ರಾಮನಗರ: ಜಾನುವಾರು ಉಳಿಸಲು ಹೋಗಿ ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರ ಸಾವು..!
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮುತ್ತಸಾಗರ ಗೊಲ್ಲರಹಟ್ಟಿಯ ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವು.
ಕುದೂರು(ಏ.23): ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮುತ್ತಸಾಗರ ಗೊಲ್ಲರಹಟ್ಟಿಯ ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಿನ್ನೆ(ಶನಿವಾರ) ಮಧ್ಯಾಹ್ನ ನಡೆದಿದೆ.
ಗೊಲ್ಲರಹಟ್ಟಿಯ ನಾಗರಾಜು (38), ಜ್ಯೋತಿ (32) ಹಾಗೂ ಲಕ್ಷ್ಮಿ (22) ಮೃತರು. ಕುರಿಯ ಮೈ ತೊಳೆಯಲು ಇವರು ಕೆರೆಗೆ ಹೋಗಿದ್ದರು. ಈ ವೇಳೆ, ಕುರಿಗಳು ನೀರಿನೊಳಗೆ ಹೋದಾಗ ಅವುಗಳನ್ನು ಹಿಡಿಯಲು ನಾಗರಾಜು ಹೋದ. ಕೆರೆಯಲ್ಲಿನ ಮಣ್ಣನ್ನು ಎಲ್ಲೆಂದರಲ್ಲಿ ತೆಗೆದು ಹಳ್ಳ ಮಾಡಿದ್ದರು. ಅದರ ಅರಿವು ಇಲ್ಲದೆ ಮುಂದೆ ಹೆಜ್ಜೆ ಇಟ್ಟಾಗ ಮಣ್ಣಿನ ಕೆಸರಲ್ಲಿ ಸಿಕ್ಕಿಹಾಕಿಕೊಂಡು ಮುಳುಗಿದ. ಆತನನ್ನು ಕಾಪಾಡಲು ಆತನ ಅಕ್ಕಂದಿರಾದ ಲಕ್ಷ್ಮಿ ಮತ್ತುಜ್ಯೋತಿ ಹೋದಾಗ, ಅವರೂ ಮಣ್ಣಿನ ಕೆಸರಲ್ಲಿ ಸಿಕ್ಕಿಹಾಕಿಕೊಂಡು, ಮುಳುಗಿದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ, ಮೂವರು ಸ್ಥಳದಲ್ಲೇ ಸಾವು!
ಈ ಪೈಕಿ, ಲಕ್ಷ್ಮಿ ಮೂಗಿ. ಮೂವರೂ ವಿವಾಹಿತರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ರಜೆಗೆಂದು ತಾಯಿಯ ಮನೆಗೆ ಬಂದಾಗ ಈ ದುರ್ಘಟನೆ ನಡೆದಿದೆ. ಗ್ರಾಮಸ್ಥರ ನೆರವಿನಿಂದ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.