ಚುನಾವಣೆಯಲ್ಲಿ ಬಹುಮತ ಪಡೆದು ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ :ಸಿ.ಎಸ್‌.ಪುಟ್ಟರಾಜು

ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ. ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ಸತ್ಯ. ನಿಮ್ಮ ಮನೆಯ ಮಗ ಸಿ.ಎಸ್‌.ಪುಟ್ಟರಾಜು ಸರ್ಕಾರದಲ್ಲಿ ಇರಬೇಕಾದರೆ ಅತಿಹೆಚ್ಚಿನ ಮತಗಳಿಂದ ಆಯ್ಕೆಯಾಗಲು ದುದ್ದ ಹೋಬಳಿ ಮತದಾರರು ಸಾಕ್ಷಿಯಾಗಬೇಕು ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ, ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

The JDS government came to power after winning the election snr

 ಮಂಡ್ಯ : ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ. ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ಸತ್ಯ. ನಿಮ್ಮ ಮನೆಯ ಮಗ ಸಿ.ಎಸ್‌.ಪುಟ್ಟರಾಜು ಸರ್ಕಾರದಲ್ಲಿ ಇರಬೇಕಾದರೆ ಅತಿಹೆಚ್ಚಿನ ಮತಗಳಿಂದ ಆಯ್ಕೆಯಾಗಲು ದುದ್ದ ಹೋಬಳಿ ಮತದಾರರು ಸಾಕ್ಷಿಯಾಗಬೇಕು ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ, ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

ತಾಲೂಕಿನ ದುದ್ದ ಹೋಬಳಿಯ ಬೇವುಕಲ್ಲು ಗ್ರಾಪಂ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾ​ತ​ನಾ​ಡಿ, ದುದ್ದ ಹೋಬಳಿಯೊಂದಿಗೆ ನನಗೆ ವಿಶೇಷವಾದ ನಂಟಿದೆ. ಹೋಬಳಿಯ ಜನತೆಯ ಋುಣ ನನ್ನ ಮೇಲಿದೆ ಎಂದರು.

ಈಗಾಗಲೇ ಈ ಭಾಗದ 54 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದಿರುವ 20ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಬೇಕಿದೆ. ಆ ಕೆಲಸ ನಿರಂತರವಾಗಿ ಆಗಬೇಕಾದರೆ ನಿಮ್ಮ ಮನೆ ಮಗ ಪುಟ್ಟರಾಜು ಮತ್ತೊಮ್ಮೆ ಗೆಲ್ಲಬೇಕು. ದುದ್ದ ಹೋಬಳಿ ಮಾದರಿಯಾಗಿ ಅಭಿವೃದ್ಧಿಪಡಿಸಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯುತ್ತಮ ಅಭಿವೃದ್ಧಿ ಕೆಲಸ ಮಾಡಬೇಕಾಗಿದೆ ಎಂದರು.

ನಾನು ಸಚಿವನಾಗಿದ್ದ ವೇಳೆ ಆರು ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಾಯಿತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ಕೆಲಸ ನಿಲ್ಲಿಸಲು ಸಾಧ್ಯವಾಗಲಿಲ್ಲ. ಕ್ಷೇತ್ರದ ಒಂದೊಂದು ಹೋಬಳಿಗೆ ಮೂರು ಸಬ್‌ ಸ್ಟೇಷನ್‌ ಮಾಡಲಾಗಿದೆ ಎಂದರು.

ಮೇಲುಕೋಟೆ ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರನ್ನು ಎದುರಿಸಿದರೆ ಈ ಪುಟ್ಟರಾಜು ಸಹಿಸಲು ಸಾಧ್ಯವಿಲ್ಲ. ಮನುಷ್ಯನಿಗೆ ಯಾವುದು ಶಾಶ್ವತ ಅಲ್ಲ. ಒಳ್ಳೆಯ ನಡವಳಿಕೆ ಮುಖ್ಯ. ಹಾಗಾಗಿ ಯಾವುದೇ ಅಹಿತಕರ ನಡವಳಿಕೆ ಯಾರಿಗೂ ಬೇಡ ಎಂದರು.

ಮನ್ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರು ಮಾತನಾಡಿ, ದುದ್ಧ ಹೋಬಳಿಯ ಹಳ್ಳಿಗಾಡಿಗೆ ಹೇಮಾವತಿ ಹಾಗೂ ಕಾವೇರಿ ನೀರು ತಂದುಕೊಟ್ಟವರು ಸಿ.ಎಸ್‌.ಪುಟ್ಟರಾಜು. ಅಭಿವೃದ್ಧಿ ಪರ ಚಿಂತನೆ ಮಾಡುವ ಶಾಸಕರು ನಮಗೆ ಬೇಕು. ಎಚ್ಡಿಕೆ ಸರ್ಕಾರದಲ್ಲಿ ಪುಟ್ಟರಾಜು ಅವರನ್ನು ಮತ್ತೊಮ್ಮೆ ಮಂತ್ರಿಯಾಗಿ ನೋಡಲು ಅತಿ ಹೆಚ್ಚು ಮತ ಕೊಟ್ಟು ಅವರ ಕೈ ಬಲಪಡಿಸಬೇಕು ಎಂದರು.

ಇದಕ್ಕೂ ಮೊದಲು ಬೇವುಕಲ್ಲು ಗ್ರಾಮದಲ್ಲಿ ಶಾಸಕ ಪುಟ್ಟರಾಜು ಅವರನ್ನು ಮಹಿಳೆಯರು ಪೂರ್ಣಕುಂಭ ಹೊತ್ತು, ಡೊಳ್ಳು ಕುಣಿತ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ, ವಿವಿಧ ಹಾರ ಹಾಕಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು.

ಈ ವೇಳೆ ಜೆಡಿಎಸ್‌ ಸಿದ್ಧಾಂತವನ್ನು ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ವಿವಿಧ ಪಕ್ಷಗಳ ಮುಖಂಡರು ಶಾಸಕ ಪುಟ್ಟರಾಜು ನೇತೃತ್ವದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು. ಗ್ರಾಮದ ಜನತೆ ಪುಟ್ಟರಾಜು ಅವರ ಚುನಾವಣೆ ಖರ್ಚಿಗಾಗಿ ದೇಣಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಶಿವಕುಮಾರ್‌, ಮಾಜಿ ಅಧ್ಯಕ್ಷ ವಿಶೇಶ್ವರಯ್ಯ, ಜೆಡಿಎಸ್‌ ತಾಲೂಕು ಅಧ್ಯಕ್ಷ ಎಸ್‌.ಮಲ್ಲೇಶ್‌, ತಾಪಂ ಮಾಜಿ ಸದಸ್ಯ ಎಚ್‌.ಬಿ.ಬೆಟ್ಟಸ್ವಾಮಿ, ಮುಖಂಡರಾದ ಶಿವಲಿಂಗಪ್ಪ, ಸಿ.ಬಸವರಾಜ…, ಸುರೇಶ್‌, ಹೊಳಲು ಯೋಗೇಶ್‌, ಎಂ.ಮಾದೇಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios