ಉಪ್ಪಿನಂಗಡಿ: ಇಬ್ಬರ ಬಲಿ ಪಡೆದ ಗಂಡು ಕಾಡಾನೆ ಕೊನೆಗೂ ಸೆರೆ
ಕಡಬ ಸಮೀಪ ಇತ್ತೀಚೆಗೆ ಯುವತಿ ಹಾಗೂ ಆಕೆಯನ್ನು ರಕ್ಷಿಸಲು ಬಂದ ವ್ಯಕ್ತಿಯೂ ಸೇರಿದಂತೆ ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಇಲಾಖೆಯ ಕಾರ್ಯಾಚರಣೆ ತಂಡ ಗುರುವಾರ ಸಂಜೆ ಯಶಸ್ಸು ಕಂಡಿದೆ.
ಉಪ್ಪಿನಂಗಡಿ (ಫೆ.24) : ಕಡಬ ಸಮೀಪ ಇತ್ತೀಚೆಗೆ ಯುವತಿ ಹಾಗೂ ಆಕೆಯನ್ನು ರಕ್ಷಿಸಲು ಬಂದ ವ್ಯಕ್ತಿಯೂ ಸೇರಿದಂತೆ ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಇಲಾಖೆಯ ಕಾರ್ಯಾಚರಣೆ ತಂಡ ಗುರುವಾರ ಸಂಜೆ ಯಶಸ್ಸು ಕಂಡಿದೆ.
ಕಡಬ(Kadaba taluku) ತಾಲೂಕಿನ ಕೊಂಬಾರು ಭಾಗದಲ್ಲಿ ನಾಲ್ಕು ಕಾಡಾನೆಗಳು(wild elephants) ಇರುವ ಬಗ್ಗೆ ಸ್ಥಳೀಯರು ತಿಳಿಸಿದ್ದರು. ಅದರಂತೆ ಕಾರ್ಯಾಚರಣೆ ತಂಡ ಬೆಳಗ್ಗೆಯಿಂದಲೇ ಸುಂಕದಕಟ್ಟೆಬಳಿಯ ಕೊಂಬಾರು ಗ್ರಾಮದ ಮಂಡೆಕರ ಅರಣ್ಯ ಪ್ರದೇಶದಲ್ಲಿ ಪತ್ತೆ ಕಾರ್ಯಚರಣೆ ನಡೆಸಿತ್ತು.
ಮೂಡಿಗೆರೆಯ ತಳವಾರದಲ್ಲಿ ಪುಂಡಾನೆ ಸೆರೆ, ಇನ್ನೊಂದು ಪರಾರಿ
ಈ ವೇಳೆ ಒಂದು ಕಾಡಾನೆಯನ್ನು ಪತ್ತೆ ಹಚ್ಚಿದ ತಂಡ ಅದರ ಮೇಲೆ ನಿಗಾ ವಹಿಸಿದೆ. ಬಳಿಕ ವ್ಯವಸ್ಥಿತವಾಗಿ ಕಾರ್ಯತಂತ್ರ ರೂಪಿಸಲಾಯಿತು. ಸಂಜೆ 4.30ರ ವೇಳೆಗೆ ಯಶಸ್ವಿಯಾಗಿ ಕೋವಿ ಮೂಲಕ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು. ಸ್ವಲ್ಪ ಸಮಯದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಕಾಡಾನೆಯ ಕಾಲಿಗೆ, ಕುತ್ತಿಗೆ ಸೆಣಬಿನ ಹಗ್ಗದಿಂದ ಕಟ್ಟಲಾಯಿತು. ಪ್ರಜ್ಞೆ ಬಂದ ಬಳಿಕ ಕಾಡಾನೆ ಎದ್ದು ನಿಂತಿದೆ. ಬಳಿಕ ಶಿಬಿರದ ಐದು ಸಾಕಾನೆಗಳ ಸಹಕಾರದಲ್ಲಿ ಕಾಡಾನೆಯನ್ನು ಪಳಗಿಸಿ ಲಾರಿಯಲ್ಲಿಗೆ ತಂದು ಲಾರಿಗೇರಿಸಿ , ರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿಯ ಆನೆ ಶಿಬಿರಕ್ಕೆ ತರಲಾಗಿದೆ.
