ಮುಂದಿನ ಬಾರಿಯು ಶಾಸಕನಾಗಿ ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ- ಕೆ. ಮಹದೇವ್‌

ಚೌಡೇಶ್ವರಿಯ ಕೃಪಾ ಕಟಾಕ್ಷದಿಂದ ಮುಂದಿನ ಬಾರಿಯೂ ತಾಲೂಕಿನ ಶಾಸಕನಾಗಿ ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಶಾಸಕ ಕೆ.ಮಹದೇವ್‌ ಹೇಳಿದರು.

There is no doubt that he will be elected as an MLA next time   K Mahadev snr

 ಬೈಲಕುಪ್ಪೆ :  ಚೌಡೇಶ್ವರಿಯ ಕೃಪಾ ಕಟಾಕ್ಷದಿಂದ ಮುಂದಿನ ಬಾರಿಯೂ ತಾಲೂಕಿನ ಶಾಸಕನಾಗಿ ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಶಾಸಕ ಕೆ.ಮಹದೇವ್‌ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನೂರು ಮತ್ತು ಕೊಪ್ಪ ಗ್ರಾಮದ ಗೆರಾಸಿಯ ಕಾಲೋನಿಯಿಂದ ಚೌಡಮ್ಮ ದೇವಸ್ಥಾನದವರೆಗೆ ಸುಮಾರು 1.14 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರದಲ್ಲಿರುವ ಸಚಿವರೊಂದರಿಗೆ ಉತ್ತಮ ಒಡನಾಟ ಹೊಂದಿಕೊಂಡು ತಾಲೂಕಿಗೆ ಬೇಕಾಗುವಂತಹ ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು, ತಾಲೂಕಿನ್ನೆಲ್ಲೆಡೆ ತಂದಂತಹ ಅನುದಾನವನ್ನು ಸರ್ವ ಜನಾಂಗಕ್ಕೂ ಅನುಕೂಲವಾಗುವಂತೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ, ಕಳೆದ ಎರಡು ವರ್ಷದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳು ಪ್ರತಿಯೊಬ್ಬರಿಗೂ ಇಷ್ಟವಾಗಿದೆ ಎಂಬ ನಂಬಿಕೆ ಮೇಲೆ ಮುಂಬರುವ ಚುನಾವಣೆಯಲ್ಲಿ 20 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕೊಪ್ಪ ಗ್ರಾಪಂ ಅಧ್ಯಕ್ಷ ರೇಣುಕಾ ಸ್ವಾಮಿ, ಪಿಡಿಒ ಬೋರೇಗೌಡ, ಕೊಪ್ಪ ಗ್ರಾಪಂ ಸದಸ್ಯರು, ಬೈಲಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್‌, ಜೆಡಿಎಸ್‌ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.

