ಕಲಬುರಗಿ: ಅಫಜಲಪುರದ ಗೊಬ್ಬೂರ ಗ್ರಾಮದ ಬಳಿ ಸರಣಿ ಅಪಘಾತ, ಮೂವರ ದುರ್ಮರಣ
ಟಿಟಿ ವಾಹನ ಚಾಲಕ ಓವರ್ ಟೆಕ್ ಮಾಡಲು ಹೋಗಿ ಸರಣಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ದೇವಲ ಗಾಣಗಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿ(ಡಿ.25): ಟಿಟಿ ವಾಹನ, ಕಬ್ಬಿನ ಲಾರಿ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಟಿಟಿ ವಾಹನದಲ್ಲಿ ಇಬ್ಬರು ಸೇರಿ ಮೂವರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬೂರು ಗ್ರಾಮದ ಬಳಿ ಇಂದು(ಬುಧವಾರ) ನಡೆದಿದೆ.
ದುರ್ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮೃತರ ಹೆಸರು ಇನ್ನು ತಿಳಿದು ಬಂದಿಲ್ಲ.
350 ಅಡಿ ಆಳದ ಕಮರಿಗೆ ಬಿದ್ದ ಸೇನಾ ವಾಹನ, 5 ಸೈನಿಕರು ಹುತಾತ್ಮ!
ಟಿಟಿ ವಾಹನ ಚಾಲಕ ಓವರ್ ಟೆಕ್ ಮಾಡಲು ಹೋಗಿ ಸರಣಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ದೇವಲ ಗಾಣಗಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇವಲ ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.