ಶುಕ್ರವಾರ ಸಂಜೆ ವರೆಗೆ ಬಂಧಿತ ಕಾಡಾನೆ ಮೇಲೆ ನಿಗಾ ಇರಿಸಿ ಬಳಿಕ ಬಂಧಿತ ಕಾಡಾನೆಯನ್ನು ಆನೆಗಳ ಮೀಸಲು ಅರಣ್ಯಕ್ಕೆ ಸಾಗಿಸಲಾಗುತ್ತದೆ. ಬಳಿಕ ಉಳಿದ ಕಾಡಾನೆಗಳ ಸೆರೆ ಕಾರ್ಯಾಚರಣೆ ಮುಂದುವರಿಲಿದೆ.
ಇದು ನರ ಹಂತಕ ಆನೆ: ಕಾಡಿನಲ್ಲಿ ಒಟ್ಟು ನಾಲ್ಕು ಕಾಡಾನೆಗಳು ಕಂಡು ಬಂದಿದೆ ಎಂಬ ಮಾಹಿತಿಯಿಂದ ಗುರುವಾರ ಸೆರೆ ಹಿಡಿಲಾದ ಕಾಡಾನೆ ನಿಜವಾದ ಕಾಡಾನೆಯೇ ಎಂಬ ಬಗ್ಗೆ ಸಂದೇಹ ಸಹಜವಾಗಿ ಮೂಡಿತ್ತಾದರೂ ಆನೆಯ ದೇಹವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇದು ಸೋಮವಾರ ಇಬ್ಬರನ್ನು ಬಲಿ ಪಡೆದ ಕಾಡಾನೆಯೇ ಎಂಬುದು ಸ್ಪಷ್ಟವಾಗಿದೆ. ಸೆರೆ ಹಿಡಿಯಲಟ್ಟಆನೆಯು ಗಂಡಾನೆ ಆಗಿದ್ದು, ಅಂದಾಜು 40 ವರ್ಷ ಪ್ರಾಯ ಆಗಿರಬಹುದಾಗಿದೆ. ಕಾಡಾನೆಯ ಕಾಲು ಹಾಗೂ ದಂತದಲ್ಲಿ ಮಾನವ ರಕ್ತದ ಕಳೆ ಪತ್ತೆಯಾಗಿದೆ ಎನ್ನಲಾಗಿದ್ದು ಇದರಿಂದ ಮೊನ್ನೆ ಇಬ್ಬರನ್ನು ಬಲಿ ಪಡೆದ ಆನೆ ಇದೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಾಗರಿಕರ ಸಂಚಾರಕ್ಕೆ ನಿರ್ಬಂಧ:
ಕಳೆದ ಎರಡು ದಿನಗಳಿಂದ ಕಾಡಾನೆ ಶೋಧ ಕಾರ್ಯಾಚರಣೆ ನಡೆದಿದ್ದರೂ ಯಶಸ್ಸು ದೊರಕಿರಲಿಲ್ಲ. ಇದಕ್ಕೆ, ಕಾರ್ಯಾಚರಣೆ ನೋಡಲು ಜನ ಸೇರುವುದೇ ಹಿನ್ನಲೆಯಾಗಿತ್ತು. ಈ ಹಿನ್ನಲೆಯಲ್ಲಿ ಗುರುವಾರದ ಕಾರ್ಯಾಚರಣೆ ವೇಳೆ ಜನರನ್ನು ನಿರ್ಬಂಧಿಸುವ ಜತೆಗೆ ಸುಂಕದಕಟ್ಟೆ-ಕೊಂಬಾರು ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿ ಕಾರ್ಯಾಚರಣೆ ನಡೆಸಿ ಯಶಸ್ವಿ ಮಾಡಲಾಗಿದೆ. ಕಾರ್ಯಾಚರಣೆ ಹಾಗೂ ಸಾಕಾನೆ ಸಾಗಿರುವ ವ್ಯಾಪ್ತಿಯಲ್ಲಿ ಮೆಸ್ಕಾಂ ವತಿಯಿಂದ ಲೈನ್ ಆಫ್ ಮಾಡಿ ಮುಂಜಾಗ್ರತೆ ವಹಿಸಲಾಗುತ್ತಿದೆ.
