ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಡೆದ ಘಟನೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ಛತ್ತೀಸ್ಗಢದಿಂದ ಕರ್ನಾಟಕಕ್ಕೆ ಬಂದು ಹೀಗೆ ಸಾವನ್ನಪ್ಪಿದ್ದು ಮಾತ್ರ ವಿಪರ್ಯಾಸ. 

ರಾಯಚೂರು(ಜೂ.14): ಜೆಸಿಬಿಯೊಂದು ಹರಿದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ಇಂದು(ಬುಧವಾರ) ಬೆಳಗ್ಗೆ ನಡೆದಿದೆ. ಛತ್ತೀಸ್ಗಢ ಮೂಲದ ಕೃಷ್ಣಾ(25) ಶಿವುರಾಮ್(30) ಹಾಗೂ ಬಲರಾಮ(28) ಎಂಬುವರೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. 

ಬೋರ್‌ವೆಲ್ ಕೆಲಸ ಮುಗಿಸಿಕೊಂಡು ಜಮೀನಿನಲ್ಲೇ ಮಲಗಿದ್ದ ವೇಳೆ ದುರಂತ ಸಂಭವಿಸಿದೆ. ಗಾಢ ನಿದ್ರೆಯಲ್ಲಿದ್ದ ಮೂವರ ಮೇಲೆ ಜೆಸಿಬಿ ಹರಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.

ಸ್ನೇಹಿತನ ಮದುವೆಗೆ ಹೋಗಿ ಬರ್ತಿದ್ದವರು ಮಸಣ ಸೇರಿದರು : ಇಬ್ಬರ ಸಾವು, ಐವರಿಗೆ ಗಂಭೀರ

ಬಾಲಯ್ಯ ಎಂಬುವರಿಗೆ ಸೇರಿದ್ದ ಜೆಸಿಬಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ಛತ್ತೀಸ್ಗಢದಿಂದ ಕರ್ನಾಟಕಕ್ಕೆ ಬಂದು ಹೀಗೆ ಸಾವನ್ನಪ್ಪಿದ್ದು ಮಾತ್ರ ವಿಪರ್ಯಾಸ.