Asianet Suvarna News Asianet Suvarna News

ನಾಯಕನಹಟ್ಟಿಪುಣ್ಯಕ್ಷೇತ್ರಕ್ಕಿಲ್ಲ ಬಸ್‌ ನಿಲ್ದಾಣ!

  • ನಾಯಕನಹಟ್ಟಿಪುಣ್ಯಕ್ಷೇತ್ರಕ್ಕಿಲ್ಲ ಬಸ್‌ ನಿಲ್ದಾಣ!
  • ನಾಯಕನಹಟ್ಟಿತಿಪ್ಪೇಶನ ಸನ್ನಿಧಿ ಮರೆತು ಕೂತ್ರಾ ಸಚಿವ ಶ್ರೀರಾಮುಲು
  • ಮೊಳಕಾಲ್ಮೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ರು. 7 ಕೋಟಿ ಅನುದಾನ;
There is no bus stop at Nayakanahatti at chitradurga rav
Author
First Published Nov 9, 2022, 8:59 AM IST

ನಾಯಕನಹಟ್ಟಿ (ನ.9) : ಇತಿಹಾಸ ಪ್ರಸಿದ್ಧ ನಾಯಕನಹಟ್ಟಿತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಪ್ರವಾಸಿಗರಂತೆ ಬಂದು ಹೋಗುತ್ತಿರುವ ಸಚಿವ ಶ್ರೀರಾಮುಲು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಎಂಬ ಸಂಗತಿಯನ್ನೆ ಮರೆತಂತೆ ಕಾಣಿಸುತ್ತದೆ. ಪುಣ್ಯಕಾಶಿಗೆ ಬರುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಗತ್ಯವಾಗಿ ಬೇಕಿರುವ ಬಸ್‌ ನಿಲ್ದಾಣ ನಿರ್ಮಾಣ ಮಾಡುವ ಆಲೋಚನೆಯನ್ನೇ ದೂರಮಾಡಿದಂತಿದೆ.

Petrol, Diesel Price Today: ಚಿತ್ರದುರ್ಗದಲ್ಲಿ ಹೆಚ್ಚಾದ, ಶಿವಮೊಗ್ಗದಲ್ಲಿ ಇಳಿಕೆಯಾದ ಪೆಟ್ರೋಲ್‌, ಡೀಸೆಲ್‌ ಬೆಲೆ

ನಾಯಕನಹಟ್ಟಿಗೆ ಪುಣ್ಯಕ್ಷೇತ್ರಕ್ಕೆ ನಿತ್ಯ ನೂರಾರು ಭಕ್ತರ ಭೇಟಿ ಇದ್ದೇ ಇರುತ್ತದೆ. ಇಂತಹ ನೆಲೆವೀಡಲ್ಲಿ ಸರ್ಕಾರಿ ಬಸ್‌ ನಿಲ್ದಾಣ ನಿರ್ಮಿಸಲು ಎರಡು ದಶಕಗಳಿಂದ ಜನರ ಒತ್ತಾಯವಿದ್ದು, 2020ರಲ್ಲಿ ಇದಕ್ಕೆ ಹಸಿರು ನಿಶಾನೆ ಕೂಡ ದೊರಕಿತ್ತು. ಸ್ಥಳೀಯ ಪಟ್ಟಣ ಪಂಚಾಯ್ತಿ ಕೂಡ ಪಟ್ಟಣದಲ್ಲಿ ಹಳೆಯ ಆಸ್ಪತ್ರೆ ಸ್ಥಳ ಇರುವ ಎರಡು ಎಕರೆ ಜಾಗ ನೀಡುವುದಾಗಿ ಸರ್ವಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ಆದರೆ, ಇದುವರೆಗೂ ಬಸ್‌ ನಿಲ್ದಾಣ ನಿರ್ಮಾಣ ಯೋಜನೆಗೆ ಸ್ವತಃ ಸಾರಿಗೆ ಸಚಿವರೇ ಕಡಿವಾಣ ಹಾಕಿರುವ ಮಾಹಿತಿ ಬೆಳಕಿಗೆ ಬಂದಿದೆ! ಇಲ್ಲಿನ ಖಾಸಗಿ ಬಸ್‌ ಮಾಲೀಕರ ಒತ್ತಡಕ್ಕೆ ಸಚಿವ ಶ್ರೀರಾಮುಲು ಅವರು ಮಣೆಹಾಕಿದ್ದಾರೆ ಎನ್ನಲಾಗಿದೆ.