ರಾಜಕೀಯ ಲಾಭ ಪಡೆಯಲು ಮಹದೇವ್ ಹವಣಿಸುತ್ತಿದ್ದಾರೆ

 ಪಿರಿಯಾಪಟ್ಟಣ :  ಅಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸುವ ಮೂಲಕ ಚುನಾವಣೆಯ ಸಂದರ್ಭ ರಾಜಕೀಯ ಲಾಭ ಪಡೆದುಕೊಳ್ಳಲು ಶಾಸಕ ಕೆ. ಮಹದೇವ್‌ ಹವಣಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಪಟ್ಟಣ ಘಟಕ ಅಧ್ಯಕ್ಷ ಅಶೋಕ್‌ ಕುಮಾರ್‌ಗೌಡ ಆರೋಪಿಸಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೆ. ವೆಂಕಟೇಶ್‌ ಅವರು ಶಾಸಕರಾಗಿದ್ದ ವೇಳೆ ಪಟ್ಟಣಕ್ಕೆ . 63 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರಿಂದ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಶೇ.50 ರಷ್ಟುಕಾಮಗಾರಿ ಬಾಕಿ ಇದೆ. ಟ್ರೀಟ್ಮೆಂಟ್‌ ಪ್ಲಾಂಟ್‌ ಕಟ್ಟಡ ಪೂರ್ಣಗೊಂಡಿಲ್ಲ. ರಾಜಕೀಯ ಕಾರಣಕ್ಕಾಗಿ ಲೋಕಾರ್ಪಣೆಗೊಳಿಸಿರುವ ಶಾಸಕ ಕೆ. ಮಹದೇವ್‌ ಪಟ್ಟಣದ ಜನತೆಗೆ ಮೋಸ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಭವನ ನಿರ್ಮಿಸಲು ಅನುದಾನ ತಂದು ಉತ್ತಮ ವಿನ್ಯಾಸದೊಂದಿಗೆ ಕಟ್ಟಡ ನಿರ್ಮಾಣ ಪ್ರಾರಂಭಿಸಿದ ಕೆ. ವೆಂಕಟೇಶ್‌ ಪರಾಭವಗೊಂಡ ಬಳಿಕ ಭವನದ ಕಾಮಗಾರಿ ಮುಂದುವರಿಸಿರುವ ಶಾಸಕ ಕೆ.ಮಹದೇವ್‌ ಮೂಲ ವಿನ್ಯಾಸವನ್ನು ಬದಲಾಯಿಸಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಉದ್ಘಾಟನೆ ಮಾಡಿದ್ದಾರೆ ಎಂದು ದೂರಿದರು.

ಮುಖಂಡ ಬಿ.ಪಿ. ರಾಜೇಶ್‌ ಮಾತನಾಡಿ, ಪಟ್ಟಣದ ಕಾಯಂ ನಿವಾಸಿಯಾಗಿರುವ ಶಾಸಕ ಕೆ. ಮಹದೇವ್‌ ಪಟ್ಟಣಕ್ಕೆ ಯಾವುದೇ ಶಾಶ್ವತ ಯೋಜನೆ ತರದೆ ನಿರ್ಲಕ್ಷ ವಹಿಸಿದ್ದು ಬಡವರಿಗೆ ನಿವೇಶನ ಹಂಚುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಜಮೀನು ಗುರುತು ಕೂಡ ಮಾಡದೆ ಭೂಮಿ ಖರೀದಿಸದೆ ಒಂದೇ ಒಂದು ನಿವೇಶನವನ್ನು ಬಡವರಿಗೆ ಹಂಚಿಲ್ಲ. ಇದು ಅವರಿಗೆ ಬಡವರ ಪರ ಎಷ್ಟುಕಾಳಜಿ ಇದೆ ಎಂದು ತೋರಿಸುತ್ತದೆ ಎಂದು ಟೀಕಿಸಿದರು.

ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಾ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಉದ್ಘಾಟಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಆನಂದ್‌ ಮಾತನಾಡಿ, ಶಾಸಕ ಕೆ. ಮಹದೇವ್‌ ಮುಂಬರುವ ಚುನಾವಣೆ ಸೋಲಿನ ಭೀತಿಯಿಂದಾಗಿ ಅಧಿಕಾರ ಮತ್ತು ಆಡಳಿತ ದುರುಪಯೋಗ ಮಾಡಿಕೊಳ್ಳುತ್ತಿದ್ದು ತಾಲೂಕಿನ ಜನತೆ ಎಲ್ಲವನ್ನು ಮನಗಂಡಿದ್ದು ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ಖಜಾಂಚಿ ಬಿ.ಜೆ. ಬಸವರಾಜ…, ಪುರಸಭಾ ಸದಸ್ಯ ಶ್ಯಾಮ…, ಮುಖಂಡರಾದ ಗಿರೀಶ್‌, ಮಂಜು, ಕುಮಾರ್‌ ಮುರಳಿ, ಅಬ್ದುಲ್‌ ವಾಜಿದ್‌, ಗಿರೀಶ್‌ ಇದ್ದರು.

Latest Videos
Follow Us:
Download App:
  • android
  • ios