ಉಡುಪಿಯಲ್ಲಿ 40% ಕಮಿಷನ್ ವ್ಯವಹಾರ ಇಲ್ಲ, ದಯವಿಟ್ಟು ನಮ್ಮ ಹಳೆ ಬಾಕಿ ತಿಳಿಸಿ ಗುತ್ತಿಗೆದಾರರ ಅಳಲು
ರಾಜ್ಯ ಸರ್ಕಾರ 40% ಕಮಿಷನ್ ಕೇಳುತ್ತದೆ ಎಂದು ಆರೋಪ ಮಾಡಲಾಗಿದ್ದು, ಸಾರ್ವಜನಿಕರು 40% ಕಮಿಷನ್ ಕೊಟ್ಟರೆ ಕಾಮಗಾರಿ ಹೇಗೆ ಮಾಡುತ್ತೀರಿ ಎಂದು ಕೇಳುತ್ತಿದ್ದಾರೆ, ಆದರೆ ಉಡುಪಿ ಜಿಲ್ಲೆಯಲ್ಲಿ 40% ಕಮಿಷನ್ ಇಲ್ಲ. ಬಾಕಿ ಉಳಿದ ಪಾವತಿಯನ್ನು ಕೊಡಿ ಎಂದು ಗುತ್ತಿಗೆದಾರರು ಆಗ್ರಹಿಸಿದ್ದಾರೆ.
ಉಡುಪಿ (ಸೆ.26): ಉಡುಪಿ ಜಿಲ್ಲೆಯ ಯಾವುದೇ ಜನಪ್ರತಿನಿಧಿಗಳು ಕಳೆದ 25 ವರ್ಷಗಳಿಂದ ಕಮಿಷನ್ ಹಣ ಕೇಳಿಲ್ಲ ಎಂದು ಜಿಲ್ಲೆಯ ಹಿರಿಯ ಗುತ್ತಿಗೆದಾರ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ಹೇಳಿದರು. ಅವರು ಸೋಮವಾರ ಉಡುಪಿಯ ಓಶಿಯನ್ ಪರ್ಲ್ ಹೋಟೆಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ 40% ಕಮಿಷನ್ ಕೇಳುತ್ತದೆ ಎಂದು ಆರೋಪ ಮಾಡಲಾಗಿದ್ದು, ಸಾರ್ವಜನಿಕರು 40% ಕಮಿಷನ್ ಕೊಟ್ಟರೆ ಕಾಮಗಾರಿ ಹೇಗೆ ಮಾಡುತ್ತೀರಿ ಎಂದು ಕೇಳುತ್ತಿದ್ದಾರೆ, ಆದರೆ ಉಡುಪಿ ಜಿಲ್ಲೆಯಲ್ಲಿ 40% ಕಮಿಷನ್ ಇಲ್ಲ ಎಂದು ಸ್ಪಷ್ಟೀಕರಣ ನೀಡಿದರು. ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ವಿದ್ಯಮಾನಗಳಿಂದ ನಮಗೆ ತುಂಬಾ ತೊಂದರೆಯಾಗಿದೆ. ಕಮಿಷನ್ ದಂಧೆಯಲ್ಲಿ ಗುತ್ತಿಗೆದಾರರು ಭಾಗಿಗಳು ಅನ್ನುವ ತಪ್ಪು ಅಭಿಪ್ರಾಯ ಬರುತ್ತದೆ, ಪಾರದರ್ಶಕ ಟೆಂಡರ್ ಮೂಲಕ ನಾವು ಉತ್ತಮ ಕೆಲಸ ಮಾಡುತ್ತಾ ಬಂದಿದ್ದೇವೆ. ಯಾರೂ ಕೂಡಾ ನಮಗೆ ಕಮಿಷನ್ ಗಾಗಿ ಪೀಡನೆ ಮಾಡಿಲ್ಲ ಎಂದರು. ಕಮಿಷನ್ ಆರೋಪದಿಂದ ಜನರನ್ನು ಪೇಸ್ ಮಾಡಲು ಕಷ್ಡ ಆಗುತ್ತಿದೆ. ಜನರು ನಮ್ಮನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ, ನಾವು ನಡೆಸಿದ ಕಾಮಗಾರಿಗಳ ಬಗ್ಗೆ ಜನ ಸಂಶಯ ಪಡುವಂತಾಗಿದೆ.