ಇಲ್ಲಿನ ಬಸ್‌ ನಿಲ್ದಾಣ ನಿರ್ಮಾಣ ಕೈತಪ್ಪಲು ಸಚಿವರ ಜೊತೆಗೆ ಪೊಲೀಸರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೈಜೋಡಿಸಿರುವ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಚಳ್ಳಕೆರೆ-ನಾಯಕನಹಟ್ಟಿ-ದಾವಣಗೆರೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಚಳ್ಳಕೆರೆ ವಿಭಾಗದಿಂದ 50 ಸಿಂಗಲ್‌ ಟ್ರಿಪ್‌ ಓಡಿಸಲು ಅನುಮತಿಗಾಗಿ 2019ರಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಅನುಮತಿಗಾಗಿ ಪತ್ರ ಬರೆದಿದ್ದರೂ, ಇದುವರೆಗೂ ಅನುಮತಿ ನೀಡಿಲ್ಲ. ನಾನಾ ಕಾರಣಗಳನ್ನು ನೀಡಿ ಅನುಮತಿ ನಿರಾಕರಿಸಿದೆ. ಆದರೆ, ಅನುಮತಿ ನಿರಾಕರಿಸಲು ಸ್ಪಷ್ಟಕಾರಣಗಳ ನೀಡಲಾಗಿಲ್ಲ.!

ಮೊಳಕಾಲ್ಮೂರು ಪಟ್ಟಣದಲ್ಲಿ 2020ರÜಲ್ಲಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸರ್ವೆ ನಡೆಸಲಾಗಿತ್ತು. ಇದೇ ಅವಧಿಯಲ್ಲೂ ನಾಯಕನಹಟ್ಟಿಯಲ್ಲಿ ಸರ್ವೆಕಾರ್ಯ ನಡೆದಿತ್ತು. ಜನರ ಹಿತಕಾಪಾಡಬೇಕಾದ ಹೊಣೆಯನ್ನು ಆಗಿನ ಪಟ್ಟಣ ಪಂಚಾಯ್ತಿ ಸ್ಥಳೀಯ ಆಡಳಿತ ಹಳೆಯ ಆಸ್ಪತ್ರೆ ಕಟ್ಟಡ, ಲೋಕೋಪಯೋಗಿ ಇಲಾಖೆ ವಸತಿ ಗೃಹಗಳು ಇರುವ ಸ್ಥಳವನ್ನು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಗುರುತಿಸಿತ್ತು. ಅಂತಿಮ ನಿರ್ಣಯ ಮಂಡಿಸಿತ್ತು. ಆದರೆ, ಇಂದು ಮೊಳಕಾಲ್ಮೂರಿನಲ್ಲಿ ಬಸ್‌ ನಿರ್ಮಾಣ ಯೋಜನೆಗೆ 7 ಕೋಟಿ ಅನುದಾನ ಟೆಂಡರ್‌ ಹಂತ ಕೂಡ ಮುಗಿದಿದೆ. ಆದರೆ, ನಾಯಕನಹಟ್ಟಿಯಲ್ಲಿ ಮಾತ್ರ ಸರ್ಕಾರಿ ಬಸ್‌ ನಿಲ್ದಾಣದ ಕಾರ್ಯ ಕುರುಹೂ ಸಹ ಕಾಣುತ್ತಿಲ್ಲ ಎಂಬುದಾಗಿ ಜನರು ಬೇಸರ ವ್ಯಕ್ತ ಪಡಿಸುತ್ತಾರೆ.

ಪ್ರೌಢ, ಪಿಯು, ಪದವಿ ಶಿಕ್ಷಣಕ್ಕಾಗಿ ಇಲ್ಲಿ ಒಂದೂ ಸರ್ಕಾರಿ ಶಾಲಾ-ಕಾಲೇಜುಗಳಿಲ್ಲ. ಎಲ್ಲವೂ ಖಾಸಗಿ ಒಡೆತನದ್ದೇ ದರ್ಬಾರು. ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮುಗಿಸಿ ಮಕ್ಕಳು ವೃತ್ತಿ ಶಿಕ್ಷಣಕ್ಕಾಗಿ ಜಗಳೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲಾಕೇಂದ್ರಗಳನ್ನು ಆಶ್ರಯಿಸಬೇಕಾಗಿದೆ. ಆದರೆ, ಜಿಲ್ಲಾ, ತಾಲೂಕು ಕೇಂದ್ರಗಳಿಗೆ ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕೆ ತೆರಳಲು ಸೂಕ್ತ ಕಾಲಕ್ಕೆ ಬಸ್‌ ಸೌಲಭ್ಯವಿಲ್ಲ. ಸ್ನಾತಕೋತ್ತರದಂತಹ ಉನ್ನತ ವ್ಯಾಸಂಗಕ್ಕೆ ಅಡ್ಡಿಯಾಗಿದೆ.

