷನ್‌ ಕಮಿಷನ್‌ನವರು ಪದೇ ಪದೇ ಆ ರೀತಿ ಆಗಲ್ಲ ಅಂತ ವಿರೋಧಪಕ್ಷಗಳ ದೂರನ್ನು ತಿರಸ್ಕರಿಸುತ್ತಾ ಬಂದಿದ್ದಾರೆ. ತಾಂತ್ರಿಕವಾಗಿ ಇದು ಸಾಧ್ಯ ಎಂದು ತಂತ್ರಜ್ಞರು ಈಗಾಗಲೇ ಸಾಬೀತುಪಡಿಸಿದ್ದಾರೆ. ಎಲೆಕ್ಷನ್‌ ಕಮಿಷನ್‌ ರೀತಿಯಲ್ಲೇ ನ್ಯಾಯಾಲಯ ಸಹ ನಮ್ಮ ದೂರುಗಳನ್ನು ತಿರಸ್ಕರಿಸಿದೆ. ಹೀಗಾಗಿ ಬೇರೆ ದಾರಿಯಿಲ್ಲ. ಈ ವಿಷಯ ಲೋಕಸಭೆಗೆ ಹೋಗಿ ಅಲ್ಲಿ ಚರ್ಚೆ ಮಾಡಿ, ಬಹುಮತದ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳಬೇಕು. ಇವಿಎಂ ಮೇಲೆ ಅನುಮಾನ ಅಂತು ನಮಗೆ ಇದ್ದೆ ಇದೆ. ತಾಂತ್ರಿಕ ವಿಚಾರ ಗೊತ್ತಿರುವುದರಿಂದ ವೈಯಕ್ತಿಕವಾಗಿ ನಾನು ಇದನ್ನು ನಂಬುತ್ತೇನೆ ಎಂದು ತಿಳಿಸಿದರು.