ಸಣ್ಣ ಗುತ್ತಿಗೆದಾರರ ಪಾವತಿಯನ್ನು ರಾಜ್ಯ ಸರ್ಕಾರ ಬಾಕಿ ಇಟ್ಟಿದೆ. ನಡೆಸಿದ ಕಾಮಗಾರಿಗಳ ಹಣ ಪಾವತಿಯಾಗದೆ ಗುತ್ತಿಗೆದಾರರಿಗೆ ಸಮಸ್ಯೆಯಾಗಿದೆ, ಸಣ್ಣ ಗುತ್ತಿಗೆದಾರರಿಗೆ ತುಂಬಾ ಸಮಸ್ಯೆ ಆಗಿದೆ ಎಂದರು
ಕಮಿಷನ್ ಆರೋಪ ಮಾಡಿದವರ ಬಗ್ಗೆ ನಾವು ಏನು ಹೇಳಲ್ಲ, ನಮ್ಮ ಜಿಲ್ಲೆಯ ವಿಚಾರ ನಾವು ಹೇಳಲೇಬೇಕಾಗಿದೆ. ಜಿಲ್ಲೆಯ ಅಭಿವೃದ್ದಿ ಆಗಬೇಕು ಅನ್ನುವುದು ನಮ್ಮ ಉದ್ದೇಶ.ಸರಕಾರ ಮತ್ತು ಗುತ್ತಿಗೆದಾರರ ತಿಕ್ಕಾಟದಿಂದ ಅಭಿವೃದ್ದಿ ಆಗಲ್ಲ. ಹೊಸ ಗುತ್ತಿಗೆದಾರರು ಪೆಮೆಂಟ್ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ತಿಕ್ಜಾಟದಿಂದ ಲೇ ಪೇಮೆಂಟ್ ಸಮಸ್ಯೆ ಆಗಿದೆ ಅನಿಸುತ್ತದೆ ಎಂದರು.
ಉಡುಪಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 100 ಕೋಟಿ ಪಾವತಿ ಬಾಕಿ ಇದ್ದು, ನೀರಾವರಿ ಇಲಾಖೆಯಿಂದ 150 ಕೋಟಿ ರೂಪಾಯಿ ಬಾಕಿ ಇದೆ. ರಾಜ್ಯಾದ್ಯಂತ ಪೇಮೆಂಟ್ ತಡೆಯಾಗಿದೆ. ಈ ತಿಕ್ಕಾಟದಿಂದ ಪೇಮೆಂಟ್ ಸ್ಥಗಿತವಾಗಿದೆ ಅನಿಸುತ್ತದೆ, ಯಾವ ಕಾರಣಕ್ಕೆ ಪೇಮಂಟ್ ಆಗ್ತಾ ಇಲ್ಲ ಎಂಬುದು ತಿಳಿದಿಲ್ಲ ಎಂದರು.
ಬಿಜೆಪಿ V/S ಕಾಂಗ್ರೆಸ್ QR ಕೋಡ್: ಬೆಂಗಳೂರು ತುಂಬಾ 40% ಕಮಿಷನ್ PayCM ಪೋಸ್ಟರ್!
ಗುತ್ತಿಗೆದಾರನಿಗೆ ಕಮಿಷನರ್ ಕ್ಲಾಸ್
ಹುಬ್ಬಳ್ಳಿ : ರಾಷ್ಟ್ರಪತಿ ಪೌರಸನ್ಮಾನ ಕಾರ್ಯಕ್ರಮದ ಸಿದ್ಧತೆ ಕುರಿತಂತೆ ಕೆಲವೊಂದಿಷ್ಟುಲೋಪ ಎಸಗಿದ ಗುತ್ತಿಗೆದಾರನಿಗೆ ಪೊಲೀಸ್ ಕಮಿಷನರ್ ಲಾಬೂರಾಮ್ ತರಾಟೆಗೆ ತೆಗೆದುಕೊಂಡರು.