ಇದು ವಿದ್ಯಾರ್ಥಿಗಳ ಸಮಸ್ಯೆಯಾದರೆ, ಸರ್ಕಾರಿ ನೌಕರ, ಭಕ್ತರ ಸಮಸ್ಯೆ ಮತ್ತೊಂದು ತೆರನಾದದ್ದು, ಬಳ್ಳಾರಿ, ತುಮಕೂರು, ಶಿರಾ, ಜಗಳೂರು, ಕೂಡ್ಲಿಗಿ, ಆಂಧ್ರದ ರಾಯದುರ್ಗ, ಕಲ್ಯಾಣದುರ್ಗ, ಬೆಂಗಳೂರು ಕಡೆಗಳಿಂದ ಭಕ್ತರು ನಿತ್ಯ ಇಲ್ಲಿನ ಒಳ ಹಾಗೂ ಹೊರಮಠಕ್ಕೆ ಭೇಟಿ ನೀಡಿ ತಿಪ್ಪೇರುದ್ರಸ್ವಾಮಿಯ ದರ್ಶನ ಪಡೆಯುತ್ತಾರೆ. ಇವರು ಬರಬೇಕಾದರೆ ಖಾಸಗಿ ಬಸ್ಸುಗಳನ್ನೇ ಆಶ್ರಯಿಸಬೇಕು. ಅವುಗಳ ಬಗ್ಗೆ ಮಾಹಿತಿ ಎಲ್ಲಿಪಡೆಯಬೇಕು? ಎಂದು ಪರದಾಟ ನಡೆಸುತ್ತಾರೆ. ಪಟ್ಟಣ ಪಂಚಾಯಿತಿ ಎರಡು ಬಾರಿ ಜಾಗ ಗುರುತಿಸಿ ಸರ್ವಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಆದರೆ, ಕೆಎಸ್‌ಆರ್‌ಟಿಸಿಯೇ ಜಾಗಬೇಕು ಎಂದು ಮುಂದೆ ಬಂದಿಲ್ಲ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಹಾಂತೇಶ್‌ ಹೇಳುತ್ತಾರೆ.

ನಮಗೆ ಪಟ್ಟಣದಲ್ಲಿನ ಹಳೆಯ ಆಸ್ಪತ್ರೆ ಕಟ್ಟಡ ಜಾಗವೇ ಬೇಕು. ಆದರೆ, ಅದನ್ನು ಪಡೆಯಲು ಸ್ಥಳೀಯರು ಆಕ್ಷೇಪ ಎತ್ತಿದ್ದರಿಂದ ಸ್ಥಳ ಸಿಕ್ಕಿಲ್ಲ. ಊರಾಚೆ ಇರುವ ಸ್ಥಳದಲ್ಲಿ ಬಸ್‌ ನಿಲ್ದಾಣ ನಿರ್ಮಿಸುವಂತೆ ಒತ್ತಡ ಹಾಕುತ್ತಿದ್ದಾರೆ. ನಮಗೆ ಹಳೆಯ ಆಸ್ಪತ್ರೆ ಕಟ್ಟಡ ಇರುವ ಎರಡು ಎಕರೆ ಸ್ಥಳ ಸಿಕ್ಕರೆ ಬಸ್‌ ನಿಲ್ದಾಣ ಯೋಜನೆಗೆ ಕ್ರಿಯಾರೂಪ ನೀಡಬಹುದು ಎಂಬುದಾಗಿ ಕೆಎಸ್‌ಆರ್‌ಟಿಸಿ ಎಇಇ ನಾಗರಾಜ್‌ ಹೇಳುತ್ತಾರೆ.

ಚಿತ್ರದುರ್ಗ: ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ದ ಗೂಳಿಹಟ್ಟಿ ಶೇಖರ್ ಕಿಡಿ

ಸಾರಿಗೆ ಸಚಿವರಿಂದಲೇ ಮತಕ್ಷೇತ್ರದಲ್ಲಿನ ಪುಣ್ಯಕ್ಷೇತ್ರಕ್ಕೆ ಅನ್ಯಾಯವಾಗಿದೆ. ಇದನ್ನು ಜನರು ಗಮನಿಸಬೇಕು. ಮತನೀಡಿದವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಕೆಲ ಖಾಸಗಿ ಬಸ್‌ ಮಾಲೀಕರ ಹಿತಕಾಪಾಡಲು ಸಾವಿರಾರು ಜನರನ್ನು ಸೌಲಭ್ಯ ವಂಚಿತರನ್ನಾಗಿ ಮಾಡುವುದು ಎಷ್ಟುಸರಿ?

ಡಾ.ಬಿ.ಗಿರೀಶ್‌ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

 

Follow Us:
Download App:
  • android
  • ios