ಕಾಂಗ್ರೆಸ್ ಭರವಸೆ ಕೂಡಲೇ ಜಾರಿಗೊಳಿಸಲಾಗುವುದು
ಸರ್ವರ ಶಾಂತಿಯ ತೋಟ ಘೋಷ ವಾಕ್ಯದಡಿ ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಚುನಾವಣೆ ಭರವಸೆಯನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸುವುದಾಗಿ ಕಾಗ್ರೆಸ್ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಹಾಗೂ ಕೆಪಿಸಿಸಿ ವಕ್ತಾರ ರಾಧಾಕೃಷ್ಣ ತಿಳಿಸಿದರು.
ಮೈಸೂರು : ಸರ್ವರ ಶಾಂತಿಯ ತೋಟ ಘೋಷ ವಾಕ್ಯದಡಿ ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಚುನಾವಣೆ ಭರವಸೆಯನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸುವುದಾಗಿ ಕಾಗ್ರೆಸ್ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಹಾಗೂ ಕೆಪಿಸಿಸಿ ವಕ್ತಾರ ರಾಧಾಕೃಷ್ಣ ತಿಳಿಸಿದರು.
ಇದು ಕೇವಲ ಪ್ರಣಾಳಿಕೆಯಲ್ಲ. ಕಾಂಗ್ರೆಸ್ ಪಕ್ಷದ ಸಂಕಲ್ಪ. ಈಗಾಗಲೇ ನೀಡಿರುವ ಉಚಿತ 200 ಯೂನಿಟ್ ವಿದ್ಯುತ್, 10 ಕೆ.ಜಿ ಅಕ್ಕಿ, ಮನೆ ಯಜಮಾನಿಗೆ . 2000 ಸಹಾಯ ಧನ, ನಿರುದ್ಯೋಗಿ ಪದವೀಧರಿಗೆ 3000 ನಿರುದ್ಯೋಗಿ ಭತ್ಯೆ ಮೊದಲಾದವನ್ನು ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಜಾರಿಗೊಳಿಸುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿ ಸಮುದಾಯಗಳ ಕಷ್ಟಕಾರ್ಪಣ್ಯವನ್ನು ಗಮನದಲ್ಲಿಟ್ಟುಕೊಂಡು ಈ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ರಾಜ್ಯದ ಸರ್ಕಾರಿ ನೌಕರರ ಸ್ಥಿತಿ ಡೋಲಾಯಮಾನವಾಗಿದ್ದು, ಅವರಿಗೆ ಜೀವನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲಾಗುವುದು. ಅಧಿಕಾರಕ್ಕೆ ಬಂದ ಕೂಡಲೇ ರೈತ ವಿರೋಧಿ ಕಾಯ್ದೆ ಹಿಂದಕ್ಕೆ ಪಡೆಯಲಾಗುವುದು. ಬಿಜೆಪಿ ಸರ್ಕಾರ ನಂದಿನಿ ಹಾಲಿನ ಕೆಚ್ಚಲಿಗೆ ಕೈ ಹಾಕುತ್ತಿರುವುದು ಸರಿಯಲ್ಲ. ರೈತರನ್ನು ರಕ್ಷಿಸುವ ಉದ್ದೇಶದಿಂದ ಹಾಲಿನ ಪ್ರೋತ್ಸಾಹ ಧÜನ ಹೆಚ್ಚಿಸುವುದಾಗಿ ಅವರು ತಿಳಿಸಿದರು.
ಹಳೆ ಮೈಸೂರು ಭಾಗದ ಸಮಗ್ರ ಅಭಿವೃದ್ಧಿಗೆ . 5000 ಕೋಟಿ ಅನುದಾನ ಮೀಸಲಿಡುವುದು, ಮೈಸೂರಿನಲ್ಲಿ ಡಾ. ರಾಜ್ ಕುಮಾರ್ ಹೆಸರಲಿನಲ್ಲಿ ಅತ್ಯಾಧುನಿಕ ಫಿಲ್ಮ್ ಸಿಟಿ ಸ್ಥಾಪನೆ ಗುರಿ ಇದೆ ಎಂದರು.
ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಕರ್ನಾಟಕ ಹಾಗೂ ದೇಶದ ಹಿತದೃಷ್ಟಿಯಿಂದ ಮೇ 10ರಂದು ನಡೆಯುವ ಚುನಾವಣೆ ಬಹಳ ಮುಖ್ಯ. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರ ನೀಡಿದ್ದ ಜನಪರ ಯೋಜನೆ ಹಾಗೂ ಈಗ ನೀಡಿರುವ ಗ್ಯಾರಂಟಿ ಭರವಸೆ ಈಡೇರಿಸಲು ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಪಕ್ಷದ ಪ್ರಣಾಳಿಕೆ ಸತ್ಯಕ್ಕೆ ದೂರವಾದದ್ದು. ಕಳೆದ ಬಾರಿ ನೀಡಿದ್ದ ಭರವಸೆಗಳನ್ನೆ ಈಡೇರಿಸದೆ ಧರ್ಮದ ಹೆಸರಿನನಲ್ಲಿ ಸಾಕಷ್ಟುಸಮಸ್ಯೆ ಸೃಷ್ಟಿಮಾಡಿದರು ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಹಾಗೂ ಸಮಾಜದಲ್ಲಿ ಕೋಮು ಸೌಹಾರ್ದ ಕದಡುವ ಯಾವುದೇ ಸಂಘಟನೆಯ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆಯೇ ಹೊರತು ಕೇವಲ ಬಜರಂಗ ದಳವನ್ನು ಮಾತ್ರ ನಿಷೇಧಿಸುವುದಾಗಿ ಎಲ್ಲಿಯೂ ಹೇಳಿಲ್ಲ ಎಂದರು.
ಕಾಂಗ್ರೆಸ್ ಭರವಸೆ ಈಡೇರಿಸಿಲ್ಲ
ಆಳಂದ (ಏ.27): ಕಾಂಗ್ರೆಸ್ ತನ್ನ ಆಳ್ವಿಕೆ ಇರುವ ರಾಜ್ಯಗಳಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಪಾದಿಸಿದ್ದಾರೆ. ಪಟ್ಟಣದ ಎ.ವಿ. ಪಾಟೀಲ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ಅಭ್ಯರ್ಥಿ ಸುಭಾಷ ಗುತ್ತೇದಾರ ಪರ ಚುನಾವಣೆ ಪ್ರಚಾರದ ಬೃಹತ್ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ. ಪ್ರಸ್ತುತ ಬಜೆಟ್‌ನಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಅವುಗಳಿಗೆ ಸಹಾಯಧನ ನೀಡಿ ಅವು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆಕಲ್ಪಿಸುವ ಭರವಸೆ ನೀಡಿದೆ ಎಂದರು.