Kolar: ದೊಡ್ಡ ಮಾರುಕಟ್ಟೆಗೆ ಜಾಗವಿಲ್ಲ: ರೈತರ ಗೋಳು ಕೇಳೋರಿಲ್ಲ!
ಅದು ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಎಪಿಎಂಸಿ ಮಾರುಕಟ್ಟೆ ಎಂಬ ಹೆಗ್ಗಳಿಕೆ ಆ ಮಾರುಕಟ್ಟೆಗಿದೆ. ಸದ್ಯ ಎರಡನೇ ಸ್ಥಾನವನ್ನು ಬಿಟ್ಟು ಇನ್ನು ಎತ್ತರಕ್ಕೆ ಬೆಳೆದಿರುವ ಮಾರುಕಟ್ಟೆಗೆ ಸ್ಥಳಾವಕಾಶದ್ದೇ ತೊಂದರೆ.
ವರದಿ: ದೀಪಕ್, ಏಷಿಯಾನೆಟ್ ಸುವಣ೯ ನ್ಯೂಸ್, ಕೋಲಾರ
ಕೋಲಾರ (ಮಾ.28): ಅದು ಏಷ್ಯಾದಲ್ಲಿ (Asia) ಎರಡನೇ ಅತಿ ದೊಡ್ಡ ಎಪಿಎಂಸಿ ಮಾರುಕಟ್ಟೆ (APMC Market) ಎಂಬ ಹೆಗ್ಗಳಿಕೆ ಆ ಮಾರುಕಟ್ಟೆಗಿದೆ. ಸದ್ಯ ಎರಡನೇ ಸ್ಥಾನವನ್ನು ಬಿಟ್ಟು ಇನ್ನು ಎತ್ತರಕ್ಕೆ ಬೆಳೆದಿರುವ ಮಾರುಕಟ್ಟೆಗೆ ಸ್ಥಳಾವಕಾಶದ್ದೇ ತೊಂದರೆ, ಹಾಗಾಗಿ ಮಾರುಕಟ್ಟೆಗೆ ಜಾಗವಿಲ್ಲದೆ ರೈತರು (Farmers) ತಾವು ಬೆಳೆದ ಬೆಳೆಗಳನ್ನು ರಸ್ತೆಯಲ್ಲೇ (Road), ಸಿಕ್ಕ ಸಿಕ್ಕ ಕಡೆಗಳಲ್ಲಿ ಇಟ್ಟು ವಹಿವಾಟು ಮಾಡುವ ಸ್ಥಿತಿ ಬಂದೊದಗಿದೆ. ಯಾವುದು ಆ ಮಾರ್ಕೆಟ್ ಇಲ್ಲಿದೆ ವರದಿ.
ರಸ್ತೆಗಳಲ್ಲಿಯೇ ಟೊಮ್ಯಾಟೋಗಳನ್ನು ಕ್ರೇಟ್ಗಳಿಗೆ ತುಂಬಿಸುತ್ತಿರುವ ಕಾರ್ಮಿಕರು, ಓಡಾಡೋದಕ್ಕೂ ಜಾಗವಿಲ್ಲದೆ ರಸ್ತೆಯ ತುಂಬೆಲ್ಲ ಕಿಕ್ಕಿರಿದು ತುಂಬಿರುವ ಟೊಮ್ಯಾಟೋ ಬಾಕ್ಸ್ಗಳು, ಅಲ್ಲೇ ರಪ್ತು ಮಾಡಲು ವಾಹನಗಳಿಗೆ ತುಂಬಿಸುತ್ತಿರುವ ಕಾರ್ಮಿಕರು, ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದ ಎಪಿಎಂಸಿಯಲ್ಲಿ, ಹೌದು ಕೋಲಾರ (Kolar) ಎಪಿಎಂಸಿ ಮಾರುಕಟ್ಟೆಗೆ ತನ್ನದೇ ಆದ ಇತಿಹಾಸ ಇದೆ.ಇದಕ್ಕೆ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮ್ಯೋಟೋ ಮಾರುಕಟ್ಟೆ ಅನ್ನೋ ಖ್ಯಾತಿ ಕೂಡಾ ಈ ಮಾರುಕಟ್ಟೆಗಿದೆ. ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು 15,000 ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೋ ಮತ್ತು ತರಕಾರಿಗಳನ್ನ ಬೆಳೆಯಲಾಗುತ್ತದೆ.
