ಚನ್ನಪಟ್ಟಣ: ಸರಣಿ ಅಪಘಾತ, ಮೂರು ಮಂದಿ ದುರ್ಮರಣ

ನಿಂತಿದ್ದ ಜೀಪ್‌ಗೆ ವೇಗವಾಗಿ ಬಂದು ಡಿಕ್ಕಿ ಹೊಡೆದ ಐಚರ್‌ ಟ್ರಕ್‌| ಇದೇ ಸ್ಥಳದಲ್ಲಿ ನಿಂತಿದ್ದ ಕಾರು ಮತ್ತು ಎರಡು ಟಿಟಿ ವಾಹನಗಳಿಗೆ ಡಿಕ್ಕಿ| ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

Three Killed, Two Injured in Serial Accident in Channapattana grg

ಚನ್ನಪಟ್ಟಣ(ಮಾ.21): ವೇಗವಾಗಿ ಬಂದ ಟ್ರಕ್‌ ಚಾಲಕ ಮಾಡಿದ ಸರಣಿ ಅಪಘಾತದಿಂದಾಗಿ ಮೂರು ಮಂದಿ ಸಾವಿಗೀಡಾಗಿರುವ ಘಟನೆ ಇಲ್ಲಿನ ಹನುಮಂತ ನಗರ ಸಮೀಪ ಶನಿವಾರ ತಡರಾತ್ರಿ ನಡೆದಿದೆ.

ಘಟನೆಯಲ್ಲಿ ಬೆಂಗಳೂರು ಮೂಲದ ಮದನ್‌, ವಿಜಯ್‌ ಮತ್ತು ಪ್ರದೀಪ್‌ ಎಂಬುವರು ಮೃತಪಟ್ಟಿದ್ದು, ವಿಜಯ್‌, ಆನಂದ್‌, ಪ್ರಕಾಶ್‌ ಎಂಬುವರು ಗಾಯಗೊಂಡಿದ್ದಾರೆ.  ಹನುಮಂತಪುರ ಬಳಿ ನಿಂತಿದ್ದ ಜೀಪ್‌ಗೆ ವೇಗವಾಗಿ ಬಂದ ಐಚರ್‌ ಟ್ರಕ್‌ ಡಿಕ್ಕಿ ಹೊಡೆದು ಬಳಿಕ ಇದೇ ಸ್ಥಳದಲ್ಲಿ ನಿಂತಿದ್ದ ಕಾರು ಮತ್ತು ಎರಡು ಟಿಟಿ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮದನ್‌ ಎಂಬುವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ವಿಜಯ್‌ ಎಂಬುವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಇಂಡಿ: ಭೀಕರ ಅಪಘಾತ: ಕೆವಿಜಿ ಬ್ಯಾಂಕ್‌ ಮ್ಯಾನೇಜರ್‌, ಕ್ಯಾಶಿಯರ್‌ ಸಾವು

ತೀವ್ರ ಗಾಯಗೊಂಡಿದ್ದ ಪ್ರದೀಪ್‌ ಎಂಬುವರು ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಮೃತರು ಬೆಂಗಳೂರಿನ ಪೈಪ್‌ಲೈನ್‌ ಮತ್ತು ಅಂಜನಾನಗರ ನಿವಾಸಿಗಳು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 

Latest Videos
Follow Us:
Download App:
  • android
  • ios