ಸೋಮವಾರ ಬೆಳಗ್ಗೆ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಬಳಿಯ ನೈಲ ಎಂಬಲ್ಲಿ ರಂಜಿತಾ (24) ಮತ್ತು ಆಕೆಯನ್ನು ರಕ್ಷಿಸಲು ಬಂದ ರಮೇಶ್ ರೈ (58) ಎಂಬವರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರೂ ಪ್ರಾಣ ಕಳೆದುಕೊಂಡಿದ್ದರು. ಘಟನೆಯಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ಕಾಡಾನೆ ಹಾವಳಿಗೆ ಶಾಶ್ವತ ಪರಿವಾರ ಆಗ್ರಹಿಸಿದ್ದರು. ಅದರಂತೆ ಅಂದು ಸಂಜೆಯೇ ಕಾಡಾನೆ ಸೆರೆಗೆ ಪೂರಕ ಕ್ರಮಕೈಗೊಂಡು ಆನೆ ಶಿಬಿರದಿಂದ ಐದು ಸಾಕಾನೆಗಳನ್ನು ಕಾರ್ಯಾಚರಣೆಗೆ ಕರೆಸಿಕೊಳ್ಳಲಾಗಿತ್ತು.
ಸ್ಥಳಾಂತರ ಬಳಿಕ ಮುಂದಿನ ಕಾರ್ಯಾಚರಣೆ: ಜಿಲ್ಲಾಧಿಕಾರಿ
ಜೀವ ಹಾನಿ ಹಾಗೂ ಕೃಷಿ ಹಾನಿಯ ಮೂಲಕ ಜನತೆಯನ್ನು ಭೀತಿಗೆ ತಳ್ಳಿದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಜನರಿನ್ನು ನಿರ್ಭೀತಿಯಿಂದ ಇರಬಹುದು. ಇನ್ನೂ ಕಾಡಾನೆಗಳು ಇರುವ ಬಗ್ಗೆ ಸ್ಥಳೀಯರು ತಿಳಿಸಿದ್ದು ಅವುಗಳನ್ನು ಸೆರೆ ಹಿಡಿಯುವ ಕಾರ್ಯ ನಡೆಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ತಿಳಿಸಿದ್ದಾರೆ.
ಕಡಬದಲ್ಲಿ ಕಾಡಾನೆ ಸೆರೆ ಯಶಸ್ವಿಯಾದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೊಡಗಿನ ಜನರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ..!
ಎರಡು ಜೀವ ಬಲಿ ತೆಗೆದುಕೊಂಡ ಆನೆಯನ್ನು ಕಡಬ ತಾಲೂಕಿನ ಕೊಂಬಾರಿನ ಮಂಡೆಕರ ಎಂಬಲ್ಲಿ ಸೆರೆ ಹಿಡಿಯಲಾಗಿದೆ. ಅದರ ದಂತ ಹಾಗೂ ಕಾಲಿನ ಬಾಗದಲ್ಲಿ ರಕ್ತದ ಕಲೆ ಇರುವುದರಿಂದ ಇದೇ ಆನೆ ಇಬ್ಬರನ್ನು ಕೊಂದಿರುವುದು ಎಂಬುದು ಸ್ಪಷ್ಟಗೊಂಡಿದೆ. ಗಂಡು ಆನೆ ಇದಾಗಿದೆ. ಸೆರೆ ಹಿಡಿಯಲಾದ ಆನೆ ವ್ಯಘ್ರಗೊಂಡಿದ್ದು, ಸೆರೆ ಹಿಡಿಯದೇ ಇರುತ್ತಿದ್ದಲ್ಲಿ ಇನ್ನೂ ಹಚ್ಚಿನ ಸಮಸ್ಯೆ ಮಾಡುವ ಸಾಧ್ಯತೆಯಿತ್ತು ಎಂದು ಅಋೂರು ಮಾಹಿತಿ ನೀಡಿದ್ದಾರೆ.