Kolar: ಮಾಲೂರಿನ ಪುಟ್ಟ ಕಂದನ ದೊಡ್ಡ ಪ್ರತಿಭೆ: ಪೋರನಿಗೆ ಸಿಕ್ಕಿದೆ 'ಇಂಡಿಯಾ ಬುಕ್ ಆಫ್ ರೆಕಾರ್ಡ್' ಗರಿ
ಹಾಗಾಗಿನೆ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ದೇಶದ ಎಲ್ಲಾ ರಾಜ್ಯಗಳು ಸೇರಿದಂತೆ ಪಾಕಿಸ್ತಾನ, ಬಾಂಗ್ಲಾದೇಶಗಳಿಗೂ ಟೊಮೆಟೊ ರಫ್ತು ಮಾಡಲಾಗುತ್ತದೆ. ಏಷ್ಯಾದಲ್ಲಿ ಅತಿ ದೊಡ್ಡ ಟೊಮ್ಯಾಟೋ ಮಾರುಕಟ್ಟೆ ಕೋಲಾರದ ಎಪಿಎಂಸಿಯಲ್ಲಿದೆ. ಪ್ರತಿ ದಿನ 1500 ರಿಂದ 2000 ಟನ್ ನಷ್ಟು ಟೊಮ್ಯಾಟೊ ವಿವಿಧ ಜಿಲ್ಲೆಗಳಿಂದ ಬರುವುದರಿಂದ ದಿನೇ ದಿನೇ ಇಲ್ಲಿ ಸ್ಥಳಾವಕಾಶದ ಸಮಸ್ಯೆ ಉದ್ಬವವಾಗುತ್ತಿದೆ, ಇನ್ನ ಸ್ಥಳೀಯ ಎಪಿಎಂಸಿಯಲ್ಲಿ 18 ಎಕರೆ ಜಮೀನಿದ್ದು, ಬರುವಂತಹ ಟೊಮ್ಯಾಟೋ ತರಕಾರಿಗಳಿಗೆ ಸ್ಥಳವಕಾಶ ಸಾಕಾಗುತ್ತಿಲ್ಲ, ಕೋಲಾರ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುತ್ತಿರುವ ಟೊಮ್ಯಾಟೊ ಮತ್ತು ತರಕಾರಿಗಳಿಗೆ ಕನಿಷ್ಟ ನೂರು ಎಕರೆ ಜಮೀನು ಬೇಕಾಗಿದೆ ಅನ್ನೋದು ರೈತ ಮುಖಂಡರ ಆಗ್ರಹ.
ಕೋಲಾರ ಎಪಿಎಂಸಿ ಮಾರುಕಟ್ಟೆ 18 ಎಕರೆಯನ್ನು ಒಳಗೊಂಡಿದೆ. ಇಲ್ಲಿ ಸಾಕಷ್ಟು ಅಂಗಡಿಗಳು ತಲೆ ಎತ್ತಿದ್ದು, ಇದರಿಂದ ಸ್ಥಳಾವಕಾಶ ತೊಂದರೆಯನ್ನು ರೈತರು ಅನುಭವಿಸಬೇಕಾಗಿದ್ದು, ಇಲ್ಲಿರುವ ಟೊಮೆಟೊ ಮಾರುಕಟ್ಟೆಯನ್ನು ಪ್ರತ್ಯೇಕಿಸಿ ಬೇರೆ ಕಡೆ ಮಾರುಕಟ್ಟೆ ಮಾಡಲು ಈಗಾಗಲೇ ಮಂಗಸಂದ್ರ, ಚಲುವನಹಳ್ಳಿ, ನರಾಸಾಪುರ ಹಿಂಭಾಗದಲ್ಲಿ ಸುಮಾರು 30 ಎಕರೆಯನ್ನು ಗುರ್ತಿಸಲಾಗಿದೆ. ಆದರೆ ಅಧಿಕೃತವಾಗಿ ಭೂಮಿ ನೀಡಲು ಒಂದಲ್ಲ ಒಂದು ಸಮಸ್ಯೆ ಸರ್ಕಾರ ಮತ್ತು ಜಿಲ್ಲಾಡಳಿತ ಮುಂದೆ ಎದುರಾಗುತ್ತಿದೆ.ಇದರಿಂದ ಎಪಿಎಂಸಿ ಆಡಳಿತ ಮಂಡಳಿ ಜಿಜ್ಞಾಸೆ ಮೂಡಿಸಿದೆ.
Kolar: ಟೊಮೆಟೊ ಬೆಲೆ ಕುಸಿತ: ರೈತರ ಗೋಳು ಕೇಳೋರಿಲ್ಲ!
ದಿನೇ ದಿನೇ ಎಪಿಎಂಸಿಯಲ್ಲಿ ಜಾಗದ ಸಮಸ್ಯೆ ಎದುರಾಗುತ್ತಿರುವುದರಿಂದ ಜಿಲ್ಲಾಡಳಿತ ಸ್ಥಳವನ್ನು ಗುರ್ತಿಸಬೇಕು ಎಂದು ಆಡಳಿತ ಮಂಡಳಿ ಒತ್ತಾಯಿಸಿದೆ. ಇದರಿಂದ ಎಪಿಎಂಸಿಯಲ್ಲಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಇಟ್ಟು ಮಾರಾಟ ಮಾಡುತ್ತಿದೆ ಇದರಿಂದ ಟ್ರಾಪಿಕ್ ಸಮಸ್ಯೆ ಸೇರಿದಂತೆ ರೈತರ ತರಕಾರಿಗಳ ಗುಣಮಟ್ಟ ಕಾಪಾಡುವುದು ಸವಾಲಿನ ಕೆಲಸವಾಗಿದೆ. ಒಟ್ಟಾರೆ ಏಷ್ಯಾದಲ್ಲಿ 2ನೇ ದೊಡ್ಡ ಟೊಮ್ಯಾಟೋ ಮಾರುಕಟ್ಟೆ ಅನ್ನೋ ಖ್ಯಾತಿ ಪಡೆದಿರುವ ಕೋಲಾರ ಎಪಿಎಂಸಿ ಮಾರುಕಟ್ಟೆ ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುವಷ್ಟು ಬೆಳೆದಿದೆ ಆದರೆ ಅದಕ್ಕೆ ಬೇಕಾದ ಮೂಲ ಸೌಲಭ್ಯ ಒದಗಿಸದೆ, ಸರ್ಕಾರ ಹಾಗೂ ಜಿಲ್ಲಾಡಳಿತ ಮೀನಾ ಮೇಷ ಎಣಿಸುತ್ತಿರುವುದು ನಿಜಕ್ಕೂ ದುರಂತದ ವಿಚಾರ.