ಈ ಬಾರಿ ಒಗ್ಗಟ್ಟು ಪ್ರದರ್ಶಿಸಬೇಕಿದೆ: ನಾರಾಯಣಸ್ವಾಮಿ
ರಾಜ್ಯದ ಮಾದಿಗ ಸಮುದಾಯ ಒಳಮೀಸಲಾತಿ ನೀಡಿದಂತ ಬಿಜೆಪಿ ಪಕ್ಷಕ್ಕೆ ನಮ್ಮ ಋುಣ ತಿರಿಸುವ ಸಮಯ ಬಂದಿದೆ. ಬಿಜೆಪಿ ಪಕ್ಷ ಮಾದಿಗರ ಸ್ವಾಭಿಮಾನಕ್ಕೆ ಗೌರವ ನೀಡಿ ಅನಿಲ್‌ಕುಮಾರ್ ಅವರಿಗೆ ಟಿಕೆಟ್ ನೀಡಿದ್ದಾರೆ. ಮಾದಿಗರಲ್ಲಿ ಒಗ್ಗಟ್ಟು ಇಲ್ಲವವರಿಗೆ ಈ ಬಾರಿ ನಮ್ಮ ಒಗ್ಗಟ್ಟು ಪ್ರದರ್ಶನ ಮಾಡಬೇಕಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ತಿಳಿಸಿದರು.
ಕೊರಟಗೆರೆ : ರಾಜ್ಯದ ಮಾದಿಗ ಸಮುದಾಯ ಒಳಮೀಸಲಾತಿ ನೀಡಿದಂತ ಬಿಜೆಪಿ ಪಕ್ಷಕ್ಕೆ ನಮ್ಮ ಋುಣ ತಿರಿಸುವ ಸಮಯ ಬಂದಿದೆ. ಬಿಜೆಪಿ ಪಕ್ಷ ಮಾದಿಗರ ಸ್ವಾಭಿಮಾನಕ್ಕೆ ಗೌರವ ನೀಡಿ ಅನಿಲ್‌ಕುಮಾರ್ ಅವರಿಗೆ ಟಿಕೆಟ್ ನೀಡಿದ್ದಾರೆ. ಮಾದಿಗರಲ್ಲಿ ಒಗ್ಗಟ್ಟು ಇಲ್ಲವವರಿಗೆ ಈ ಬಾರಿ ನಮ್ಮ ಒಗ್ಗಟ್ಟು ಪ್ರದರ್ಶನ ಮಾಡಬೇಕಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ತಿಳಿಸಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಮಾದಿಗ ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2010ರಲ್ಲಿ ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಅಂಬೇಂಡ್ಕರ್ ಭವನ, ಬಾಬು ಜಗಜೀವನ್ ಭವನ, ವಾಲ್ಮೀಕಿ ಭವನಗಳನ್ನ ನಿರ್ಮಾಣ ಮಾಡಿದ್ದು ನಾನು. ರಾಜ್ಯದ ದಲಿತರು ಹಾಗೂ ಹಿಂದುಳಿದ ಮಕ್ಕಳ ಸ್ಕಾಲರ್ ಶೀಪ್‌ನ್ನು 200 ರಿಂದ 800 ಮಾಡಿದ್ದು ಇದೆ ನಾರಾಯಣ ಸ್ವಾಮಿನೇ, ಈ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇದ್ದಾಗ ಒಂದು ದಿನನೂ ಕೂಡ ಸ್ಕಾಲರ್ ಶೀಪ್ ಜಾಸ್ತಿ ಮಾಡಲಿಲ್ಲ ಅದನ್ನ ಮಾಡಿದ್ದು ಇದೆ ಬಿಜೆಪಿ ಸರ್ಕಾರ ಎಂದು ತಿಳಿಸಿದರು.
