Asianet Suvarna News Asianet Suvarna News

ಪತ್ನಿಯ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ ಪತಿ

ಪಿರಿಯಾಪಟ್ಟಣ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಬುಧವಾರ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

The husband killed his wife by strangling her snr
Author
First Published Nov 24, 2023, 8:33 AM IST

  ರಾವಂದೂರು :  ಪಿರಿಯಾಪಟ್ಟಣ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಬುಧವಾರ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೊನ್ನೇನಹಳ್ಳಿ ಗ್ರಾಮದ ಕುಮಾರ ಎಂಬಾತ ತನ್ನ ಪತ್ನಿ ಪ್ರೇಮಾ (36) ಎಂಬವರನ್ನು ಕೊಲೆ ಮಾಡಿರುವ ಆರೋಪಿ.

ಕುಮಾರ್ ಮುಮ್ಮಡಿಕಾವಲು ಗ್ರಾಮದವನಾಗಿದ್ದು, ಈತ 18 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದು, ಹೊನ್ನೇನಹಳ್ಳಿ ಗ್ರಾಮದಲ್ಲಿ ವಾಸವಿದ್ದರು. ಇವರಿಗೆ ಪ್ರಜ್ವಲ್ ಮತ್ತು ಪ್ರವೀಣ್ ಎಂಬ ಮಕ್ಕಳಿದ್ದಾರೆ.

ಕುಮಾರ್ ಪ್ರತಿದಿನ ಕುಡಿದು ಬಂದು ಪತ್ನಿಯೊಂದಿಗೆ ಜಗಳ ವಾಡುತ್ತಿದ್ದ, ಬುಧವಾರ ಮಧ್ಯರಾತ್ರಿಯಲ್ಲಿ ಸಹ ಜಗಳ ತೆಗೆದಿದ್ದು, ಬೆಳಗಿನ ಜಾವ 4.30ರ ಸಮಯದಲ್ಲಿ ಮಕ್ಕಳ ಎದುರಲ್ಲೇ ಟವೆಲ್ನಿಂದ ಕುತ್ತಿಗೆ ಬಿಗಿದು ಕೊಲೆಗೈದು ಪರಾರಿಯಾಗಿದ್ದ ಎಂದು ಮೃತ ಪ್ರೇಮಾ ಅವರ ಸಹೋದರ ಚೆಲುವರಾಜು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿದ್ದ ಆರೋಪಿಯನ್ನು ಹುಡುಕಿ ಬಂಧಿಸಿದ್ದಾರೆ.

ಆರೋಪಿಯನ್ನು ಸ್ಥಳಕ್ಕೆ ಕರೆಸುವವರೆಗೂ ಮೃತದೇಹವನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಸ್ಥಳೀಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದು, ಸಂಜೆಯವರೆಗೂ ವಾಗ್ವಾದ, ಮಾತಿನ ಚಕಮಕಿ ನಡೆದಿತ್ತು. ತದನಂತರ ಸಿಪಿಐ ಶ್ರೀಧರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಗ್ರಾಮಸ್ಥರಿಗೆ ಕಾನೂನಿನ ಅರಿವು ಮೂಡಿಸಿ ಮನವೊಲಿಸಿ ಶವವನ್ನು ಶವಾಗಾರಕ್ಕೆ ಸಾಗಿಸಲಾಯಿತು. 

ಕೃತ್ಯ ನಡೆದ ಸ್ಥಳಕ್ಕೆ ಡಿವೈಎಸ್ಪಿ ಗೋಪಾಲಕೃಷ್ಣ, ಇನ್ಸ್ಪೆಕ್ಟರ್ಕೆ.ವಿ. ಶ್ರೀಧರ್ಭೇಟಿ ನೀಡಿ ಪರಿಶೀಲಿಸಿದರು.

ಸುಂದರವಾಗಿದ್ದೀಯಾ ಎಂದು ಹೆಂಡತಿಯನ್ನೇ ಕೊಂದ

ಕೋಲಾರ (ನ.22): ತನ್ನ ಹೆಂಡತಿ ನೋಡೋಕೆ ಸುಂದರವಾಗಿದ್ದಾಳೆ ಅಂತ ನಿನ್ನಷ್ಟೇ ಸುಂದರವಾದ ಆಭರಣ ಹಾಗೂ ಹಣವನ್ನು ನಿನ್ನ ತವರು ಮನೆಯಿಂದ ತರಬೇಕು ಎಂದು ವರದಕ್ಷಿಣೆ ಕಿರುಕುಳ ಕೊಟ್ಟ ಗಂಡ, ತನ್ನ ಮುದ್ದಾದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ. 

ಪತ್ನಿಯ ಕತ್ತು ಹಿಸುಕಿ ಪತ್ನಿಯೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೃತ ಮಹಿಳೆಯ ಕುಟುಂಬಸ್ಥರಿಂದ ಆಕೆಯ ಗಂಡನ ಮೇಲೆ ಆರೋಪ ಮಾಡಲಾಗಿದೆ. ಕೋಲಾರದ ಮಿಲ್ಲತ್ ನಗರದಲ್ಲಿ ಘಟನೆ ನಡೆದಿದೆ. ಮಿಲ್ಲತ್ ನಗರದ ಮಾಹೇನೂರ್ ( 22) ಮೃತ ಮಹಿಳೆಯಾಗಿದ್ದಾಳೆ. ಗಂಡ ಸಯ್ಯದ್ ಶುಹೇಬ್ ಕೊಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಮದುವೆ ಮಾಡಿಕೊಟ್ಟ ನಂತರ ವರದಕ್ಷಿಣೆ ಕಿರುಕುಳ ಕೊಟ್ಟು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಮಹಿಳೆ ಮನೆಯವರು ದೂರು ನೀಡಿದ್ದಾರೆ.

ಚಿತ್ರದುರ್ಗವನ್ನೇ ಬೆಚ್ಚಿಬೀಳಿಸಿದ ಮಚ್ಚಿನೇಟು: ಬಸ್‌ ನಿಲ್ದಾಣದಲ್ಲಿ ಪತ್ನಿಯನ್ನು ಕೊಚ್ಚಿ ಹಾಕಿದ ಸೈಕೋ ಪತಿ

ಕಳೆದ ಎರಡು ವರ್ಷಗಳ ಹಿಂದೆ ಮದುವೆ ಮಾಹೇನೂರ್‌ ಹಾಗೂ ಸಯ್ಯದ್‌ ಶುಹೇಬ್‌ಗೂ ಮದುವೆಯಾಗಿತ್ತು. ಆರಂಭದಲ್ಲಿ ಹೆಂಡತಿಯೊಂದಿಗೆ ಚೆನ್ನಾಗಿಯೇ ಇದ್ದ ಪತಿ ಕೆಲವೇ ದಿನಗಳಲ್ಲಿ ತನ್ನ ವರಸೆಯನ್ನು ಬದಲಿಸಿದ್ದಾನೆ. ನೀನು ಸುಂದರವಾಗಿದ್ದೀಯ, ಆದರೆ ಹಣವನ್ನು ತಂದಿಲ್ಲ. ನೀನು ನಿನ್ನ ತವರು ಮನೆಯಿಂದ ಹಣ ಹಾಗೂ ಆಭರಣ ತರಬೇಕು ಎಂದು ನಿರಂತರವಾಗಿ ಕಿರುಕುಳ ನೀಡುತ್ತಿದ್ದನಂತೆ. ಈಗ ಇದೇ ವರದಕ್ಷಿಣೆ ವಿಚಾರವಾಗಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಘಟನೆ ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Follow Us:
Download App:
  • android
  • ios