ರಾಷ್ಟ್ರಪತಿ ಕಾರ್ಯಕ್ರಮದ ಸಿದ್ಧತೆಯ ಪರಿಶೀಲನೆ ನಡೆಸಿದ ಅವರು, ವೇದಿಕೆಯಿಂದ ಗಣ್ಯರು ಹಾಗೂ ಸಾರ್ವಜನಿಕರ ಗ್ಯಾಲರಿಗೆ ಅಳತೆ ಹೇಳಿದ್ದೊಂದು ಮಾಡಿದ್ದೊಂದು ಆಗಿತ್ತು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ 45 ಮೀಟರ್ ಬಿಡುವಂತೆ ಸೂಚಿಸಿತ್ತು. ಆದರೆ ಗುತ್ತಿಗೆದಾರ 55 ಮೀಟರ್ ಜಾಗ ಬಿಟ್ಟಿದ್ದರು. ಪೊಲೀಸ್ ಆಯುಕ್ತ ಲಾಬೂರಾಮ್ ಖುದ್ದಾಗಿ ಅಳತೆ ಮಾಡಿಸಿದರು. ಈ ವೇಳೆ ಜಾಸ್ತಿ ಬಿಟ್ಟಿರುವುದು ಗೊತ್ತಾಯಿತು.
ಕಮಿಷನ್ ಆರೋಪ: ಕ್ಷಮೆ ಕೇಳದ ಕೆಂಪಣ್ಣ ಸೇರಿ 18 ಮಂದಿ ಮೇಲೆ ಮುನಿರತ್ನ ಕೇಸ್!
ಬಳಿಕ ರಾಷ್ಟ್ರಪತಿ ಮಾತನಾಡುವ ಪೋಡಿಯ್‌ಂ ಸೈಜ್ ಕೂಡ ಹೆಚ್ಚಿಗೆ ಇತ್ತು. 5 ಸೆಂಮೀ ಜಾಸ್ತಿ ಇತ್ತು. ಹೀಗೆ ಬೇರೆ ಬೇರೆ ತಯಾರಿಯಲ್ಲೂ ಅಲ್ಪಸ್ವಲ್ಪ ಲೋಪಗಳಾಗಿದ್ದವು. ಇದಕ್ಕೆ ಪೊಲೀಸ್ ಆಯುಕ್ತ ಲಾಬೂರಾಮ್ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು ಸರಿಪಡಿಸುವಂತೆ ಸೂಚಿಸಿದರು.
ರಿಹರ್ಸಲ್‌ಗೆ ಅಡ್ಡಿ: ಈ ನಡುವೆ ಪೆಂಡಾಲ್ ಕೆಲಸ ಮಾಡುತ್ತಿದ್ದ ಗುತ್ತಿಗೆದಾರ, ರಿಹರ್ಸಲ್ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಗೂ ಆಗಾಗ ಅಡ್ಡಿಪಡಿಸುತ್ತಿದ್ದರು. ವೇದಿಕೆ ಬಳಿ ಹಾಗೂ ಮೇಲೆ ಬರಬೇಡಿ ಹಾಳಾಗುತ್ತದೆ. ಆಚೆ ನಡೆಯಿರಿ. ಹಾಳಾದರೆ ಮತ್ತೆ ಮಾಡಬೇಕಾಗುತ್ತದೆ ಎಂದು ಹೊರಗೆ ಕಳುಹಿಸುವ ಪ್ರಯತ್ನ ಮಾಡಿದ್ದುಂಟು. ಇದಕ್ಕೆ ಪೊಲೀಸ್ ಸಿಬ್ಬಂದಿ ಕೂಡ ಅಸಮಾಧಾನ ವ್ಯಕ್ತಪಡಿಸಿದರು.