ನಾನು ಮಾದಿಗರ ಮನೆಯ ಮಗ, ನನ್ನ ಸಮಾಜದ ಬಗ್ಗೆ ಹೇಳಿಕೊಳ್ಳಲು ನನಗೇ ನಾಚಿಕೆಯಿಲ್ಲ. ಮಾದಿಗ ಅನ್ನೋದಿಕ್ಕೆ ನನಗೇ ಸ್ವಾಭಿಮಾನದ ಹೆಮ್ಮೆ ಇದೆ. ಕೊರಟಗೆರೆ ಕ್ಷೇತ್ರದಲ್ಲಿ 45 ಸಾವಿರ ಮಾದಿಗ ಸಮಾಜದ ಮತಗಳಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮಾದಿಗ ಸಮಾಜಕ್ಕೆ 70ವರ್ಷದಿಂದ ಮೋಸಮಾಡಿವೆ. ಮಾದಿಗ ಸಮಾಜಕ್ಕೆ ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ. ಬಿಜೆಪಿ ಅಭ್ಯರ್ಥಿ ಅನಿಲ್‌ಕುಮಾರ್ ಅವರ ಕಮಲದ ಗುರುತಿಗೆ ಮತಹಾಕಿ ನಮ್ಮ ಸಮಾಜದ ಗೌರವ ತರಬೇಕಿದೆ ಎಂದು ತಿಳಿಸಿದರು.
ಕೊರಟಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಚ್.ಅನಿಲ್‌ಕುಮಾರ್ ಮಾತನಾಡಿ, ಮೀಸಲು ಕ್ಷೇತ್ರದಲ್ಲಿ ಮಾದಿಗ ಸಮಾಜಕ್ಕೆ ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನ್ಯಾಯ ಆಗಿದೆ. ಕೊರಟಗೆರೆ ಕ್ಷೇತ್ರದ ಜನತೆ ಮಾದಿಗ ನಾಯಕನ ಭವಿಷ್ಯವನ್ನು ಮೇ.10ರಂದು ನಿರ್ಧಾರ ಮಾಡಬೇಕಿದೆ. ನಿಮ್ಮ ಮನೆಯ ಮಗನಾದ ನನಗೇ ಚುನಾವಣೆಯಲ್ಲಿ ಬೆಂಬಲ ನೀಡಿ ಕೊರಟಗೆರೆ ಕ್ಷೇತ್ರದಲ್ಲಿ ರಾಜಕೀಯ ಶಕ್ತಿಗೆ ಜೀವ ತುಂಬಬೇಕಿದೆ ಎಂದು ಮನವಿ ಮಾಡಿದರು.
ಸಭೆಯಲ್ಲಿ ಕೊರಟಗೆರೆ ಉಸ್ತುವಾರಿ ವಿಧುರಾವತ್ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ವೆಂಕಟೇಶ್ ದೊಡ್ಡೇರಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವಿಶ್ವನಾಥ್ ಅಪ್ಪಾಜಪ್ಪ, ಡಾ.ಲಕ್ಷ್ಮೇಕಾಂತ್, ತಾಲೂಕು ಅಧ್ಯಕ್ಷ ಪವನ್‌ಕುಮಾರ್, ಎಸ್.ಟಿ. ಮೋರ್ಚಾ ಅಧ್ಯಕ್ಷ ಗೋಪಿನಾಥ್, ಮುಖಂಡರಾದ ದಾಡಿ ವೆಂಕಟೇಶ್, ದಲಿತಆನಂದ್, ಗೋವಿಂದರಾಜು, ರವಿವರ್ಮ, ಪ್ರವೀಣ್, ಗಂಗಣ್ಣ ಸೇರಿದಂತೆ ಇತರರು ಇದ್ದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಶಾಶ್ವತ ನೀರಾವರಿ ಯೋಜನೆಗಳು ಇಲ್ಲ, ಒಂದು ಡಿಪೊ್ಲೕಮೋ ಶಾಲೆ ಇಲ್ಲ, ನಮ್ಮ ಕೇಂದ್ರ ಸರ್ಕಾರದಿಂದ ದೇಶದಲ್ಲಿ 11 ಸಾವಿರ ಕೋಟಿ ಮನೆ ನಿರ್ಮಾಣ, 10 ಕೋಟಿ ಕುಟುಂಬಗಳಿಗೆ ಉಚಿತ ಗ್ಯಾಸ್ ವಿತರಣೆ, 9 ಕೋಟಿ ಕುಟುಂಬಕ್ಕೆ ಶೌಚಾಲಯವನ್ನ ನಿರ್ಮಾಣ ಮಾಡಲಾಗಿದೆ, 25 ಲಕ್ಷ ಇದ್ದ ದಲಿತ ಸಮುದಾಯ 1 ಕೋಟಿ 20 ಲಕ್ಷ ಆಯ್ತು ಇವರಿಗೇಲ್ಲ ಮೀಸಲಾಯಿ ನೀಡಿದ್ದು ಇದೆ ಬಿಜೆಪಿ ಸರ್ಕಾರ.
