Asianet Suvarna News Asianet Suvarna News

Kalaburagi: ಘತ್ತರಗಿ ದೇವಸ್ಥಾನದಲ್ಲಿ ಕಳ್ಳತನ: ಹುಂಡಿಯ ನಾಣ್ಯ ರಸ್ತೆಯಲ್ಲಿ ಸುರಿದು ಚಿನ್ನ ಹೊತ್ತೊಯ್ದರು

ಕಲಬುರಗಿ ಜಿಲ್ಲೆಯ ಐತಿಹಾಸಿಕ ಘತ್ತರಗಿ ಭಾಗ್ಯವಂತಿ ದೇವಸ್ಥಾನದಲ್ಲಿ ಕಳ್ಳತನ ಮಾಡಲಾಗಿದ್ದು, ದೇವರ ವಿಗ್ರಹದ ಮೇಲಿದ್ದ 250 ಗ್ರಾಂ ಚಿನ್ನದ ಒಡವೆಗಳು, ಹುಂಡಿಯ ಹಣವನ್ನು ಹೊತ್ತೊಯ್ಯಲಾಗಿದೆ. 

Theft in Ghattaragi Temple Gold was taken away by pouring it on Coin Road in Hundi sat
Author
First Published Dec 29, 2022, 2:30 PM IST

ಕಲಬುರಗಿ (ಡಿ.29):   ಕಲಬುರಗಿ ಜಿಲ್ಲೆಯ ಐತಿಹಾಸಿಕ ಘತ್ತರಗಿ ಭಾಗ್ಯವಂತಿ ದೇವಸ್ಥಾನದಲ್ಲಿ ಕಳ್ಳತನ ಮಾಡಲಾಗಿದ್ದು, ದೇವರ ವಿಗ್ರಹದ ಮೇಲಿದ್ದ 250 ಗ್ರಾಂ ಚಿನ್ನದ ಒಡವೆಗಳು, ಹುಂಡಿಯ ಹಣವನ್ನು ಹೊತ್ತೊಯ್ಯಲಾಗಿದೆ. 

ಐತಿಹಾಸಿಕ ಭಾಗ್ಯವಂತಿ ದೇವಸ್ಥಾನವು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗರಗಿ ಗ್ರಾಮದಲ್ಲಿದೆ. ಭಾಗ್ಯವಂತಿ ದೇವಸ್ಥಾನದಲ್ಲಿನ ಗರ್ಭಗುಡಿಯಲ್ಲಿನ ದೇವತೆಯ ಮೇಲಿನ ಚಿನ್ನಾಭರಣ ಕಳ್ಳತನವಾಗಿದೆ. ಒಟ್ಟು 250 ಗ್ರಾಂ ಗಿಂತ ಹೆಚ್ಚಿನ ಚಿನ್ನದ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಅಲ್ಲದೇ ಹುಂಡಿ ಒಡೆದು ಲಕ್ಷಾಂತರ ರೂಪಾಯಿ ಲಪಟಾಯಿಸಿಕೊಂಡು ಪರಾರಿ ಆಗಿರುವುದು ಪತ್ತೆಯಾಗಿದೆ. ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 

Kalaburagi: ನೆಟೆರೋಗದಿಂದ ತೊಗರಿ ಬೆಳೆ ಹಾನಿ: 500 ಕೋಟಿ ರೂ. ಪ್ಯಾಕೇಜ್ ಘೋಷಣೆಗೆ ಪ್ರಿಯಾಂಕ್ ಖರ್ಗೆ ಆಗ್ರಹ

ಮಂಕಿ ಕ್ಯಾಪ್‌ ಧರಿಸಿ ಕಳ್ಳತನ: ಮೂವರು ಮಂಕಿಕ್ಯಾಪ್ ಧರಿಸಿ ಬಂದ ಆಗಂತುಕರಿಂದ ಕೃತ್ಯ ನಡೆಸಲಾಗಿದೆ. ಹುಂಡಿಯಲ್ಲಿನ ನಾಣ್ಯಗಳನ್ನು ಹೊತ್ತೊಯ್ಯಲಾಗದೇ ದಾರಿಯಲ್ಲಿಯೇ ಎಸೆದು ಪರಾರಿ ಆಗಿದ್ದಾರೆ. ದೇವಸ್ಥಾನದ ಹಿಂಬದಿಯಲ್ಲಿ ಸಾವಿರಾರು ರೂ. ಮೌಲ್ಯದ ನಾಣ್ಯಗಳು ಪತ್ತೆಯಾಗಿವೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರು ಯಾರೋ ನೋಡಿಕೊಂಡೇ ದೇವಸ್ಥಾನಕ್ಕೆ ಕನ್ನ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರಿಂದ ತೀವ್ರ ಶೋಧ ಕಾರ್ಯಾರಣೆ ಮಾಡಲಾಗುತ್ತಿದೆ.

Follow Us:
Download App:
  • android
  • ios