- ಎ.ನಾರಾಯಣ ಸ್ವಾಮಿ, ಕೇಂದ್ರ ಸಚಿವ
ರಾಜ್ಯದ 12ಕ್ಷೇತ್ರದಲ್ಲಿ ಮಾದಿಗ ಸಮಾಜದ ಅಭ್ಯರ್ಥಿಗೆ ಬಿಜೆಪಿ ಪಕ್ಷವು ಟಿಕೇಟ್ ನೀಡಿದೆ. 40ವರ್ಷದ ಮಾದಿಗ ಸಮಾಜದ ಕನಸಾದ ಒಳಮೀಸಲಾತಿ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ. ಕೊರಟಗೆರೆ ಕ್ಷೇತ್ರದಲ್ಲಿನ 45ಸಾವಿರ ಮತದಾರರು ಬಿಜೆಪಿ ಪಕ್ಷಕ್ಕೆ ಮತ ನೀಡಿ ಅನಿಲ್‌ಕುಮಾರ್‌ಗೆ ರಾಜಕೀಯ ಶಕ್ತಿ ನೀಡಿದರೇ ದಲಿತ ಕಾಲೋನಿಗಳು ತಾನಾಗಿಯೇ ಅಭಿವೃದ್ಧಿಯ ಪಥದತ್ತಾ ಸಾಗಲಿವೆ.
- ವಿಧುರಾವತ್. ಬಿಜೆಪಿ ಉಸ್ತುವಾರಿ. ಕೊರಟಗೆರೆ ಕ್ಷೇತ್ರ.
ಕೊರಟಗೆರೆ ಕ್ಷೇತ್ರ ಅಭಿವೃದ್ದಿಗೆ ಬಿಜೆಪಿ ಪ್ರಣಾಳಿಕೆ..
1. ಜಯಮಂಗಲಿ ಮತ್ತು ಗರುಡಾಚಲ ನದಿಗಳಿಗೆ ಚೇಕ್‌ಡ್ಯಾಂ
2. ರೈತರಿಗಾಗಿ ಕೃಷಿಬೆಳೆ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆ
3. ರೈತರಿಗೆ ಬಹುರ್‌ಹುಕ್ಕುಂ ಕಮಿಟಿಯಿಂದ ಸಾಗುವಳಿ ಚೀಟಿ
4. ಕೊರಟಗೆರೆಯಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ
5. ಡಿಜಿಟಲ್ ಗ್ರಂಥಾಲಯ ಮತ್ತು ಪದವಿಪೂರ್ವ ಕಾಲೇಜು ಸ್ಥಾಪನೆ
6. ಸಿದ್ದರಬೆಟ್ಟ, ಸಿ.ಎನ್.ದುರ್ಗ ಮತ್ತು ಗೊರವನಹಳ್ಳಿ ಪ್ರವಾಸಿತಾಣದ ಅಭಿವೃದ್ಧಿ
7. ಸಂಪರ್ಕ ಸೇತುವೆ ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕ್ರಮ
8. ಕೊರಟಗೆರೆ ಪಟ್ಟಣದಲ್ಲಿ ಸರಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ
9. ಕೊರಟಗೆರೆ ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡುವ ಶಪಥ
10.ಡಿಪೊ್ಲೕಮೊ ಕಾಲೇಜು ಮತ್ತು ಉದ್ಯೋಗ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